For Quick Alerts
  ALLOW NOTIFICATIONS  
  For Daily Alerts

  ದರ್ಶನ್-ಯಶ್-ಅಂಬರೀಶ್ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ ಸುಮಲತಾ

  |
  ಚುನಾವಣೆ ಮುಗಿದ ಮೇಲೂ ಯಾರನ್ನೂ ಮರೆತಿಲ್ಲ ಸುಮಲತಾ..!? | FILMIBEAT KANNADA

  ಅಂತೂ ಇಂತೂ ಮಂಡ್ಯ ಎಲೆಕ್ಷನ್ ಮುಗಿದಿದೆ. ಇನ್ನೇನಿದ್ರೂ ಗೆದ್ದಿದ್ದು ಯಾರು ಎಂದು ತಿಳಿಯಬೇಕಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾನ ಅಥವಾ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಗೆ ಜನಾಭಿಮತ ಸಿಕ್ಕಿದ್ಯಾ ಎಂದು ಮೇ 23ಕ್ಕೆ ಗೊತ್ತಾಗಲಿದೆ.

  ಇದೀಗ, ಮಂಡ್ಯ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತು, ತಮ್ಮದೇ ಎಲೆಕ್ಷನ್ ಎಂದು ನಡೆಸಿಕೊಟ್ಟ ನಟ ದರ್ಶನ್ ಮತ್ತು ಯಶ್ ಗೆ ಕೃತಜ್ಞತೆ ತಿಳಿಸಿದ್ದಾರೆ. ಕೇವಲ ಸ್ಟಾರ್ ನಟರಿಗೆ ಮಾತ್ರವಲ್ಲ, ಜೋಡೆತ್ತುಗಳ ಅಭಿಮಾನಿ ಬಳಗಕ್ಕೂ ಅಂಬಿ ಪತ್ನಿ ಧನ್ಯವಾದ ತಿಳಿಸಿದ್ದಾರೆ.

  ಈ ಕಾರಣಕ್ಕಾಗಿ ಮಂಡ್ಯದಲ್ಲಿ ಸುಮಲತಾ ಗೆಲ್ಲಬೇಕಂತೆ: ದರ್ಶನ್ ಪತ್ನಿ ಟ್ವೀಟ್

  ತಮ್ಮ ಫೇಸ್ ಬುಕ್ ಖಾತೆ ಮೂಲಕ ಕೃತಜ್ಞತೆ ತಿಳಿಸಿರುವ ಸುಮಲತಾ ಹೀಗೆ ಬರೆದುಕೊಂಡಿದ್ದಾರೆ. 'ನಾನು ವಿಶೇಷವಾಗಿ ಧನ್ಯವಾದಗಳನ್ನು ಹೇಳಬೇಕಾಗಿರುವುದು ದರ್ಶನ್ ಅಭಿಮಾನಿಗಳಿಗೆ ಮತ್ತು ಯಶ್ ಅಭಿಮಾನಿಗಳಿಗೂ .ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿರುವ ಕ್ಯಾಬ್ ಮತ್ತು ಆಟೊ ಡ್ರೈವರ್ಸ್ ಅಷ್ಟೇ ಅಲ್ಲದೆ ಹೋಟೆಲ್ಗಳಲ್ಲಿ ಹಾಗೂ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನೀವೆಲ್ಲರೂ ಅಂದರೆ ಮಂಡ್ಯದವರು ತುಂಬಾ ತುಂಬಾ ಅಂದರೆ ನಿಮ್ಮದೇ ಮನೆಯ ಚುನಾವಣೆಯ ರೀತಿಯಲ್ಲಿ ನನ್ನ ಚುನಾವಣೆಯನ್ನು ಪರಿಗಣಿಸಿ ನಡೆಸಿ ಕೊಟ್ಟಿದ್ದೀರಿ ನಿಮಗೆಲ್ಲರಿಗೂ ನನ್ನ ಅಂತರಾಳದ ಅಭಿನಂದನೆಗಳು ಕೃತಜ್ಞತೆಗಳು'' ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

  ನಿಖಿಲ್ ಮತ್ತು ಸುಮಲತಾ ಮುಖಾಮುಖಿ, ಆಮೇಲೆ ಬೆಂಬಲಿಗರ ಮಾರಾಮಾರಿ

  ಇನ್ನು ಅಂಬರೀಶ್ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿರುವ ಸುಮಲತಾ, ನೀವೆಲ್ಲಾ ನಮ್ಮ ಮನೆ ಸದಸ್ಯರು ಇದ್ದಂತೆ ಎಂದಿದ್ದಾರೆ. 'ತುಂಬಾ ಅಭಿಮಾನಿಗಳದ್ದು ಒಂದೇ ಪ್ರಶ್ನೆ ಅಂಬರೀಶ್ ಅಭಿಮಾನಿಗಳಿಗೆ ನೀವು ಕೃತಜ್ಞತೆ ಸಲ್ಲಿಸಿಲ್ಲ ಅಂತ ...ಅಂಬರೀಶ್ ಅಭಿಮಾನಿಗಳಿಗೆ ಹೇಗೆ ನಾನು ಕೃತಜ್ಞತೆ ಸಲ್ಲಿಸಲಿ ಯಾವ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ ..ಮನೆಯ ಸದಸ್ಯರು ಅಂಬರೀಶ್ ಅಭಿಮಾನಿಗಳು.. ಗೊತ್ತು ನನಗೆ ರಾಜ್ಯದ ಮೂಲೆ ಮೂಲೆಗಳಿಂದ ಅಂಬರೀಶ್ ಅಭಿಮಾನಿಗಳು ನನ್ನ ಈ ನಡೆಯನ್ನು ಮೆಚ್ಚಿ ನನ್ನನ್ನು ಹುರಿದುಂಬಿಸಿದ್ದಾರೆ ..ಮಂಡ್ಯದ ಜನತೆಯಲ್ಲಿ ಸದಾ ವಿನಂತಿಸಿಕೊಂಡಿದ್ದಾರೆ ಅಮ್ಮನನ್ನು ಗೆಲ್ಲಿಸಿ ಅತ್ತಿಗೆಯನ್ನು ಗೆಲ್ಲಿಸಿ ಅಕ್ಕನನ್ನು ಗೆಲ್ಲಿಸಿ ಎಂದು ...ಈ ಪ್ರೀತಿ ಸಂಪಾದನೆ ಅಂಬರೀಶ್ ಆಸ್ತಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ನನ್ನ ಧರ್ಮ ..'

  'ಮಂಡ್ಯ ಅಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ': ಸಿಎಂಗೆ ಯಶ್ ಸವಾಲ್

  'ಅಂಬರೀಶ್ ಅನ್ನುವ ಶಕ್ತಿಯೊಂದಿಗೆ ದರ್ಶನ್ . ಯಶ್ ಅನ್ನುವ ಶಕ್ತಿಯೂ ಒಟ್ಟಾಗಿದೆ ...ಈಗ ಪ್ರತಿಯೊಬ್ಬರೂ ನಮ್ಮ ಮನೆಯ ಸದಸ್ಯರೇ ..ಆ ಸದಸ್ಯರಲ್ಲಿ ಯಾವುದೇ ಭೇದ ಭಾವಗಳಿಲ್ಲ ಎಲ್ಲರೂ ಒಟ್ಟಾಗಿ ನನ್ನ ಬೆಂಗಾವಲಾಗಿ ನಿಂತು ನನ್ನನ್ನು ಬೆಂಬಲಿಸಿದ್ದೀರಿ ...ಅಷ್ಟೇ ಅಲ್ಲದೆ ನನ್ನ ಈ ನಡೆಯನ್ನು ನನ್ನ ಹೋರಾಟವನ್ನು ಮೆಚ್ಚಿ ಸಾಕಷ್ಟು ಜನ ರಾಜ್ಯದ ಮೂಲೆ ಮೂಲೆಗಳಿಂದ ನನ್ನನ್ನು ಬೆಂಬಲಿಸಿದ್ದಾರೆ ಅವರಿಗೂ ನನ್ನ ವಿಶೇಷವಾದ ಕೃತಜ್ಞತೆಗಳು' ಎಂದು ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ.

  English summary
  Mandya independent candidate sumalatha ambareesh says thank to darshan, yash fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X