»   » ಕಂಬಿ ಎಣಿಸುತ್ತಿದ್ದಾರೆ ಪವರ್ ಸ್ಟಾರ್ ಪುನೀತ್!

ಕಂಬಿ ಎಣಿಸುತ್ತಿದ್ದಾರೆ ಪವರ್ ಸ್ಟಾರ್ ಪುನೀತ್!

Posted By:
Subscribe to Filmibeat Kannada

'ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೈಲಿನಲ್ಲಿದ್ದಾರೆ. ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾರೆ.' ಅರೇ..!! ಅಂತ ಗಾಬರಿ ಆಗುವ ಮುನ್ನ ಇದು ರೀಲ್ ಸುದ್ದಿ ಅನ್ನೋದು ನಿಮಗೆ ನೆನಪಿರಲಿ.

'ರಣವಿಕ್ರಮ' ಚಿತ್ರದ ನಂತ್ರ ಪುನೀತ್ ರಾಜ್ ಕುಮಾರ್ 'ದೊಡ್ಮನೆ ಹುಡುಗ' ಶೂಟಿಂಗ್ ನಲ್ಲಿ ಬಿಸಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. 'ದೊಡ್ಮನೆ ಹುಡುಗ' ಅಡ್ಡದಿಂದ ಬಂದಿರುವ ಲೇಟೆಸ್ಟ್ ಫೋಟೋ ಇಲ್ಲಿದೆ ನೋಡಿ....

Sumalatha and Ambareesh shoots for 'Dodmane Huduga'

ನೀವು ನೋಡುತ್ತಿರುವಂತೆ ಇದು ಜೈಲಿನ ಸನ್ನಿವೇಶ. 'ದೊಡ್ಮನೆ ಹುಡುಗ' ಅಂತ ಹೆಸರಿಟ್ಟ ಮಾತ್ರಕ್ಕೆ ಸಿನಿಮಾದಲ್ಲಿ ರಿಚ್ನೆಸ್ ಜಾಸ್ತಿ ಅಂತ ಊಹಿಸಿಕೊಂಡವರಿಗೆ ಈ ಫೋಟೋ ಬೇರೆ ಕಥೆಯನ್ನೇ ಹೇಳುತ್ತದೆ. ['ದೊಡ್ಮನೆ ಹುಡುಗ' ಪುನೀತ್ ಡೈಲಾಗ್ ಏನು ಗೊತ್ತಾ?]

Sumalatha and Ambareesh shoots for 'Dodmane Huduga'

ಸೀದಾ ಸಾದಾ ಹುಡುಗನಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಮೊದಲ ಬಾರಿಗೆ ಅಪ್ಪು ಜೊತೆ ನಟಿ ಸುಮಲತಾ ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ರಂಗಾಯಣ ರಘು ಇದ್ದಾರೆ. [ಅಣ್ಣಾವ್ರ ಲುಕ್ ನಲ್ಲಿ 'ದೊಡ್ಮನೆ ಹುಡುಗ' ಪುನೀತ್]

Sumalatha and Ambareesh shoots for 'Dodmane Huduga'

ವರ್ಷಗಳ ನಂತ್ರ ಸುಮಲತಾ ಮತ್ತು ಅಂಬರೀಶ್ ಒಟ್ಟಾಗಿ ನಟಿಸುತ್ತಿರುವುದು 'ದೊಡ್ಮನೆ ಹುಡುಗ' ಚಿತ್ರದ ಮತ್ತೊಂದು ವಿಶೇಷ. ಭಾರತಿ ವಿಷ್ಣುವರ್ಧನ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಪುನೀತ್ ರಾಜ್ ಕುಮಾರ್ ಗೆ ರಾಧಿಕಾ ಪಂಡಿತ್ ಜೋಡಿಯಾಗಿದ್ದಾರೆ. ಮೊದಲ ನೋಟಕ್ಕೆ ಪಕ್ಕಾ ಹಳ್ಳಿ ಕಥೆಯಂತೆ ಕಾಣುವ ಈ ಚಿತ್ರದ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ. [ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ]

English summary
Power Star Puneeth Rajkumar starrer 'Dodmane Huduga' shooting in Progress. For the first time, Actress Sumalatha is sharing screen space with Puneeth Rajkumar. Here, are the few Exclusive pictures of 'Dodmane Huduga'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada