For Quick Alerts
  ALLOW NOTIFICATIONS  
  For Daily Alerts

  'ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಪ್ರಾಣವೇ ಆಗಿದ್ದರು'- ಸುಮಲತಾ

  |

  ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ಇಡೀ ಚಿತ್ರರಂಗಕ್ಕೆ ಮಾದರಿ. ಫ್ರೆಂಡ್ಸ್ ಹೇಗಿರಬೇಕು ಅಂದ್ರೆ ವಿಷ್ಣು-ಅಂಬಿಯಂತಿರಬೇಕು ಎನ್ನುತ್ತಾರೆ ಎಲ್ಲರೂ. ಈ ಇಬ್ಬರು ಮಹಾನ್ ಕಲಾವಿದರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅವರ ನೆನಪುಗಳು ಸದಾ ಚಿರಸ್ಮರಣೀಯವಾಗಿದೆ.

  ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ. ವಿಷ್ಣುದಾದ ಜನುಮದಿನಕ್ಕೆ ಇಡೀ ಸ್ಯಾಂಡಲ್‌ವುಡ್ ಶುಭಕೋರಿದೆ. ಅಂಬರೀಶ್ ಅವರ ಪತ್ನಿ, ವಿಷ್ಣುವರ್ಧನ್ ಅವರ ಸ್ನೇಹಿತೆಯೂ ಆಗಿದ್ದ ಸುಮಲತಾ ಸಹ ದಾದಾರನ್ನು ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ....

  ವಿಷ್ಣುದಾದಾ ಹುಟ್ಟುಹಬ್ಬಕ್ಕೆ ಸಿಎಂ ಸೇರಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಶುಭಾಶಯ

  ವಿಷ್ಣು ಅಂದರೆ ಸ್ನೇಹ

  ವಿಷ್ಣು ಅಂದರೆ ಸ್ನೇಹ

  ''ವಿಷ್ಣು ಅಂದರೆ ಸ್ನೇಹ, ಅವರೊಂದಿಗೆ ಕಳೆದ ಪ್ರತಿಯೊಂದು ಕ್ಷಣ ಸಂತೋಷದ ಅವಿಸ್ಮರಣೀಯ ಅನುಭವ. ನಿಷ್ಕಲ್ಮಶ, ಮಗುವಿನಂತಹ ಮನಸ್ಸು ಅವರದು'' ಎಂದು ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ.

  ಅವರಿಬ್ಬರೂ ಸದಾ ಅಮರ

  ಅವರಿಬ್ಬರೂ ಸದಾ ಅಮರ

  ''ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಅವರ ಪ್ರಾಣವೇ ಆಗಿದ್ದರು. ಅವರಿಬ್ಬರೂ ಸದಾ ಅಮರ. ನಮ್ಮ ಪ್ರೀತಿಯ ವಿಷ್ಣುವಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ಸುಮಲತಾ ಶುಭಕೋರಿದ್ದಾರೆ. ಜೊತೆಗೆ ವಿಷ್ಣುವರ್ಧನ್, ಅಂಬರೀಶ್ ಅವರು ಆತ್ಮೀಯವಾಗಿದ್ದ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

  'ವಿಷ್ಣು ಸಹೋದರ ರವಿ ಹೇಳಿದ 'ಆ ಮಾತು' ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ'

  ದರ್ಶನ್ ಶುಭಾಶಯ

  ದರ್ಶನ್ ಶುಭಾಶಯ

  ''ಅಭಿನಯ ಭಾರ್ಗವ, ನಮ್ಮೆಲರ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ರವರ 70ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.

  ಸತೀಶ್ ನೀನಾಸಂ

  ಸತೀಶ್ ನೀನಾಸಂ

  ''ಲೆಕ್ಕವಿಲ್ಲದಷ್ಟು ನಿಮ್ಮ ಹಾಡುಗಳು ನನ್ನ ಅಚ್ಚುಮೆಚ್ಚು,ಬಾಲ್ಯದಿಂದ ನಿಮ್ಮೆಲ್ಲ ಸಿನಿಮಾಗಳು ನಮಗೆ ಟ್ರೆಂಡು...'' ಎಂದು ನಟ ಸತೀಶ್ ನೀನಾಸಂ ವಿಶ್ ಮಾಡಿದ್ದಾರೆ.

  English summary
  Mandya Mp and actress Sumalatha, Challening star darshan take to Twitter to remember Late Dr. Vishnuvardhan on birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X