Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಸರು ಹೇಳದೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ವಾಗ್ದಾಳಿ
ಸಂಸದೆ ಸುಮಲತಾ-ಸಂಸದ ಪ್ರತಾಪ್ ಸಿಂಹ ನಡುವಿನ ಶೀಥಲ ಸಮರ ಮುಂದುವರೆದಿದೆ. ಇಂದು (ನವೆಂಬರ್ 24) ಮದ್ದೂರಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ನಡೆದ ಅಂಬಿ ಗುಡಿ ಅನಾವರಣ ಕಾರ್ಯಕ್ರಮದಲ್ಲಿ ಸುಮಲತಾ ಅವರು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದಾರೆ.
''ಅಂಬಿ ಹೆಸರು ಹೇಳದೆ ಮಾತನಾಡಲು ಬರುವುದಿಲ್ಲ'' ಎಂದಿದ್ದವರಿಗೆ ಹೇಳುತ್ತಿದ್ದೇನೆ, ನಾನು ಅಂಬಿ ಹೆಸರು ಯಾಕೆ ಬಳಸಬಾರದು, ನನ್ನ ಹೆಸರಲ್ಲೇ ಅಂಬಿ ಹೆಸರಿದೆ' ಎಂದರು ಅಬ್ಬರಿಸಿದರು ಸುಮಲತಾ.
ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬಿ ಗುಡಿ: ಹಬ್ಬದಲ್ಲಿ ಪಾಲ್ಗೊಂಡ ದರ್ಶನ್, ಸುಮಲತಾ
'ಅಂಬಿ ಹೆಸರೇ ನನ್ನ ಸ್ಫೂರ್ತಿ, ಅಂಬರೀಶ್ ಹೆಸರೇ ನನ್ನ ಧೈರ್ಯ' ಎಂದ ಸುಮಲತಾ ಪರೋಕ್ಷವಾಗಿ ಪ್ರತಾಪ್ ಸಿಂಹ ಹೇಳಿಕಗೆ ಟಾಂಗ್ ನೀಡಿದರು.
ಮಂಡ್ಯ ಸಂಸದೆ ಸುಮಲತಾ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಏನೇ ಕೆಲಸ ಇದ್ದರೂ ನನ್ನ ಬಳಿ ಹೇಳಿ ಎಂದು ಪ್ರತಾಪ್ ಸಿಂಹ ಫೋನಿನಲ್ಲಿ ಹೇಳುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಇದಕ್ಕೆ ಸಂಸದೆ ಸುಮಲತಾ, 'ಅಂಬರೀಶ್ ಇದ್ದಾಗ ತುಟಿ ಬಿಚ್ಚಲು ಹೆದರುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ' ಎಂದು ಸುಮಲತಾ ಹೇಳಿದ್ದರು.
ಅಂಬರೀಶ್ ಅವರ ಎರಡನೇ ಪುಣ್ಯಸ್ಮರಣೆಯಾದ ಇಂದು ಸಂಸದ ಪ್ರತಾಪ್ ಸಿಂಹ ಇಂದು ಅಂಬರೀಶ್ ಅವರನ್ನು ನೆನೆಸಿ ಟ್ವೀಟ್ ಮಾಡಿದ್ದಾರೆ.