»   »  ಲಾಯರ್ ಅಮ್ಮನಿಗೆ ತಕ್ಕ ಮಗನಾದ ಅಜಯ್.!

ಲಾಯರ್ ಅಮ್ಮನಿಗೆ ತಕ್ಕ ಮಗನಾದ ಅಜಯ್.!

Posted By:
Subscribe to Filmibeat Kannada

ಕೃಷ್ಣ ಅಜೇಯ್ ರಾವ್ ಅಭಿನಯದ 25ನೇ ಚಿತ್ರ ಸೆಟ್ಟೇರಿದೆ. ಶಶಾಂಕ್ ಸಿನಿಮಾಸ್ ನಿರ್ಮಾಣದಲ್ಲಿ ಪ್ರಾರಂಭವಾಗಿರುವ 'ತಾಯಿಗೆ ತಕ್ಕ ಮಗ' ಅಜೇಯ್ ರಾವ್ ಅಭಿನಯದ 25ನೇ ಸಿನಿಮಾವಾಗಿದೆ. ಆಶಿಕಾ ರಂಗನಾಥ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಸುಮಾರು ವರ್ಷಗಳ ನಂತರ ಅಜೇಯ್ ಹಾಗೂ ಸುಮಲತಾ ಕಾಂಬಿನೇಷನ್ ಮತ್ತೆ ತೆರೆ ಮೇಲೆ ಬರಲಿದೆ.

ಟೈಟಲ್ ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ 'ತಾಯಿಗೆ ತಕ್ಕ ಮಗ' ಚಿತ್ರತಂಡ ಇಂದು ಸುಮಲತಾ ಪಾತ್ರವನ್ನ ರಿವೀಲ್ ಮಾಡಿದೆ. ಸಿನಿಮಾದಲ್ಲಿ ಸುಮಲತಾ ಅಂಬರೀಶ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಶಾಂಕ್ ಜೊತೆಯಲ್ಲಿ ಹಲವಾರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ವೇದ್ ಗುರು ಎಂಬ ನವ ನಿರ್ದೇಶಕ 'ತಾಯಿಗೆ ತಕ್ಕ ಮಗ' ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.

 Sumalatha plays lawyer in 'Thayige Thakka Maga'

ಇದೇ ತಿಂಗಳ 11 ರಿಂದ (ಡಿಸೆಂಬರ್ 11) ಚಿತ್ರೀಕರಣ ಶುರುವಾಗಲಿದೆ, ಶಶಾಂಕ್ ಸಿನಿಮಾಸ್ ನಿರ್ಮಾಣದಲ್ಲಿ ಸೆಟ್ಟೇರುತ್ತಿರುವ ಮೊದಲ ಚಿತ್ರ 'ತಾಯಿಗೆ ತಕ್ಕ ಮಗ'. ಜೂಡಾ ಸ್ಯಾಂಡಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಜೇಯ್ ಅಭಿನಯದ 25ನೇ ಚಿತ್ರ ಹಾಗೂ ಶಶಾಂಕ್ -ಅಜೇಯ್ ರ ಹ್ಯಾಟ್ರಿಕ್ ಕಾಂಬಿನೇಶನ್ ಕೂಡ ಇದೇ ಸಿನಿಮಾ ಮೂಲಕ ಆಗುತ್ತಿರುವುದು ಖುಷಿಯ ವಿಚಾರವಾಗಿದೆ.

English summary
Sumalatha plays lawyer in Kannada Movie 'Thayige Thakka Maga'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada