Just In
Don't Miss!
- News
ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
- Sports
ಐಎಸ್ಎಲ್: ನಾರ್ತ್ಈಸ್ಟ್ vs ಮೋಹನ್ ಬಾಗನ್, Live ಸ್ಕೋರ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಂಡ್ಯದಲ್ಲಿ ಬಾಲಕಿಯ ಅತ್ಯಾಚಾರ: ಸಂಸದೆ ಸುಮಲತಾ ಖಂಡನೆ
ಮಂಡ್ಯದ ಮದ್ದೂರಿನ ತಾಲೂಕಿನಲ್ಲಿ ಹುರುಗಲವಾಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಘಟನೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ''ಈ ಕೃತ್ಯ ನನಗೆ ಸಹಿಸಲಾಗದ ನೋವು ಹಾಗೂ ಆಘಾತ ತಂದಿದೆ'' ಎಂದು ಮರುಗಿದ್ದಾರೆ. ''ಒಂದು ಹೆಣ್ಣಾಗಿ ಹಾಗೂ ಒಬ್ಬ ತಾಯಿಯಾಗಿ ಹುರುಗಲವಾಡಿಯ ಅಮಾನವೀಯ ಕೃತ್ಯ ನನಗೆ ಸಹಿಸಲಾಗದ ನೋವು ಹಾಗೂ ಆಘಾತ ತಂದಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಆ ಮಗಳ ಪೋಷಕರಿಗೆ ಸಾಂತ್ವಾನ ಹಾಗೂ ಪರಿಹಾರ ಕೇವಲ ಒಂದು ಔಪಚಾರಿಕ ಕೆಲಸವಾಗಬಾರದು. ಇಂತಃ ಘಟನೆಗಳು ಮತ್ತೆ ನಡೆಯದಂತೆ ಏನು ಕ್ರಮ ಕೈಗೊಳ್ಳಬಹುದೆಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ.'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

ಕಠಿಣ ಶಿಕ್ಷೆಯ ಮೂಲಕ ಎಚ್ಚರಿಕೆ ಸಂದೇಶ ನೀಡಬೇಕು
ಈ ಘಟನೆ ಬಗ್ಗೆ ಸುದೀಪ್ ಟ್ವಿಟ್ಟರ್ ಮೂಲಕ ಖಂಡಿಸಿದ್ದು ''ಈ ಕೇಸ್‌ನಲ್ಲಿ ಬಾಲಕಿಗೆ ನ್ಯಾಯ ಸಿಗುತ್ತದೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಭಾವಿಸಿದ್ದೇನೆ. ಈ ಮೂಲಕ ಅತ್ಯಾಚಾರಿಗಳಿಗೆ ಭಯಾನಕ ಸಂದೇಶ ರವಾನೆಯಾಗಲಿದೆ'' ಎಂದಿದ್ದಾರೆ.
ಮಂಡ್ಯ ಕಬ್ಬಿನ ಗದ್ದೆಯಲ್ಲಿ ಬಾಲಕಿ ಸಾವು: ನ್ಯಾಯಕ್ಕೆ ಒತ್ತಾಯಿಸಿದ ಸುದೀಪ್

ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲ
''ಮಂಡ್ಯ ಜಿಲ್ಲೆ, ಮದ್ದೂರ್ ತಾಲುಕು, "ಆರತಿ" ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ ಅಸಹ್ಯವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ, ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರು ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು, ಈ ಭೂಮಿಯ ದುರಂತ'' ಎಂದು ನಟ ಸತೀಶ್ ನೀನಾಸಂ ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ವಿವರ
ಮದ್ದೂರಿನ ಹುರುಗಲ ವಾಡಿ ಗ್ರಾಮದ ರೈತ ಚೆಲುವರಾಜ್ ಅವರ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಮೂಲದ ಬಾಲಕಿ ಗದ್ದೆಯಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದಳು. ಈ ವೇಳೆ ಆಕೆಯನ್ನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ನ್ಯಾಯಕ್ಕಾಗಿ ಗ್ರಾಮಸ್ಥರಿಂದ ಪ್ರತಿಭಟನೆ
ಮೃತ ಬಾಲಕಿಯ ದೇಹವನ್ನು ಅಂತ್ಯ ಸಂಸ್ಕಾರಕ್ಕೆಂದು ಹೊಸಪೇಟೆಯ ಮೂಲ ಊರಿಗೆ ತೆಗೆದುಕೊಂಡು ಹೋದಾಗ ಗ್ರಾಮಸ್ಥರು ಬಾಲಕಿ ಶವವನ್ನು ಮುಂದಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಡಿಸಿ ನಕುಲ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.