For Quick Alerts
  ALLOW NOTIFICATIONS  
  For Daily Alerts

  ನೀನು ನಡೆದಿದ್ದೇ ದಾರಿ: ದರ್ಶನ್ ಗೆ ಜೋಶ್ ತುಂಬಿದ ಸುಮಲತಾ

  |

  ''ಹೇ ಕ್ಯಾಡ್ಬರೀಸ್, ಆನೆ ನಡೆದಿದ್ದೇ ದಾರಿ....ಬರ್ತಾ ಇದ್ದೀನಿ....ತಾಕತ್ ಇದ್ರೆ ಕಟ್ಟಾಕೋ....'' ಇದು ಯಜಮಾನ ಟ್ರೈಲರ್ ನಲ್ಲಿರೋ ಮಾಸ್ ಡೈಲಾಗ್. ಅಲ್ಲಿಗೆ ದರ್ಶನ್ ಅವರ ಹೆಜ್ಜೆ ಆನೆ ಹೆಜ್ಜೆಯಿದ್ದಂತೆ ಎಂಬುದನ್ನ ಬಣ್ಣಿಸುತ್ತದೆ.

  ಇದೀಗ, ದರ್ಶನ್ ಹೆಜ್ಜೆಯ ಬಗ್ಗೆ ನಟಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ. ಯಜಮಾನ ಟ್ರೈಲರ್ ನೋಡಿ ಮೆಚ್ಚಿಕೊಂಡಿರುವ ಸುಮಲತಾ, ''ನೀನು ನಡೆದಿದ್ದೇ ದಾರಿ...ಕಾಯ್ತಾ ಇದ್ದೀನಿ'' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಭಿಷೇಕ್ ಚಿತ್ರಕ್ಕೆ ದರ್ಶನ್ ಹೇಗೆ ಜೊತೆಯಾಗಿ ನಿಂತಿದ್ದಾರೆ ಎಂದು ಕೂಡ ಒಂದೇ ಪದದಲ್ಲಿ ತಿಳಿಸಿದ್ದಾರೆ.

  'ಯಜಮಾನ'ನಿಗೆ ಪ್ರೀತಿಯ ಉಡುಗೊರೆ ನೀಡಿದ ಸುನಿ 'ಬಜಾರ್'

  ''ಅಭಿಷೇಕ್ ಪಾಲಿಗೆ ದೊಡ್ಡ ಅಣ್ಣ ಹಾಗೂ ದೊಡ್ಡ ಸ್ಫೂರ್ತಿ ದರ್ಶನ್. ನನಗೆ ಯಾವಾಗಲೂ ಡಾರ್ಲಿಂಗ್. ನೀನು ನಡೆದಿದ್ದೇ ದಾರಿ. ಅದಕ್ಕಾಗಿ ಕಾಯ್ತಾ ಇದ್ದೀನಿ. ಹಾಗೆ, ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ವಿಶ್ ಮಾಡ್ತೀದ್ದೀನಿ'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.

  ಪ್ರೀತಿಯ ತಮ್ಮನನ್ನು ಬೆಳೆಸಿ ಎಂದು ಕೇಳಿಕೊಂಡ ದರ್ಶನ್

  ಪ್ರೇಮಿಗಳ ದಿನದ ಪ್ರಯುಕ್ತ ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದ್ದು, ಈ ಬಗ್ಗೆ ದರ್ಶನ್ ಕೂಡ ಟ್ವೀಟ್ ಮಾಡಿದ್ದರು. ''ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ 'ಅಮರ್' ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ'' ಎಂದು ವಿನಂತಿಸಿದ್ದಾರೆ.

  ಇನ್ನು 15 ಮಿಲಿಯನ್ ವೀಕ್ಷಣೆ ಕಂಡು ಮುನ್ನುಗ್ಗುತ್ತಿರುವ ಯಜಮಾನ ಟ್ರೈಲರ್ ಸತತ ಮೂರನೇ ದಿನವೂ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಶೈಲಜಾ ನಾಗ್ ನಿರ್ಮಾಣ ಮಾಡಿದ್ದು, ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್ ನಾಯಕಿಯರಾಗಿ ನಟಿಸಿದ್ದಾರೆ. ಮಾರ್ಚ್ 1 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

  English summary
  Kannada actress Sumalatha ambareesh has taken her twitter account to wish darshan's yajamana trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X