For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ರಾಜವೀರ ಮದಕರಿನಾಯಕ' ಚಿತ್ರದಲ್ಲಿ ಸಂಸದೆ ಸುಮಲತಾ?

  |
  'ಗಂಡುಗಲಿ ಮದಕರಿ ನಾಯಕ' ಚಿತ್ರದಲ್ಲಿ ಸುಮಲತಾ ಪಾತ್ರ ಯಾವುದು ಗೊತ್ತಾ.| SUMALATHA | DARSHAN | MADAKARI

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ 'ರಾಜವೀರ ಮದಕರಿನಾಯಕ' ಸಿನಿಮಾದ ಮುಹೂರ್ತ ಇಂದು ಬೆಳ್ಳಂಬೆಳಗ್ಗೆ ನೆರವೇರಿದೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ 'ರಾಜವೀರ ಮದಕರಿನಾಯಕ' ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದುವರೆಗೂ ಚಿತ್ರಕ್ಕೆ 'ಗಂಡುಗಲಿ ಮದಕರಿನಾಯಕ' ಎಂದು ಹೇಳಲಾಗುತ್ತಿತ್ತು. ಆದರೆ ಇವತ್ತು ಚಿತ್ರದ ಅಧಿಕೃತ ಟೈಟಲ್ ಬಹಿರಂಗವಾಗಿದೆ.

  ವಿಶೇಷ ಅಂದರೆ 'ರಾಜವೀರಾ ಮದಕರಿನಾಯಕ' ಚಿತ್ರದಲ್ಲಿ ಹಿರಿಯ ನಟಿ, ಸಂಸದೆ ಸುಮಲತಾ ಅಭಿನಯಿಸುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸುಮಲತಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಲತಾ ನಟಿಸುತ್ತಿದ್ದಾರೆ ಅಂದರೆ ಸಂಸದೆ ಆದ ನಂತರ ಮೊದಲ ಬಾರಿಗೆ ಬಣ್ಣಹಚ್ಚುತ್ತಿದ್ದಾರೆ.

  'ಗಂಡುಗಲಿ ಮದಕರಿ ನಾಯಕ' ಚಿತ್ರದ ಟೈಟಲ್ ಅಲ್ಲ: ಅಧಿಕೃತ ಟೈಟಲ್ ಬಹಿರಂಗ'ಗಂಡುಗಲಿ ಮದಕರಿ ನಾಯಕ' ಚಿತ್ರದ ಟೈಟಲ್ ಅಲ್ಲ: ಅಧಿಕೃತ ಟೈಟಲ್ ಬಹಿರಂಗ

  ಇಂದು ಬೆಳಗ್ಗೆ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಲತಾ ಅವರನ್ನು ಮಾಧ್ಯಮದವರು ಈ ಬಗ್ಗೆ ಕೇಳಿದಾಗ "ನೀವು ನಿರ್ದೇಶಕರನ್ನು ಕೇಳಬೇಕು, ನಾನು ಹೇಳಲಿಕ್ಕೆ ಆಗಲ್ಲ" ಎಂದು ಹೇಳಿದ್ದಾರೆ. ಇನ್ನು ಪಕ್ಕದಲ್ಲಿ ಇದ್ದ ದರ್ಶನ್ "ಸಿನಿಮಾಗೆ ಪ್ರಮುಖ ಪಾತ್ರ ಮಾತ್ರವಲ್ಲ, ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

  ಸುಮಲತಾ ಅಭಿನಯದ ಬಗ್ಗೆ ಚಿತ್ರತಂಡ ಇನ್ನು ಅಧಿಕೃತ ಗೊಳಿಸಿಲ್ಲ. ಆದರೆ ಚಿತ್ರದಲ್ಲಿ ಸುಮಲತ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು. ರಾಜವೀರ ಮದಕರಿನಾಯಕ ಚಿತ್ರಕ್ಕೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್, ರಾಕ್ ಲೈನ್ ವೆಂಕಟೇಶ್ ನಿರ್ಮಾಣ, ಹಸಲೇಖ ಸಂಗೀತ, ಅಶೋಕ್ ಕಶ್ಯಪ್ ಛಾಯಾಗ್ರಹಣ ಬಿಟ್ಟರೆ ಸದ್ಯಕ್ಕೆ ಇನ್ಯಾರು ಫೈನಲ್ ಆಗಿಲ್ಲ.

  ಇಂದಿನಿಂದ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ಪಾತ್ರಕ್ಕಾಗಿ ದರ್ಶನ್ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಚಿತ್ರೀಕರಣಕ್ಕೆ ಚಿತ್ರದುರ್ಗದಲ್ಲಿ ಕೋಟಿ ಕೋಟಿ ವೆಚ್ಚದ ಅದ್ದೂರಿ ಸೆಟ್ ಕೂಡ ನಿರ್ಮಾಣವಾಗುತ್ತಿದೆ. ಸಧ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದ್ದು ದರ್ಶನ್ ರಾಜವೀರ ಮದಕರಿನನಾಯಕನಾಗಿ ಆಳ್ವಿಕೆ ಮಾಡಲಿದ್ದಾರೆ.

  English summary
  Actress Sumalatha will play the important role in Darshan starrer Rajaveera Madakari Nayaka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X