»   » 'ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್

'ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್

Posted By:
Subscribe to Filmibeat Kannada

ನಟಿ ಸುಮನ್ ನಗರ್ಕರ್ ಗೊತ್ತಲ್ವಾ.? 'ಹೂಮಳೆ', 'ನಮ್ಮೂರ ಮಂದಾರ ಹೂವೆ', 'ನಿಷ್ಕರ್ಷ', 'ಬೆಳದಿಂಗಳ ಬಾಲೆ' ಚಿತ್ರಗಳಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಸುಮನ್ ನಗರ್ಕರ್ ನೆನಪಿದ್ದಾರೆ ತಾನೆ.?

ಸ್ಯಾಂಡಲ್ ವುಡ್ ನಲ್ಲಿ ಹಿಟ್ ಸಿನಿಮಾಗಳನ್ನ ನೀಡಿದ ಬಳಿಕ ಅಮೆರಿಕಗೆ ಹಾರಿದ ನಟಿ ಸುಮನ್ ನಗರ್ಕರ್ ಇದೀಗ ಮರಳಿ ಗಾಂಧಿನಗರಕ್ಕೆ ಬಂದಿದ್ದಾರೆ. ಅದು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರಕ್ಕಾಗಿ. [ದೇಸಾಯಿ ಅವರ 'ತಂದಾನ ತಂದನಾನ' ಈಗ 'ಯಕ್ಷಪ್ರಶ್ನೆ'!]

ಹೌದು, ಬರೋಬ್ಬರಿ ಒಂದು ದಶಕದ ನಂತರ ನಟಿ ಸುಮನ್ ನಗರ್ಕರ್ ಬಣ್ಣ ಹಚ್ಚಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಆಕ್ಷನ್ ಕಟ್ ಹೇಳುತ್ತಿರುವ '...ರೇ' ಚಿತ್ರದಲ್ಲಿ ಸುಮನ್ ಮಿಂಚಲಿದ್ದಾರೆ. ಮುಂದೆ ಓದಿ....

'...ರೇ' ಚಿತ್ರದಲ್ಲಿ ಸುಮನ್ ಪಾತ್ರವೇನು?

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ '...ರೇ' ಚಿತ್ರದ ಹಾಡೊಂದರಲ್ಲಿ ಸುಮನ್ ನಗರ್ಕರ್ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಕೇವಲ ಒಂದು ನಿಮಿಷ ಮಾತ್ರ ಕಾಣಿಸಿಕೊಳ್ಳುವ ಸುಮನ್, ಲಾಂಗ್ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚುವುದಕ್ಕೆ ಕಾರಣ ಸುನೀಲ್ ಕುಮಾರ್ ದೇಸಾಯಿ ಅಂತ ಹೇಳ್ತಾರೆ.

ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದಲ್ಲೂ ಅಭಿನಯ

ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದಲ್ಲಿ ದೊಡ್ಡೇರಿ ವೆಂಕಟಗಿರಿರಾವ್ ಅವರ 'ಇಷ್ಟಕಾಮ್ಯ' ಸಣ್ಣಕಥೆ ಆಧರಿತ ಚಿತ್ರದಲ್ಲೂ ಸುಮನ್ ನಗರ್ಕರ್ ನಟಿಸಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ.

ಅವಕಾಶ ಸಿಕ್ಕರೆ ಬಿಡಲ್ಲ.!

ಅಮೆರಿಕದಲ್ಲೇ ಸೆಟ್ಲ್ ಆಗಿರುವ ಸುಮನ್ ನಗರ್ಕರ್ ಗೆ ಈಗಲೂ ನಟಿಸುವ ಆಸೆ ಇದೆ. ಉತ್ತಮ ಅವಕಾಶ ಸಿಕ್ಕರೆ ಖಂಡಿತವಾಗಲೂ ನಟಿಸುವುದಾಗಿ ಸುಮನ್ ನಗರ್ಕರ್ ಹೇಳ್ತಾರೆ.

ಸುನೀಲ್ ಕುಮಾರ್ ದೇಸಾಯಿ ಪರಿಚಯಿಸಿದ ಪ್ರತಿಭೆ

ಸುಮನ್ ನಗರ್ಕರ್ ಬಣ್ಣ ಹಚ್ಚುವುದಕ್ಕೆ ಕಾರಣ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. 'ನಿಷ್ಕರ್ಷ' ಚಿತ್ರದ ಮೂಲಕ ಸುಮನ್ ನಗರ್ಕರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಸುಮನ್ ನಗರ್ಕರ್ ನಟಿಸಿದ ಚಿತ್ರಗಳು

'ನಿಷ್ಕರ್ಷ', 'ಅಮ್ಮಾವ್ರ ಗಂಡ', 'ಬೆಳದಿಂಗಳ ಬಾಲೆ', 'ನಮ್ಮೂರ ಮಂದಾರ ಹೂವೆ', 'ಹೂ ಮಳೆ', 'ದೋಣಿ ಸಾಗಲಿ', 'ಮುಂಗಾರಿನ ಮಿಂಚು' ಚಿತ್ರಗಳಲ್ಲಿ ಸುಮನ್ ನಗರ್ಕರ್ ಅಭಿನಯಿಸಿದ್ದಾರೆ.

ಮದುವೆ ಆದ ನಂತ್ರ ಅಮೆರಿಕಾದಲ್ಲಿ ವಾಸ

ಉದ್ಯಮಿ ಗುರುದೇವ್ ನಾಗರಾಜ್ ರವರನ್ನ ವಿವಾಹವಾದ ಬಳಿಕ ಸುಮನ್ ನಗರ್ಕರ್ Folsom, California ದಲ್ಲಿ ಸೆಟ್ಲ್ ಆಗಿದ್ದಾರೆ.

English summary
Kannada Actress Suman Nagarkar is making her comeback to Kannada films with Kannada Director Sunil Kumar Desai directorial '..Re'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada