For Quick Alerts
  ALLOW NOTIFICATIONS  
  For Daily Alerts

  'ಸುಂದರಾಂಗ ಜಾಣ'ನ ಜೊತೆ 'ಜಾನ್ ಜಾನಿ ಜನಾರ್ಧನ್' ಆಗಮನ

  By Bharath Kumar
  |

  ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿದೆ. ಇವರೆಡು ಸಿನಿಮಾಗಳು ಬಿಗ್ ಸ್ಟಾರ್ ಕಾಸ್ಟಿಂಗ್ ಹೊಂದಿದ್ದು, ತಮ್ಮದೇ ಆದ ವಿಶೇಷತೆಗಳಿಂದ ಸಿನಿರಿಸಿಕರನ್ನ ಮೋಡಿ ಮಾಡಿದೆ.

  ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಬೇಕಿದ್ದ 'ಜಾನ್ ಜಾನಿ ಜಾನಾರ್ಧನ್' ಚಿತ್ರ, ಕಾರಣಾಂತರಗಳಿಂದ ಮುಂದಕ್ಕೆ ಹೋಗಿತ್ತು. ಈಗ ಎರಡು ವಾರದ ನಂತರ ಮತ್ತೆ ಥಿಯೇಟರ್ ಗೆ ಬರುವ ಸಿದ್ದತೆ ಮಾಡಿಕೊಂಡಿದೆ. ಮತ್ತೊಂದೆಡೆ 'ಜಾನ್ ಜಾನಿ ಜಾನಾರ್ಧನ್' ಸಿನಿಮಾಗೆ ಕಾಂಪಿಟೇಷನ್ ಕೊಡೊದಕ್ಕೆ, ಇನ್ನೊಂದು ದೊಡ್ಡ ಸಿನಿಮಾ ರೆಡಿಯಾಗಿ ನಿಂತಿದೆ.['ಜಾನ್ ಜಾನಿ ಜನಾರ್ಧನ್' ರಿಲೀಸ್ ಡೇಟ್ ಪಕ್ಕಾ ಆಯ್ತು]

  ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸುಂದರಾಂಗ ಜಾಣ' ಚಿತ್ರವೂ ಬಿಡುಗಡೆಗೆ ಸಿದ್ದವಾಗಿದ್ದು, ಈಗಾಗಲೇ ಚಿತ್ರಮಂದಿರಗಳನ್ನ ಕಾಯ್ದಿರಿಸಿದೆ. ಮುಂದೆ ಓದಿ...

  ಡಿಸೆಂಬರ್ 9ಕ್ಕೆ ಡಬಲ್ ಧಮಾಕ

  ಡಿಸೆಂಬರ್ 9ಕ್ಕೆ ಡಬಲ್ ಧಮಾಕ

  ಸ್ಯಾಂಡಲ್ ವುಡ್ ಪ್ರಿಯರಿಗೆ ಡಿಸೆಂಬರ್ 9ರಂದು ಡಬಲ್ ಧಮಾಕ ಸಿಗಲಿದೆ. ಗಣೇಶ್ ಅಭಿನಯದ 'ಸುಂದರಾಂಗ ಜಾಣ' ಹಾಗೂ ಗುರುದೇಶ ಪಾಂಡೇ ನಿರ್ದೇಶನದ 'ಜಾನ್ ಜಾನಿ ಜಾನಾರ್ಧನ್' ಚಿತ್ರಗಳು ಪ್ರೇಕ್ಷಕರೆದರು ಬರಲಿದೆ.[ಡಿಸೆಂಬರ್ ನಲ್ಲಿ ದೂರದಿಂದ ಬರ್ತಾನೆ 'ಸುಂದರಾಂಗ ಜಾಣ']

  ಮಲ್ಟಿಸ್ಟಾರ್ ಸಿನಿಮಾ 'ಜಾನ್ ಜಾನಿ ಜಾನಾರ್ಧನ್'

  ಮಲ್ಟಿಸ್ಟಾರ್ ಸಿನಿಮಾ 'ಜಾನ್ ಜಾನಿ ಜಾನಾರ್ಧನ್'

  ಗುರುದೇಶ ಪಾಂಡೇ ನಿರ್ದೇಶನದ 'ಜಾನ್ ಜಾನಿ ಜಾನಾರ್ಧನ್' ಮಲ್ಟಿಸ್ಟಾರ್ ಸಿನಿಮಾ. ಚಿತ್ರದಲ್ಲಿ ಮೂವರು ನಾಯಕರಿದ್ದು, ಅಜಯ್ ರಾವ್, ಲೂಸ ಮಾದ ಯೊಗೀಶ್, ಮದರಂಗಿ ಕೃಷ್ಣ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮುಂಬೈ ಮೂಲದ ರೂಪದರ್ಶಿ ಕಾಮ್ನಾ ರಣಾವತ್ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪರಿಚಯವಾಗಿದ್ದಾರೆ.

  ವಿಶೇಷ ಪಾತ್ರದಲ್ಲಿ ಮಾಲಾಶ್ರೀ

  ವಿಶೇಷ ಪಾತ್ರದಲ್ಲಿ ಮಾಲಾಶ್ರೀ

  'ಜಾನಿ ಜಾನ್ ಜನಾರ್ಧನ್' ಚಿತ್ರದಲ್ಲಿ ನಟಿ ಮಾಲಾಶ್ರೀ ಖಡಕ್ ಪೊಲೀಸ್ ಆಫೀಸರ್ ಆಗಿ ಬಣ್ಣ ಹಚ್ಚಿದ್ದಾರೆ. ಇನ್ನೂ ಉಳಿದಂತೆ ಶ್ರೀನಿವಾಸ್ ಮೂರ್ತಿ, ಗಿರಿಜಾ ಲೋಕೇಶ್, ಲಕ್ಷ್ಮಿ ದೇವಮ್ಮ, ಬ್ಯಾಂಕ್ ಜನಾರ್ಧನ್ ಹಾಗೂ ದಿವಂಗತ ಹಾಸ್ಯ ನಟ ಸಂಕೇತ್ ಕಾಶಿ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಆರ್ ಪಿಕ್ಚರ್ಸ್ (ಮುತ್ತಪ್ಪ ರೈ ಬ್ಯಾನರ್) ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  'ಸುಂದರಾಂಗ ಜಾಣ'ನಾಗಿ ಗಣೇಶ್

  'ಸುಂದರಾಂಗ ಜಾಣ'ನಾಗಿ ಗಣೇಶ್

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಾನ್ವಿ ಶ್ರೀವತ್ಸವ್ ಅಭಿನಯದ 'ಸುಂದರಾಂಗ ಜಾಣ' ರಿಲೀಸ್ ಡೇಟ್ ಪಕ್ಕಾ ಮಾಡಿದೆ. ತೆಲುಗಿನ 'ಭಲೇ ಭಲೇ ಮಗಾಡಿವೂಯ್' ಚಿತ್ರದ ರಿಮೇಕ್ ಆಗಿರುವ ಈ ಚಿತ್ರ, ಕನ್ನಡದಲ್ಲಿ ಕುತೂಹಲ ಹೆಚ್ಚಿಸಿದೆ.

  ರಮೇಶ್ ಅರವಿಂದ್ ಡೈರೆಕ್ಷನ್

  ರಮೇಶ್ ಅರವಿಂದ್ ಡೈರೆಕ್ಷನ್

  'ಸುಂದರಾಂಗ ಜಾಣ' ಚಿತ್ರಕ್ಕೆ ಖ್ಯಾತ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ದೇವರಾಜ್, ರವಿಶಂಕರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ.

  English summary
  Golden Star Ganesh starrer Kannada Movie 'Sundaranga Jaana' and Kannada Actor Ajay Rao, Actor Yogesh and Actor Krishna Multi-starrer Kannada Movie 'John Jaani Janardhan' Both are releasing on December 9th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X