For Quick Alerts
  ALLOW NOTIFICATIONS  
  For Daily Alerts

  SSLC ಫಲಿತಾಂಶ ನೋಡಿದ್ಮೇಲೆ ಸುನಿ ಟ್ವೀಟ್ ಕೂಡ ಒಮ್ಮೆ ನೋಡಿ

  |

  ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳೆಲ್ಲರೂ ತುಂಬಾ ಖುಷಿಯಾಗಿದ್ದಾರೆ. ಅದರಲ್ಲೂ ಅತಿ ಹೆಚ್ಚು ಅಂಕಗಳನ್ನ ಪಡೆದ ಟಾಪರ್ ಗಳ ಸಂತೋಷಕ್ಕೆ ಪಾರವೇ ಇಲ್ಲ.

  ಎಸ್.ಎಸ್.ಎಲ್.ಸಿ ಫಲಿತಾಂಶದ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ. ಪಾಸ್ ಆದವರಿಗೆ ಒಳ್ಳೆಯದಾಗಲಿ ಎಂದಿರುವ ಸುನಿ, ಫೇಲ್ ಆದವರಿಗೂ ಸಂದೇಶ ನೀಡಿದ್ದಾರೆ.

  SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾದ ನಾಗಾಂಜಲಿ ನಾಯ್ಕ

  ''ಪಾಸಾದವರಿಗೆ ಕಾಲೇಜು ತೆರೆದಿರುತ್ತದೆ... ಫೇಲಾದವರಿಗೆ ಚಿಂತೆ ಬೇಡ... ಜೀವನದಲ್ಲಿ ಬೇರೆಬೇರೆ ಮಗ್ಗಲುಗಳೇ ತೆರೆದಿರುತ್ತದೆ... Rank ಬಂದವರಿಗೆ.. ಪಾಸಾದವರಿಗೆಲ್ಲಾ ಶುಭಾಶಯಗಳು .. ನೀವು ನಮಗೆ ಹೆಮ್ಮೆ ಮತ್ತು ಸ್ಪೂರ್ತಿ ಫೇಲಾದವರು ನಮಗೆ #RCB ಇದ್ದಂತೆ... ತುಂಬಾ ಅಚ್ಚುಮೆಚ್ಚು ಮತ್ತು ಪ್ರೀತಿ'' ಎಂದು ಟ್ವೀಟ್ ಮಾಡಿದ್ದಾರೆ.

  SSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲ

  ಈ ಟ್ವೀಟ್ ತುಂಬಾ ಮಜವಾಗಿದ್ದು, ಪಾಸ್ ಆದವರಿಗಿಂತ ಫೇಲ್ ಆದವರಿಗೆ ಹೆಚ್ಚು ಇಷ್ಟವಾಗಬಹುದು. ಇನ್ನು ಕನ್ನಡದ ನಟ ಮತ್ತು ನಿರ್ದೇಶಕ ರಘುರಾಮ್ ಅವರ ಪುತ್ರಿ ನನಸು ಕೂಡ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 92ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಹೀಗಾಗಿ, ರಘುರಾಮ್ ಅವರ ಮಗಳಿಗೂ ಸುನಿ ವಿಶ್ ಮಾಡಿದ್ದಾರೆ.

  English summary
  Kannada director has taken his Twitter to wish Sslc students for their result.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X