For Quick Alerts
  ALLOW NOTIFICATIONS  
  For Daily Alerts

  ಸೆಟ್ಟೇರಿತು ಸುನೀಲ್ ಕುಮಾರ್ ದೇಸಾಯಿಯ ಹೊಸ ಚಿತ್ರ 'ಉದ್ಘರ್ಷ'

  By Bharath Kumar
  |

  ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಹೊಸ ಚಿತ್ರ 'ಉದ್ಘರ್ಷ' ಇತ್ತೀಚೆಗಷ್ಟೇ ಸೆಟ್ಟೇರಿದೆ. ಮಡಿಕೇರಿಯ ಕೋಟೆ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಮಾಡಿಕೊಂಡ ಸಿನಿಮಾ ಚಿತ್ರೀಕರಣ ಆರಂಭಿಸಿದೆ.

  ಚಿತ್ರದ ಮೊದಲ ದೃಶ್ಯಕ್ಕೆ ಉದ್ಯಮಿ ಪ್ರಕಾಶ್ ರಾವ್ ಸಾತೆ ಕ್ಲಾಪ್ ಮಾಡಿದರು. ಸಂಪತ್ ಕುಮಾರ್ ಕ್ಯಾಮೆರಾಗೆ ಚಾಲನೆ ನೀಡಿ ಚಿತ್ರಕ್ಕೆ ಶುಭಹಾರೈಸಿದರು.[ಸುನೀಲ್ ಕುಮಾರ್ ದೇಸಾಯಿಯ ಮತ್ತೊಂದು ಸಸ್ಪೆನ್ಸ್ ಚಿತ್ರ 'ಉದ್ಘರ್ಷ']

  ಬಾಡಿ ಬಿಲ್ಡಿಂಗ್ ನಲ್ಲಿ ಗೋಲ್ಡ್ ಮೆಡಲ್ ಗೆದ್ದುಕೊಂಡಿರುವ ಬಾಲಿವುಡ್ ನಟ ಅನೂಪ್ ಠಾಕೂರ್ ಸಿಂಗ್ ಈ ಚಿತ್ರದ ನಾಯಕ. ಕಬಾಲಿ ಚಿತ್ರದಲ್ಲಿ ರಜನಿಕಾಂತ್ ಮಗಳ ಪಾತ್ರ ನಿರ್ವಹಸಿದ್ದ ಸಾಯಿ ಧನ್ಸಿಕಾ ಈ ಚಿತ್ರದ ಮೂಲಕ ಕನ್ನಡಕ್ಕೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.[ಕನ್ನಡಕ್ಕೆ ಬಂದ 'ಕಬಾಲಿ' ಮಗಳು ಸಾಯಿ ಧನ್ಸಿಕಾ!]

  ಇನ್ನುಳಿದಂತೆ ಕರೀಷ್ಮಾ, ಬಾಲಿವುಡ್‌ನ ಖ್ಯಾತ ಖಳನಟ ಕಬೀರ್ ಸಿಂಗ್, ಬಾಹುಬಲಿ ಖ್ಯಾತಿಯ ಪ್ರಭಾಕರ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

  ಅಂದ್ಹಾಗೆ, ಈ ಚಿತ್ರವನ್ನ ಮಂಜುನಾಥ್ ಮತು ಸ್ನೇಹಿತರು ನಿರ್ಮಿಸುತ್ತಿದ್ದು, ಮೂವತ್ತು ದಿನಗಳ ಕಾಲ ಮಡಿಕೇರಿಯಲ್ಲೇ ಚಿತ್ರೀಕರಣ ನಡೆಯಲಿದೆಯಂತೆ. ರವಿ ವರ್ಮಾ ಸಾಹಸ ನಿರ್ದೇಶನ ಹಾಗೂ ವಿಷ್ಣು ವರ್ಧನ್ ಅವರ ಛಾಯಾಗ್ರಹಣ 'ಉದ್ಘರ್ಷ' ಚಿತ್ರಕ್ಕಿದೆ.

  English summary
  Kannada Movie 'Udgarsha' Launched at Madikeri Kote Ganapathi Temple. The Movie Directed by sunil kumar desai and features Thakur Anup Singh and Sai Dhansika

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X