»   » ಸುನೀಲ್ ಕುಮಾರ್ ದೇಸಾಯಿಯ ಮತ್ತೊಂದು ಸಸ್ಪೆನ್ಸ್ ಚಿತ್ರ 'ಉದ್ಘರ್ಷ'

ಸುನೀಲ್ ಕುಮಾರ್ ದೇಸಾಯಿಯ ಮತ್ತೊಂದು ಸಸ್ಪೆನ್ಸ್ ಚಿತ್ರ 'ಉದ್ಘರ್ಷ'

Posted By:
Subscribe to Filmibeat Kannada

'ರೇ'.....ಚಿತ್ರದ ನಂತರ ಸುನೀಲ್ ಕುಮಾರ್ ದೇಸಾಯಿ ಮತ್ತೊಂದು ಹೊಸ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. 'ಉದ್ಘರ್ಷ' ಎಂದು ಈ ಚಿತ್ರಕ್ಕೆ ಟೈಟಲ್ ಇಟ್ಟಿದ್ದು ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಟೈಟಲ್ ಮೂಲಕವೇ ಕುತೂಹಲ ಮೂಡಿಸಿರುವ 'ಉದ್ಘರ್ಷ' ನಿರೀಕ್ಷೆಯಂತೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಲವ್, ಸೆಂಟಿಮೆಂಟ್, ಆಕ್ಷನ್ ಹೀಗೆ ಎಲ್ಲವೂ ಒಳಗೊಂಡಿರುವ ಪಕ್ಕಾ ಕಮರ್ಷಿಯಲ್ ಸಿನಿಮಾವಂತೆ.

Sunil Kumar Desai Directional Udgarsha Movie Poster Release

ಅಂದ್ಹಾಗೆ, 'ಉದ್ಘರ್ಷ' ಚಿತ್ರದಲ್ಲಿ ಹೊಸ ಹೊಸ ಕಲಾವಿದರ ಜೊತೆಗೆ ದೊಡ್ಡ ತಾರಬಳಗವಿದೆ. ಬಾಲಿವುಡ್ ನಟ ಠಾಕೂರ್ ಅನೂಪ್ ಸಿಂಗ್ ಚಿತ್ರದ ನಾಯಕ. ಇತ್ತೀಗಷ್ಟೇ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರದಲ್ಲಿ ಇವರು ವಿಲನ್ ಪಾತ್ರವನ್ನ ನಿರ್ವಹಿಸಿದ್ದರು. ಇನ್ನು 'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಾಯಿ ಧನ್ಸಿಕಾ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ.

Sunil Kumar Desai Directional Udgarsha Movie Poster Release

ಉಳಿದಂತೆ ಕಬೀರ್ ಸಿಂಗ್ ದುಹಾನ್, 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸಿದ್ದ ಪ್ರಭಾಕರ್ ಕೂಡ ಸುನೀಲ್ ಕುಮಾರ್ ದೇಸಾಯಿ ಅವರ 'ಉದ್ಘರ್ಷ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ರವಿವರ್ಮ ಅವರ ಸಾಹವಿದ್ದು, ವಿಷ್ಣುವರ್ಧನ್ ಅವರ ಸಿನಿಮಾಟೋಗ್ರಫಿ ಇರಲಿದೆ. ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ.

Sunil Kumar Desai Directional Udgarsha Movie Poster Release

ಹೇಳಿ ಕೇಳಿ ಸುನೀಲ್ ಕುಮಾರ್ ದೇಸಾಯಿ ಅವರು ಸಸ್ಪೆನ್ಸ್ ಚಿತ್ರಗಳ ಸರದಾರ. 'ತರ್ಕ', 'ಉತ್ಕರ್ಷ', 'ಸಂಘರ್ಷ', 'ನಿಷ್ಕರ್ಷ', 'ಪ್ರಥ್ಯಾರ್ತ', 'ಮರ್ಮ', 'ಕ್ಷಣ ಕ್ಷಣ' ಅಂತಹ ಕುತೂಹಲಕಾರಿ ಚಿತ್ರಗಳು ಇವರ ನಿರ್ದೇಶದಲ್ಲಿ ಮೂಡಿಬಂದಿದೆ. ಈಗ ಅದೇ ರೀತಿ ಟೈಟಲ್ ನಲ್ಲಿ 'ಉದ್ಘರ್ಷ' ಅಂತ ಸಿನಿಮಾ ಮಾಡುತ್ತಿರುವುದು ಸಾಮಾನ್ಯವಾಗಿ ನಿರೀಕ್ಷೆ ಹೆಚ್ಚು ಮಾಡಿದೆ.

English summary
Kannada New Movie 'Udgarsha' Poster Release. The Movie Directed By Sunil Kumar Desai' and Thakur Anoop Singh are the Lead Role.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X