For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಮತ್ತೊಂದು ಮನವಿ

  |

  ಕೊರೊನಾ ವೈರಸ್‌ನಿಂದ ಸಿನಿಮಾರಂಗ ಸಂಕಷ್ಟದಲ್ಲಿದೆ, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಬೇಕು ಎಂದು ಅದಾಗಲೇ ಹಲವು ಮನವಿಗಳು ಮುಖ್ಯಮಂತ್ರಿಗೆ ಸಲ್ಲಿಕೆಯಾಗಿದೆ. ಇದೀಗ, ಮತ್ತೊಂದು ಹೊಸ ಮನವಿ ಸಿಎಂ ಕೈತಲುಪಿದೆ.

  ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇಂದು (ಮೇ 24) ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಸಿನಿಮಾ ರಂಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದರು.

  ಸಾರಾ ಗೋವಿಂದು-ತಾರಾ ಮನವಿ

  ಶನಿವಾರವಷ್ಟೆ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಹಾಗೂ ಹಿರಿಯ ನಟಿ ತಾರಾ ಅನುರಾಧ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚಿತ್ರರಂಗಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದರು.

  ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಭಾಮ ಹರೀಶ್, ಜೆಕೆಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಭಾಮ ಹರೀಶ್, ಜೆಕೆ

  ಟೇಶಿ ವೆಂಕಟೇಶ್ ಮನವಿ

  ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ 'ನಿರ್ದೇಶಕ ಮತ್ತು ತಂತ್ರಜ್ಞರು ಸೇರಿದಂತೆ ಸಿನಿ ಕಾರ್ಮಿಕರಿಗೆ ನೆರವು ಘೋಷಿಸಬೇಕು' ಎಂದು ಪತ್ರದ ಮೂಲಕ ವಿನಂತಿಸಿದ್ದರು.

  ಭಾಮ ಹರೀಶ್, ಜೆಕೆ ಮನವಿ

  ಅದಕ್ಕೂ ಮುಂಚೆ ವಾಣಿಜ್ಯ ಮಂಡಳಿಯ ಮಾಜಿ ಕಾಯದರ್ಶಿ ಭಾಮ ಹರೀಶ್ ಮತ್ತು ನಟ ಕಾರ್ತಿಕ್ ಜಯರಾಂ ಸಹ ಯಡಿಯೂರಪ್ಪರನ್ನು ಭೇಟಿ ಮಾಡಿ ಚಿತ್ರರಂಗಕ್ಕೆ ಸ್ಪಂದಿಸುವಂತೆ ಕೋರಿದ್ದರು.

  ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಸಾರಾ ಗೋವಿಂದು, ತಾರಾಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಸಾರಾ ಗೋವಿಂದು, ತಾರಾ

  Recommended Video

  ಜೀವನದಲ್ಲಿ ಕಳೆದುಕೊಂಡಿದ್ದೆಲ್ಲ ಬಿಗ್ ಬಾಸ್ ನಿಂದ ಮತ್ತೆ ಸಿಕ್ತು!! | Shubha Poonja | Filmibeat Kannada

  ಭಾನುವಾರ ಬೆಂಗಳೂರಿನಲ್ಲಿ ಕಲಾವಿದರಿಗೆ ಉಚಿತ ಕಿಟ್ ವಿತರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ''ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

  English summary
  Karnataka film academy president Sunil puranik request CM yediyurappa to Announce Special package to directors, technicians.
  Monday, May 24, 2021, 18:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X