twitter
    For Quick Alerts
    ALLOW NOTIFICATIONS  
    For Daily Alerts

    'ಎಕ್ಸ್‌ಕ್ಯೂಸ್ ಮಿ' ಸುನೀಲ್ ರಾವ್ ರೀ ಎಂಟ್ರಿ: 'ತುರ್ತು ನಿರ್ಗಮನ'ವೇ ಕಾರಣ!

    |

    ಟ್ರೈಲರ್, ಟೀಸರ್‌ನಿಂದಲೇ ಸಿನಿಮಾ ಹೇಗಿದೆ ಅನ್ನುವುದನ್ನು ಅಳೆದು ಬಿಡಬಹುದು. ಹೇಮಂತ್ ಕುಮಾರ್ ನಿರ್ದೇಶಿಸಿರುವ 'ತುರ್ತು ನಿರ್ಗಮನ' ಸಿನಿಮಾ ವಿಭಿನ್ನ ಹಾಗೂ ವಿಶೇಷ ಟ್ರೈಲರ್ ಎಲ್ಲರ ಮೆಚ್ಚುಗೆ ಗಳಿಸಿದ್ದು, ಈ ಸಿನಿಮಾ ಇದೇ ಜೂನ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    'ಎಕ್ಸ್ ಕ್ಯೂಸ್ ಮಿ' ಸಿನಿಮಾ ಕನ್ನಡಿಗರ ಮನದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. 'ಎಕ್ಸ್‌ಕ್ಯೂಸ್ ಮಿ' ಬಳಿಕ ನಟ ಸುನೀಲ್ ರಾವ್ ಸ್ಟಾರ್ ನಟರಾಗಿ ಹೊರಹೊಮ್ಮಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕೆಲವು ಗೆಲ್ಲಲಿಲ್ಲ. ಆದರೆ ಇದೀಗ ಹನ್ನೆರಡು ವರ್ಷಗಳ ನಂತರ ಮತ್ತೆ 'ತುರ್ತು ನಿರ್ಗಮನ' ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಈ ಸಿನಿಮಾ ಮೂಲಕ ಮತ್ತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    'ಎಕ್ಸ್‌ಕ್ಯೂಸ್ ಮಿ' ಸುನೀಲ್ ರಾವ್ ರೀ ಎಂಟ್ರಿ

    ಸಿನಿಮಾಗೆ ರೀ ಎಂಟ್ರಿ ಕೊಡುತ್ತಿರುವ ಸುನೀಲ್ ರಾವ್ ಮತ್ತೆ ಮರಳಿದ್ದೇಕೆ ಅನ್ನುವುದನ್ನು ಹೇಳಿದ್ದಾರೆ. "ನಿರ್ದೇಶಕ ಹೇಮಂತ್ ಕುಮಾರ್ ಹೇಳಿದ ಕಥೆ ಇಷ್ಟವಾಯಿತು. ಯಾರೇ ನಟರು ಕೇಳಿದ್ದರೂ, ಬೇಡ ಅನ್ನದಂತಹ ಕಥೆಯನ್ನು ಹೇಮಂತ್ ಕುಮಾರ್ ಹೆಣೆದಿದ್ದಾರೆ. ಆದರಿಂದ ನಾನು ಒಪ್ಪಿಕೊಂಡೆ. ನಾನು ಹನ್ನೆರಡು ವರ್ಷಗಳಿಂದ ಚಿತ್ರ ಮಾಡಿಲ್ಲ. ಆದರೆ, ಇಷ್ಟು ವರ್ಷಗಳ ಬಳಿಕ ಇಂತಹ ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ" ಎನ್ನುತ್ತಾರೆ ಸುನೀಲ್ ರಾವ್.

    Sunil Rao Started Second innings with Kannada Movie Thurthu Nirgamana

    'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದ ನಿರ್ದೇಶಕ ಹೇಮಂತ್ ರಾವ್ ಬಳಿ ಕೆಲಸ ಹೇಮಂತ್ ಕುಮಾರ್ ಕೆಲಸ ಮಾಡಿದ್ದರು. 'ತುರ್ತು ನಿರ್ಗಮನ'ದ ಬಳಿಕ ಇದು ಇವರ ಮೊದಲ ಸಿನಿಮಾ. "ಇದೇ ರೀತಿಯ ಕಥೆ ಆಧರಿಸಿ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ನನ್ನ ಚಿತ್ರತಂಡದ ಎಲ್ಲರ ಸಹಕಾರವನ್ನು ನೆನೆಯುತ್ತೇನೆ. ನಿಮ್ಮ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದೇನೆ ಎಂಬ ಭರವಸೆಯೊಂದಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತೇನೆ ಎನ್ನುತ್ತಾರೆ." ನಿರ್ದೇಶಕ ಹೇಮಂತ್ ಕುಮಾರ್.

    'ತುರ್ತು ನಿರ್ಗಮನ' ಪ್ರಯೋಗಾತ್ಮಕ ಸಿನಿಮಾ

    ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ಹಿತಾ ಚಂದ್ರಶೇಖರ್, ಸಂಯುಕ್ತ ಹೆಗ್ಡೆ, ಅಮೃತಾ, ಸುಧಾರಾಣಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. "ನಾವು ಬೇರೆ ಭಾಷೆಗಳಲ್ಲಿ ವಿಭಿನ್ನ ಕಥೆಯ ಚಿತ್ರಗಳು ಬಂದರೆ ಹೋಗಿ ನೋಡುತ್ತೇವೆ. "ತುರ್ತು ನಿರ್ಗಮನ" ಕೂಡ ಒಂದು ಪ್ರಯೋಗಾತ್ಮಕ ಚಿತ್ರ" ಎನ್ನುತ್ತಾರೆ ಹಿತ ಚಂದ್ರಶೇಖರ್.

    Sunil Rao Started Second innings with Kannada Movie Thurthu Nirgamana

    ಸಂಯುಕ್ತ ಹೆಗ್ಡೆ ಈ ಸಿನಿಮಾದಲ್ಲಿ ಕ್ರಿಕೆಟ್ ಕೋಚ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. "ಇದೊಂದು ವಿಷುವಲ್ ಟ್ರೀಟ್. ಗ್ರಾಫಿಕ್ ಅಂತು ಅದ್ಭುತ. ಹಾಗಾಗಿ ಇದನ್ನು ಮನೆಯಲ್ಲಿ ನೋಡುವುದಕ್ಕಿಂತ ಚಿತ್ರಮಂದಿರಕ್ಕೆ ಬಂದು ನೋಡಬೇಕು" ಅನ್ನೋದು ಸಂಯುಕ್ತ ಹೆಗಡೆ ಅಭಿಪ್ರಾಯ.

    'ಆನಂದ್ ಸಿನಿಮಾದಲ್ಲಿ ನಟಿಸಿದ್ದಷ್ಟೇ ಖುಷಿ ಆಯ್ತು'

    "ನಾನು ಚಿತ್ರರಂಗಕ್ಕೆ ಬಂದು ಮೂವತ್ತಾರು ವರ್ಷಗಳಾಯಿತು. ಬೇಕಾದಷ್ಟು ಚಿತ್ರಗಳಲ್ಲಿ ಬೇರೆ, ಬೇರೆ ಪಾತ್ರಗಳನ್ನು ಮಾಡಿದ್ದೀನಿ. ಆದರೆ ಈ ರೀತಿಯ ಪಾತ್ರ ಮಾಡಿರುವುದು ಇದೇ ಮೊದಲು. ನನ್ನ ಮೊದಲ ಚಿತ್ರ "ಆನಂದ್" ನಲ್ಲಿ ನಟಿಸಿದ್ದಾಗ ಆಗಿದ್ದ ಸಂತೋಷ ಈ ಚಿತ್ರದಲ್ಲಿ ನಟಿಸಿದ ಮೇಲೇ ಆಗಿದೆ." ಎನ್ನುತ್ತಾರೆ ಸುಧಾರಾಣಿ.

    Sunil Rao Started Second innings with Kannada Movie Thurthu Nirgamana

    ಇನ್ನು ರಾಜ್‌ ಬಿ ಶೆಟ್ಟಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಒಂದು ಮೊಟ್ಟೆಯ ಕಥೆ ಸಿನಿಮಾ ಆಗಷ್ಟೇ ರಿಲೀಸ್ ಆಗಿತ್ತು. ಆಗ ಈ ಚಿತ್ರದ ಆಡಿಷನ್ ನಡೆಯುತ್ತಿತ್ತು. ನನಗೆ ಹೇಮಂತ್ ಕುಮಾರ್ ಮೂರು ಪುಟಗಳ ಸಂಭಾಷಣೆ ಕಳುಹಿಸಿದ್ದರು. ಅದನ್ನು ನೋಡಿ ನಾನು ಈ ಸಿನಿಮಾದಲ್ಲಿ ಅಭಿನಯಿಸಬೇಕೆಂದು ನಿರ್ಧಾರ ಮಾಡಿದೆ. ಆಡಿಷನ್‌ನಲ್ಲಿ ಸೆಲೆಕ್ಟ್ ಆದೆ" ಎನ್ನುತ್ತಾರೆ ರಾಜ್ ಬಿ ಶೆಟ್ಟಿ

    'ತುರ್ತು ನಿರ್ಗಮನ' ರೆಗ್ಯೂಲರ್ ಸಿನಿಮಾ ಅಂತೂ ಅಲ್ಲ. ವಿಭಿನ್ನ ಪ್ರಯೋಗ ಹಾಗೂ ಕಲ್ಪನೆ ಮೂಲಕ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ಮೂಲಕ ಮತ್ತೆ ಸುನೀಲ್ ರಾವ್ ಸ್ಯಾಂಡಲ್‌ವುಡ್‌ನಲ್ಲಿ ಉಳಿದುಕೊಳ್ಳುತ್ತಾರಾ ಅನ್ನೋದನ್ನು ನೋಡಬೇಕಿದೆ.

    English summary
    Sunil Rao Started Second innings with Kannada Movie Thurthu Nirgamana, Know More.
    Friday, June 3, 2022, 23:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X