For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಸಿನಿಮಾದಲ್ಲಿ ಸುನೀಲ್ ಶೆಟ್ಟಿ

  By Pavithra
  |

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಚಿತ್ರೀಕರಣಕ್ಕೆ ಕ್ಷಣಗಣನೆ ಶುರುವಾಗಿದೆ. ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪೈಲ್ವಾನ್ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎನ್ನುವುದನ್ನು ಈ ಹಿಂದೆ ನಿರ್ದೇಶಕರು ತಿಳಿಸಿದ್ದರು.

  ಹೆಬ್ಬುಲಿ ಚಿತ್ರದ ನಂತರ ಕೃಷ್ಣ ಸುದೀಪ್ ಸಿನಿಮಾವನ್ನ ಡೈರೆಕ್ಟ್ ಮಾಡುತ್ತಿದ್ದು ಆರ್ ಆರ್ ಆರ್ ಮೋಷನ್ ಪಿಚ್ಚರ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಶೂಟಿಂಗ್ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಲಾವಿದರ ಲೀಸ್ಟ್ ಬಿಡುಗಡೆ ಮಾಡುತ್ತಿರುವ ನಿರ್ದೇಶಕರು ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

  ಕಿಚ್ಚನ 'ಪೈಲ್ವಾನ್'ಗಾಗಿ ಮುಂಬೈನಿಂದ ಬಂದ ಚೆಲುವೆ.! ಕಿಚ್ಚನ 'ಪೈಲ್ವಾನ್'ಗಾಗಿ ಮುಂಬೈನಿಂದ ಬಂದ ಚೆಲುವೆ.!

  ಹೌದು ಸುದೀಪ್ ಪೈಲ್ವಾನ್ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಅಭಿನಯ ಮಾಡುತ್ತಿದ್ದಾರೆ. ಮಂಗಳೂರಿನ ಮೂಲದವರಾದ ಸುನೀಲ್ ಈ ಹಿಂದೆಯೇ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಭಾಗಿ ಆಗಬೇಕಿತ್ತು. ಕಾರಣಾಂತರಗಳಿದ ಆ ಚಿತ್ರ ಸೆಟ್ಟೇರಲಿಲ್ಲ. ಆದರೆ ಈಗ ಸುದೀಪ್ ಮತ್ತು ಸುನೀಲ್ ಶೆಟ್ಟಿ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

  ಆದರೆ ಸುನೀಲ್ ಶೆಟ್ಟಿ ಯಾವ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನುವುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ ನಿರ್ದೆಶಕರು. ಮೇ 17 ರಿಂದ ಪೈಲ್ವಾನ್ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಕರುಣಾಕರ್ ಕ್ಯಾಮೆರಾ ಕೈ ಚಳಕ ಚಿತ್ರಕ್ಕಿರಲಿದೆ.

  English summary
  Bollywood actor Sunil Shetty is doing the role of Sudeep's Pailwan movie. Krishna directing Pailwan movie.The film will start filming from May 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X