For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ತಂಡ ಸೇರುವ ಮೊದಲ ಸುನೀಲ್ ಶೆಟ್ಟಿ ಮಾಡಿದ ಟ್ವೀಟ್

  By Bharath Kumar
  |
  Pailwan kannada movie : ಪೈಲ್ವಾನ್ ಸಿನಿಮಾ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು ..? | Filmibeat Kannada

  ಬಾಲಿವುಡ್ ಸೂಪರ್ ಸ್ಟಾರ್ ನಟ ಸುನೀಲ್ ಶೆಟ್ಟಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

  ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುನೀಲ್ ಶೆಟ್ಟಿ, ಕನ್ನಡ ಮೊದಲ ಸಿನಿಮಾ ಮಾಡಲು ಬಹಳ ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ''ಚೊಚ್ಚಲ ಚಿತ್ರದ ಬಗ್ಗೆ ತುಂಬ ನರ್ವಸ್ ಆಗಿದ್ದೀನಿ, ಕಾತುರದಿಂದ ಎದುರು ನೋಡುತ್ತಿದ್ದೇನೆ'' ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

  ಮೊದಲ ಹಂತ ಚಿತ್ರೀಕರಣ ಮುಗಿಸಿದ ಪೈಲ್ವಾನ್ !ಮೊದಲ ಹಂತ ಚಿತ್ರೀಕರಣ ಮುಗಿಸಿದ ಪೈಲ್ವಾನ್ !

  ಸದ್ಯ, ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಈಗ ಎರಡನೇ ಹಂತದ ಶೂಟಿಂಗ್ ಶುರುವಾಗಬೇಕಿದೆ. ಕಳೆದ 15 ದಿನಗಳಿಂದ ಚೆನೈನಲ್ಲಿ ಶೂಟಿಂಗ್ ಮಾಡಿರುವ ಟೀಂ ಸದ್ಯ ಬೆಂಗಳೂರಿಗೆ ವಾಪಾಸ್ ಆಗಿದೆ. ಈಗ ಎರಡನೇ ಹಂತದಲ್ಲಿ ಸುನೀಲ್ ಶೆಟ್ಟಿ ಚಿತ್ರತಂಡ ಸೇರಲಿದ್ದಾರೆ.

  ಸುನೀಲ್ ಶೆಟ್ಟಿ ಬಾಲಿವುಡ್ ನಟ ಎನ್ನುವುದಕ್ಕಿಂತ ಕನ್ನಡಿಗ ಎನ್ನುವುದು ವಿಶೇಷ. ಯಾಕಂದ್ರೆ, ಸುನೀಲ್ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ತುಳು ಕುಟುಂಬದಲ್ಲಿ. ಆದ್ರೆ, ವೃತ್ತಿ ಆರಂಭಿಸಿದ್ದು ಮಾತ್ರ ಹಿಂದಿ ಚಿತ್ರರಂಗದಲ್ಲಿ 1992ರಲ್ಲಿ 'ಬಲ್ವಾನ್' ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ ನಟ ಸುಮಾರು 26 ವರ್ಷಗಳ ಕಾಲ ಬಾಲಿವುಡ್ ನಲ್ಲಿ ನಟಿಸಿದ್ದಾರೆ.

  ತಮಿಳಿನಲ್ಲೂ ಅಭಿನಯಿಸಿರುವ ಸುನೀಲ್ ಶೆಟ್ಟಿ, ಇದುವರೆಗೂ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಿರಲಿಲ್ಲ. ಈಗ ಸುದೀಪ್ ಸಿನಿಮಾ ಮೂಲಕ ನಮ್ ಇಂಡಸ್ಟ್ರಿಗೆ ಲಗ್ಗೆ ಇಡ್ತಿದ್ದಾರೆ.

  ಇನ್ನುಳಿದಂತೆ ಸುದೀಪ್ ಗೆ ನಾಯಕಿಯಾಗಿ ಮುಂಬೈನ ಆಕಾಂಕ್ಷ ಸಿಂಗ್ ಆಯ್ಕೆ ಆಗಿದ್ದು ಕಬೀರ್ ದುಹಾನ್ ಸಿಂಗ್ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಹೆಬ್ಬುಲಿ ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಅವರೇ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

  English summary
  Kannada film actor Kiccha Sudeep Pailwan movie first scheduled shooting Complete. and bollywood actor Sunil shetty tweet about pailwan. Hebbuli movie fame Krishna directing the Pailwan movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X