»   » ಸನ್ನಿ ಲಿಯೋನ್ ಜೊತೆ ಡೀಲ್ ಕುದುರಿಸಿದ ಕೆ ಮಂಜು

ಸನ್ನಿ ಲಿಯೋನ್ ಜೊತೆ ಡೀಲ್ ಕುದುರಿಸಿದ ಕೆ ಮಂಜು

Posted By:
Subscribe to Filmibeat Kannada

ಕನ್ನಡ ಚಿತ್ರಗಳ ಹೆಸರಾಂತ ನಿರ್ಮಾಪಕ ಗಂಡುಗಲಿ ಕೆ ಮಂಜು ಅವರು ಬಾಲಿವುಡ್ ತಾರೆ, ನೀಲಿ ಚಿತ್ರಗಳ ಅಪ್ಸರೆ ಸನ್ನಿ ಲಿಯೋನ್ ಜೊತೆ ಡೀಲ್ ಕುದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ಸನ್ನಿ ಅವರನ್ನು ಬುಕ್ ಮಾಡಿದ್ದಾರೆ ಮಂಜು.

ಇತ್ತೀಚೆಗೆ ಅವರು ಮುಂಬೈಗೆ ಭೇಟಿ ನೀಡಿ ಸನ್ನಿ ಲಿಯೋನ್ ಜೊತೆ ಮಾತುಕತೆ ಮುಗಿಸಿಕೊಂಡು ಬಂದಿದ್ದಾರೆ. ಆಕೆ ಕೂಡ ಕೆ ಮಂಜು ಚಿತ್ರದಲ್ಲಿ ಅಭಿನಯಿಸಲು ಎಸ್ ಅಂದಿದ್ದು ಮುಂದಿನ ವರ್ಷ ಕನ್ನಡಕ್ಕೆ ಅಡಿಯಿಡುವುದು ಪಕ್ಕಾ ಆಗಿದೆ. ಅಂದಹಾಗೆ ಇದು ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಿಸುತ್ತಿರುವ ದ್ವಿಭಾಷಾ ಚಿತ್ರವಂತೆ.

ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡದೆ ಗೌಪ್ಯತೆಯನ್ನು ಕಾದಿರಿಸಿದ್ದಾರೆ ಮಂಜು. ಸದ್ಯಕ್ಕೆ ಆಕೆ ಏಕ್ತಾ ಕಪೂರ್ ಅವರ 'ರಾಗಿಣಿ ಎಂಎಂಎಸ್ 2' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದಾದ ಬಳಿಕ ತಮ್ಮ ಚಿತ್ರದಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಮುಂಗಡ ಹಣವನ್ನೂ ಕೊಟ್ಟುಬಂದಿದ್ದೇನೆ ಎಂದಿದ್ದಾರೆ.

ಮಂಜು ನಿರ್ಮಿಸುತ್ತಿರುವ ಚಿತ್ರ ಏಕಕಾಲಕ್ಕೆ ಹಿಂದಿ ಹಾಗೂ ಕನ್ನಡದಲ್ಲಿ ಸೆಟ್ಟೇರಲಿದೆ. ಈ ಮೂಲಕ ಮಂಜು ಬಾಲಿವುಡ್ ಚಿತ್ರರಂಗಕ್ಕೂ ಜಿಗಿಯುತ್ತಿರುವುದು ವಿಶೇಷ. ಅಂದಹಾಗೆ ಸನ್ನಿ ಅವರ ಸಂಭಾವನೆ ಎಷ್ಟು ಎಂದರೆ, ಮಂಜು ಗುಟ್ಟು ಬಿಟ್ಟುಕೊಡಲೊಲ್ಲರು.

ಆದರೂ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸಮಾಚಾರ ಏನೆಂದರೆ, ಕೆ ಮಂಜು ಅವರು ತಮ್ಮ ಹಿಂದಿ ಹಾಗೂ ಕನ್ನಡ ದ್ವಿಭಾಷಾ ಚಿತ್ರಕ್ಕಾಗಿ ರು.1.5 ಕೋಟಿ ಸಂಭಾವನೆ ಕೊಡಲು ಒಪ್ಪಿದ್ದಾರಂತೆ. ನಾಯಕಿಯ ಸಂಭಾವನೆಯೇ ಇಷ್ಟಾದರೆ ಇನ್ನು ಚಿತ್ರದ ಬಜೆಟ್ ಎಷ್ಟಿರಬಹುದು ಎಂಬ ಊಹೆಯನ್ನು ಚಿತ್ರರಸಿಕರಿಗೆ ಬಿಟ್ಟಿದ್ದಾರೆ.

ಆಕೆ ಹಿಂದಿ ಹಾಗೂ ಕನ್ನಡ ದ್ವಿಭಾಷಾ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದು, ಬಹುಶಃ ಇನ್ನೆರಡು ವಾರಗಳಲ್ಲಿ ಚಿತ್ರಕ್ಕೆ ಸಹಿ ಹಾಕಲಿದ್ದಾರೆ ಎಂದಿದ್ದಾರೆ ಮಂಜು. ಕತೆ, ಚಿತ್ರಕತೆ, ತಾಂತ್ರಿಕ ಹಾಗೂ ಕಲಾವಿದರ ಬಗ್ಗೆ ಇನ್ನಷ್ಟೇ ಸುದ್ದಿ ಹೊರಬೀಳಬೇಕು. (ಏಜೆನ್ಸೀಸ್)

English summary
Bollywood actress and adult star Sunny Leone to agree to work in Kannada, Hindi bilingual film. Sunny has okayed the project and will start shooting for it next year confirms Kannada films noted producer K Manju.
Please Wait while comments are loading...