Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾಮಾಕ್ಷಿಯಾಗಿ ಕನ್ನಡಿಗರ ಹೃದಯ ಕುಣಿಸಲಿದ್ದಾರೆ ಸನ್ನಿ ಲಿಯೋನ್
ಒಂದಾನೊಂದು ಕಾಲದ ನೀಲಿ ಚಿತ್ರಗಳ ತಾರೆ, ಪ್ರಸ್ತುತ ಬಾಲಿವುಡ್ಡಿನಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಕಾಮಕನ್ಯೆ ಸನ್ನಿ ಲಿಯೋನ್ 'ಕಾಮಾಕ್ಷಿ'ಯಾಗಿ ಕನ್ನಡಿಗರ ಹೃದಯದ ಬಾಗಿಲು ಬಡಿಯಲು ಬಂದಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ 'ಲವ್ ಯೂ ಆಲಿಯಾ' ಚಿತ್ರದಲ್ಲಿ ಸನ್ನಿಯ ಐಟಂ ಸಾಂಗ್ ಚಿತ್ರೀಕರಣಕ್ಕಾಗಿ ಅವರು ಈಗ ಬೆಂಗಳೂರಿಗೆ ಬಂದಿದ್ದಾರೆ.
ಕಳೆದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ವಲ್ಪದರಲ್ಲೇ ಪ್ರಶಸ್ತಿ ತಪ್ಪಿಸಿಕೊಂಡ ಸೃಜನ್ ಲೋಕೇಶ್ ಜೊತೆ ಸನ್ನಿ ಲಿಯೋನ್ ಸೊಂಟವನ್ನು ಬಳುಕಿಸಲಿದ್ದಾರೆ. 'ಕಾಮಾಕ್ಷಿ ಕಾಮಾಕ್ಷಿ, ನೀನೇನಾ ಸ್ವರ್ಗದಲ್ಲಿ ಊರ್ವಶಿ' ಎಂಬ ಐಟಂ ಹಾಡಿಗೆ ಸನ್ನಿ ಹೆಜ್ಜೆ ಹಾಕುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನೂ ಏರ್ಪಡಿಸಲಾಗಿತ್ತು.
ಸನ್ನಿ ಲಿಯೋನ್ ರನ್ನು ಬಲ್ಲದಿರುವ ಕನ್ನಡಿಗರೇ ಇಲ್ಲ ಎಂದರೂ, ಕನ್ನಡಿಗರಿಗೆ ಪರಿಚಯವಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಬಿಡುಗಡೆಯಾದ ಪ್ರೇಮ್ ಅವರ 'ಡಿಕೆ' ಚಿತ್ರದಲ್ಲಿ 'ಬಾಗಿಲು ತೆರೆಯೇ ಸೇಸಮ್ಮ' ಹಾಡಿಗೆ ಧಿಗ್ಗಿಚಿಕ್ಕಿ ಎಂದು ಕುಣಿದು ಹೋಗಿದ್ದರು. ಇದರಿಂದ ಪ್ರೇಮ್ ಚಿತ್ರಕ್ಕೆ ಅಂಥ ಪ್ರಯೋಜನವೇನೂ ಆಗಿರಲಿಲ್ಲ.
ಆದರೆ, ತಮ್ಮ ಚಿತ್ರವನ್ನು ಹೇಗೆ ಮಾರ್ಕೆಟಿಂಗ್ ಮಾಡಬೇಕು ಎಂಬುದನ್ನು ಚೆನ್ನಾಗಿ ತಿಳಿದಿರುವ ಇಂದ್ರಜಿತ್ ಲಂಕೇಶ್, ಚಂದನ್ ನಾಯಕರಾಗಿರುವ 'ಲವ್ ಯೂ ಆಲಿಯಾ' ಚಿತ್ರಕ್ಕೆ ಸನ್ನಿ ಲಿಯೋನ್ ರನ್ನ ಎಳೆತಂದಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರಿನ ವಾತಾವರಣ, ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಸನ್ನಿ ಲಿಯೋನ್ ಹಲವಾರ ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. [ಸನ್ನಿಯ ಸೂಪರ್ ಹಾಟ್ ಚಿತ್ರಪಟ]

ಬೆಂಗಳೂರು ಮುಂಬೈಗಿಂತ ಸ್ವಚ್ಛವಾಗಿದೆಯಂತೆ
ಸನ್ನಿ ಲಿಯೋನ್ ಪ್ರಕಾರ, ಬೆಂಗಳೂರು ಮುಂಬೈ ನಗರಿಗಿಂತ ಸ್ವಚ್ಛವಾಗಿದೆಯಂತೆ (?) ಮತ್ತು ಇಲ್ಲಿನ ವಾತಾವರಣ ಅಲ್ಲಿಗಿಂತ ಹಿತಕರವಾಗಿದೆಯಂತೆ. ಮುಂಬೈಗೆ ಹೋಲಿಸಿದರೆ ಇದು ಒಪ್ಪತಕ್ಕಂಥ ಮಾತಾಗಿರಬಹುದು. ನೃತ್ಯದ ಚಿತ್ರೀಕರಣವನ್ನು ಕೆಆರ್ ಮಾರ್ಕೆಟ್ಟಿನಲ್ಲಿ ಇಂದ್ರಜಿತ್ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು.

ಇಲ್ಲಿಯವರು ಅತಿಯಾದ 'ಜಾಣತನ' ತೋರುವುದಿಲ್ಲ
ದಕ್ಷಿಣ ಭಾರತದಲ್ಲಿ, ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಜನರು ಅತಿಯಾದ 'ಜಾಣತನ' ತೋರಿಸಲು ಹೋಗುವುದಿಲ್ಲ ಮತ್ತು ಇಲ್ಲಿ ಒಂದು ರೀತಿ ಧನಾತ್ಮಕವಾದ ವಾತಾವರಣವಿರುತ್ತದೆ ಎಂಬುದು ಸನ್ನಿಯವರ ಅಭಿಮತ.

ಅಭಿಮಾನಿಗಳ ಪ್ರೀತಿಗೆ ತೇಲಿಹೋದ ಸನ್ನಿ
ಬಾಬಿ ಡಾಲ್ ಹಾಡು ಮಕ್ಕಳಲ್ಲಿ ಭಾರೀ ಹುಚ್ಚು ಹಿಡಿಸಿದೆಯಂತೆ. ಈ ಹಾಡು ಸಖತ್ ಹಿಟ್ಟಾಗಿದ್ದರಿಂದ ಮಕ್ಕಳು ಕೂಡ ಅವರ ಅಭಿಮಾನಿಗಳ ಬಳಗ ಸೇರಿಕೊಂಡಿದ್ದಾರಂತೆ. ಈ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಅವರು ಚಿತ್ರದ ತಂತ್ರಜ್ಞರ ಮಕ್ಕಳನ್ನು ಭೇಟಿಯಾಗಿದ್ದರು.

ನಾನು ತುಂಬಾ ಹುಷಾರಾಗಿದ್ದೇನೆ
ಅಪಾರ ಪ್ರಮಾಣದ ಯುವ ಅಭಿಮಾನಿಗಳನ್ನು ಹೊಂದಿರುವುದರಿಂದ ತನ್ನ ಜವಾಬ್ದಾರಿ ಹೆಚ್ಚಿದೆಯಂತೆ. ಜನ ನನ್ನನ್ನು ಹೇಗೆ ನೋಡುತ್ತಾರೆ ಎಂಬುದನ್ನು ಗಮನಿಸುತ್ತಿದ್ದು, ತಾವು ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಲವ್ ಯೂ ಆಲಿಯಾ ಚಿತ್ರತಂಡ
ಚಿತ್ರದಲ್ಲಿ ಕನಸುಗಾರ ರವಿಚಂದ್ರನ್, ಭೂಮಿಕಾ ಚಾವ್ಲಾ, ಸುಧಾರಾಣಿ ಪ್ರಮುಖ ಭೂಮಿಕೆಯಲ್ಲಿದ್ದರೆ, ಚಂದನ್, ಸಂಗೀತಾ ಚೌಹಾಣ್, ಅದಿತಿ ಆಚಾರ್ಯ ತಾರಾಗಣದಲ್ಲಿದ್ದಾರೆ. ಮ್ಯಾಜಿಕ್ ಸಿನೆಮಾ ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನವಿದೆ.