For Quick Alerts
  ALLOW NOTIFICATIONS  
  For Daily Alerts

  ಮಂಡ್ಯದಲ್ಲಿ ಅದ್ಧೂರಿಯಾಗಿ ಸನ್ನಿ ಲಿಯೋನಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

  |

  ಸನ್ನಿ ಲಿಯೋನಿಗೆ ತಮ್ಮದೇ ಆದ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಮೆಚ್ಚಿನ ತಾರೆಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಅಭಿಮಾನಿಗಳ 'ಕರ್ತವ್ಯ'. ಅಂತೆಯೇ ನಟಿ ಸನ್ನಿ ಲಿಯೋನಿಯ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ.

  ಮಂಡ್ಯದಲ್ಲಿ ಸನ್ನಿ ಲಿಯೋನಿ ಅಭಿಮಾನಿಗಳ ಸಂಘದ ಯುವಕರು ಸನ್ನಿ ಲಿಯೋನಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಸನ್ನಿಯ ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ಬಿರಿಯಾನಿ ಮಾಡಿಸಿ ಎಲ್ಲರಿಗೂ ಹಂಚಿದ್ದಾರೆ.

  ಮಂಡ್ಯ ಜಿಲ್ಲೆ ಕಸಬಾ ತಾಲ್ಲೂಕಿನ ಕೊಮ್ಮೇರಹಳ್ಳಿಯಲ್ಲಿ ಸನ್ನಿ ಲಿಯೋನಿ ಅಭಿಮಾನಿಗಳು ಅದ್ಧೂರಿಯಾಗಿ ತಮ್ಮ ಮೆಚ್ಚಿನ ತಾರೆಯ ಹುಟ್ಟುಹಬ್ಬ ಆಚರಿಸಿದ್ದಾರೆ. ಸನ್ನಿ ಲಿಯೋನಿಯ ದೊಡ್ಡ-ದೊಡ್ಡ ಫ್ಲೆಕ್ಸ್‌ಗಳನ್ನು ಹೊಡೆಸಿ ಬಿರಿಯಾನಿ ಮಾಡಿಸಿ ಊರಿಗೆಲ್ಲ ಹಂಚಿಕೊಂಡಿದ್ದಾರೆ.

  ಬಿರಿಯಾನಿ ಹಾಕಿಸಿರುವುದು ಮಾತ್ರವಲ್ಲ, ಸನ್ನಿ ಲಿಯೋನಿ ಹೆಸರಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದಾರೆ. ಸಾರ್ವಜನಿಕವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಸನ್ನಿ ಲಿಯೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ಗಳಲ್ಲಿ ಬಡ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದೆಲ್ಲ ವಿಶೇಷಣಗಳನ್ನು ಬರೆಸಿದ್ದಾರೆ. ಕಳೆದ ವರ್ಷ ಸನ್ನಿ ಲಿಯೋನಿ ಹುಟ್ಟುಹಬ್ಬದ ಸಂದರ್ಭದಲ್ಲಿ ಸಹ ಇದೇ ಗ್ರಾಮದ ಹುಡುಗರು ಸನ್ನಿ ಲಿಯೋನಿಯ ದೊಡ್ಡ ಕಟೌಟ್ ಹಾಕಿ ನಟಿಯ ಹುಟ್ಟುಹಬ್ಬ ಆಚರಿಸಿದ್ದರು. ಕಟೌಟ್‌ ಮೇಲೆ ಆಗ ಅನಾಥ ಮಕ್ಕಳ ತಾಯಿ ಎಂದು ಬರೆಸಿದ್ದರು.

  ಮಂಡ್ಯದಲ್ಲಿ ಸನ್ನಿ ಲಿಯೋನಿಯ ಅಭಿಮಾನಿಗಳ ಸಂಖ್ಯೆ ಹೆಚ್ಚಿಗಿದೆ. ಮಂಡ್ಯದಲ್ಲಿ ಸನ್ನಿ ಲಿಯೋನಿ ಹೆಸರಲ್ಲಿ ಚಿಕನ್ ಅಂಗಡಿ ಇಟ್ಟಿರುವ ಪ್ರಸಾದ್ ಸಹ ಸನ್ನಿ ಲಿಯೋನಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸನ್ನಿ ಹುಟ್ಟುಹಬ್ಬದಂದು ತನ್ನ ಅಂಗಡಿಗೆ ಬರುವ ಸನ್ನಿ ಅಭಿಮಾನಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಚಿಕನ್ ಮಾರಾಟ ಮಾಡಿದ್ದಾರೆ.

  ಇನ್ನು ಹುಲ್ಲೂರು ಗ್ರಾಮದ ಯುವಕರು ತಮ್ಮ ಊರಿನ ಜಾತ್ರಾ ಮಹೋತ್ಸವಕ್ಕೆ ಸ್ವಾಗತ ಕೋರಲು ಮಾಡಿಸಿದ ಫ್ಲೆಕ್ಸ್‌ನಲ್ಲಿ ಸನ್ನಿ ಲಿಯೋನಿಯ ಚಿತ್ರವನ್ನು ಹಾಕಿಸಿ ಅಭಿಮಾನ ಮೆರೆದಿದ್ದರು. ಸನ್ನಿ ಲಿಯೋನಿಗೆ ಅಭಿಮಾನಿಗಳು, ಅಭಿಮಾನಿ ಸಂಘಗಳು ಕರ್ನಾಟಕದಲ್ಲಿ ಕಡಿಮೆ ಏನಿಲ್ಲ.

  English summary
  Sunny Leone's birthday celebrated grandly in Mandya's Kommerahalli. Fans organized blood donation camp, and distributed free food to needy people.
  Saturday, May 14, 2022, 10:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X