»   » ಸನ್ನಿ ಲಿಯೋನ್ 'ಸೇಸಮ್ಮ' ಫುಲ್ ಐಟಂ ಸಾಂಗ್ ಕೇಳಿ

ಸನ್ನಿ ಲಿಯೋನ್ 'ಸೇಸಮ್ಮ' ಫುಲ್ ಐಟಂ ಸಾಂಗ್ ಕೇಳಿ

By: ಉದಯರವಿ
Subscribe to Filmibeat Kannada

"ಮೈ ನೇಮ್ ಈಸ್ ಶೀಲಾ..ಶೀಲಾ ಕಿ ಜವಾನಿ..." ಎಂದು ತಮ್ಮ ಸೊಂಟವನ್ನು ಲಂಗುಲಗಾಮಿಲ್ಲದಂತೆ ಕುಣಿಸಿದ್ದ ಕತ್ರಿನಾ ಕೈಫ್ ಅವರನ್ನು ನಾಚಿಸುವಂತಹ ಕನ್ನಡದ ಐಟಂ ಸಾಂಗ್ ಇದು. ಹಾಗಂತ ಗಾಂಧಿನಗರ ಜೋರಾಗಿಯೇ ಮಾತನಾಡಿಕೊಳ್ಳುತ್ತಿದೆ.

ಅದ್ಯಾವುದಪ್ಪಾ ಆ ರೀತಿಯ ಸಾಂಗ್ ಎಂದು ತಲೆಕೆಡಿಸಿಕೊಳ್ಳಬೇಡಿ. ಇದು 'ಜೋಗಿ' ಪ್ರೇಮ್ ಅಭಿನಯದ 'ಡಿಕೆ' ಚಿತ್ರದ ಸಾಂಗ್. ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ಬಾಲಿವುಡ್ ನಲ್ಲಿ ತಮ್ಮ ಮೈಮಾಟ ಮೆರೆಯುತ್ತಿರುವ ಸನ್ನಿ ಲಿಯೋನ್. [ಡಿಕೆಶಿಯನ್ನ 'ಡಿ.ಕೆ' ಸಾಹೇಬ ಪ್ರೇಮ್ ಭೇಟಿ ಮಾಡಿದ್ದೇಕೆ?]

ಬಾಗಿಲು ತೆಗಿಯೇ ಸೇಸಮ್ಮ ಅಂತ ಶುರುವಾಗೋ ಲಿರಿಕ್ಸ್ ಗಳನ್ನ ಸ್ವತಃ ಪ್ರೇಮ್ ಸನ್ನಿಯ ಐಟಂ ಸಾಂಗ್ ಗಾಗಿ ಬರೆದಿದ್ದಾರೆ. ಚಿತ್ರದಲ್ಲಿರೋ ಐದು ಹಾಡುಗಳಲ್ಲಿ ಈ ಹಾಡನ್ನ ಬಹಳ ಎಚ್ಚರಿಕೆಯಿಂದ ಮಾಡಲಾಗಿದೆ. ಸದ್ಯಕ್ಕೆ ಈ ಹಾಡಿನ ಆಡಿಯೋ ಲಿಂಕ್ ಕೊನೆಯ ಸ್ಲೈಡ್ ನಲ್ಲಿದೆ ಕೇಳಿ!

ಇದೊಂದು ರಾ ಲವ್ ಸ್ಟೋರಿಯಂತೆ

ಚಿತ್ರಕ್ಕೆ 'ಡಿಕೆ' ಅಂತ ಹೆಸರಿಟ್ಟಿರೋ ಪ್ರೇಮ್ "ಆಬ್ ಕಿ ಬಾರ್ ಮೇರಾ ಸರ್ಕಾರ್ ಅನ್ನುತ್ತಿದ್ದಾರೆ. ಇನ್ನು ರಾ ಲವ್ ಸ್ಟೋರಿ ಅಂತ ಬೇರೆ ಬರೆದುಕೊಂಡಿದ್ದು ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ. ರಾಜಕೀಯದಲ್ಲಿ ಲವ್ ಸ್ಟೋರೀನಾ? ಡಿಕೆಶಿ ಅವರದ್ದಾ ಅಂದ್ರೆ, ನೋ ನೋ ನಮಗ್ಗೊತ್ತಿಲ್ಲ ಅಂತಾರೆ ಪ್ರೇಮ್ ಅಂಡ್ ರಕ್ಷಿತಾ ಪ್ರೇಮ್.

ಸನ್ನಿ ಲಿಯೋನ್ ರನ್ನು ಕುಣಿಸಿದ ಪ್ರೇಮ್

ಜೋಗಿ ಚಿತ್ರದಲ್ಲಿ ಬಿನ್ ಲಾಡೆನ್ನು ನನ್ ಮಾವ ಎಂದು ಯಾನಾ ಗುಪ್ತ ಮೈಬಳುಕಿಸಿದ್ದರು. 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ತುಂಡುಡುಗೆಯಲ್ಲಿ ಕುಣಿದಿದ್ದರು. ಪ್ರೇಮ್ ಅಡ್ಡ ಚಿತ್ರದಲ್ಲಿ ಸ್ಕಾರ್ಲೆಟ್ ನಿಕೋಲ್ಸನ್ ಹೆಜ್ಜೆ ಹಾಕಿದ್ದರು. ಈಗ ಸನ್ನಿ ಲಿಯೋನ್ ರನ್ನು ಕುಣಿಸಿದ್ದಾರೆ.

ಸಾಕಷ್ಟು ಮಸಾಲೆ ಅಂಶಗಳು ಇವೆ

ವಿವಾದಾತ್ಮಕ ಸ್ವಾಮೀಜಿ ಕಾಳಿ ಮಠದ ಋಷಿಕುಮಾರ ಅವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಹಾಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಕಥೆ ಇರಬಹುದೇ ಎಂಬ ಸಣ್ಣ ಅನುಮಾನವೂ ಸ್ಯಾಂಡಲ್ ವುಡ್ ನಲ್ಲಿದೆ. ಆದರೆ ಆ ಮಾತನ್ನು ಪ್ರೇಮ್ ತಳ್ಳಿಹಾಕುತ್ತಾರೆ.

ಮೋದಿ, ಗಾಂಧಿ, ಜಯಲಲಿತಾ ಸಹ ಬರ್ತಾರೆ

ಚಿತ್ರದ ಇನ್ನೊಂದು ಹಾಡಿನಲ್ಲಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಎಂ ಕರುಣಾನಿಧಿ ಹಾಗೂ ಜಯಲಲಿತಾ ಹೆಸರುಗಳನ್ನು ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಈ ಹಾಡನ್ನು ಹಾಡಲು ನಾಲ್ಕು ಮಂದಿ ಗಾಯಕರು ನಿರಾಕರಿಸಿದ ಬಳಿಕ ಕಡೆಯದಾಗಿ ಗಾಯಕ ಹೇಮಂತ್ ಅವರು ಒಪ್ಪಿಕೊಂಡು ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ.

ಫೆಬ್ರವರಿ 13ಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದೆ

ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರ ಇದೇ ಫೆಬ್ರವರಿ 13ರಂದು ತೆರೆ ಮೇಲೆ ರಾರಾಜಿಸಲಿದೆ. ವಿಜಯ್ ಕಂಪಳಿ (ಉದಯ ಪ್ರಕಾಶ್) ಅವರ ಆಕ್ಷನ್ ಕಟ್ ನಲ್ಲಿ ಮೂಡಿಬಂದಿರುವ ಚಿತ್ರ ಇದು.

    English summary
    Listen Sesamma Full Song from the DK Kannada Movie, starring Prem, Chaitra Chandranath, Sunny Leone and others. Directed by Vijay Hampali. Music composed by Arjun Janya. The Movie is set to release on 13 Feb 2015.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada