»   » 'ಲವ್ ಯು ಆಲಿಯ' ಚಿತ್ರದಲ್ಲಿ ಸನ್ನಿ ವಯ್ಯಾರ ನೋಡಿದ್ದೀರಾ?

'ಲವ್ ಯು ಆಲಿಯ' ಚಿತ್ರದಲ್ಲಿ ಸನ್ನಿ ವಯ್ಯಾರ ನೋಡಿದ್ದೀರಾ?

Posted By:
Subscribe to Filmibeat Kannada

'ಸೇಸಮ್ಮ' ಆಗಿ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದು ಹಳೇ ಸುದ್ದಿ. ಅಂದು ಸ್ಯಾಂಡಲ್ ವುಡ್ ಬಾಗಿಲು ತೆಗೆದು ಒಳಗೆ ಬಂದಿದ್ದ ಸನ್ನಿ ಇಂದು ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರದಲ್ಲಿ ಹೆಜ್ಜೆ ಹಾಕಿದ್ದಾರೆ.

ಮಜಾ ಸ್ಟಾರ್ ಸೃಜನ್ ಲೋಕೇಶ್ ಜೊತೆ ಸ್ಪೆಷಲ್ ಸಾಂಗ್ ನಲ್ಲಿ ಸನ್ನಿ ಲಿಯೋನ್ ಸ್ಟೆಪ್ ಹಾಕಿದ್ದಾರೆ. ಹಾಡಿಗಾಗಿ ಮಿ.ಲೋಕೇಶ್ ಕೂಡ ಹಗಲು-ರಾತ್ರಿ ಜಿಮ್ ನಲ್ಲಿ ಬೆವರು ಇಳಿಸಿ, ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದರು. [ನೀಲಿ ರಾಣಿ 'ಸನ್ನಿ'ಗಾಗಿ 5 ಗಂಟೆ ಜಿಮ್ ನಲ್ಲಿ ಸುಸ್ತು..!]


ಸನ್ನಿ ಲಿಯೋನ್ ಕುಣಿದಿರುವ ಕನ್ನಡದ ಎರಡನೇ ಹಾಡು ಹೇಗಿರಬಹುದು ಅಂತ ಕಾತರದಿಂದ ಕಾಯುತ್ತಿದ್ದವರಿಗೆ ಇದೋ ಇಲ್ಲಿದೆ ಸರ್ ಪ್ರೈಸ್........ಸನ್ನಿ ಲಿಯೋನ್ ಸ್ಪೆಷಲ್ ಸಾಂಗ್ ಝಲಕ್ ಇರುವ 'ಲವ್ ಯು ಆಲಿಯ' ಚಿತ್ರದ ಹೊಸ ಟ್ರೈಲರ್ ನ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಿದ್ದಾರೆ. 'ಲವ್ ಯು ಆಲಿಯ' ಚಿತ್ರದಲ್ಲಿ ಸಖತ್ ಗ್ಲಾಮರಸ್ ಅಗಿ ಮಿಂಚಿರುವ ಸನ್ನಿ, ಪಡ್ಡೆಗಳ ಎದೆಯಲ್ಲಿ ಅವಲಕ್ಕಿ ಕುಟ್ಟೋದು ಗ್ಯಾರೆಂಟಿ. [ಕಾಮಾಕ್ಷಿಯಾಗಿ ಕನ್ನಡಿಗರ ಹೃದಯ ಕುಣಿಸಲಿದ್ದಾರೆ ಸನ್ನಿ ಲಿಯೋನ್]


luv u alia

ಸನ್ನಿ ಲಿಯೋನ್ ಮಾತ್ರ ಅಲ್ಲ, ಭೂಮಿಕಾ ಚಾವ್ಲಾ, ಸುಧಾರಾಣಿ, ನಿಕಿಶಾ ಪಟೇಲ್ ರಂತಹ ಸುರಸುಂದರಿಯರೇ 'ಲವ್ ಯು ಆಲಿಯ' ಚಿತ್ರದಲ್ಲಿದ್ದಾರೆ. ಡಾಕ್ಟರ್ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಿಂಚಿದ್ದರೆ, ಕಿರುತೆರೆ ಹೀರೋ ಚಂದನ್ ಇಲ್ಲಿ ಹಾಟ್ ಅಂಡ್ ಹ್ಯಾಂಡ್ಸಮ್.


ಟ್ರೈಲರ್ ನ ಪ್ರತಿ ಫ್ರೇಮ್ ಕೂಡ ರಿಚ್ ಆಗಿ ಮೂಡಿಬಂದಿದೆ ಅಂದ್ರೆ, ಸಿನಿಮಾ ಅಷ್ಟು ಅದ್ದೂರಿಯಾಗಿ ರೆಡಿಯಾಗಿದೆ ಅಂತರ್ಥ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ಲವ್ ಯು ಆಲಿಯ' ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ.

English summary
Indrajit Lankesh directorial Kannada Movie 'Luv U Alia' new trailer is out. Watch Sunny Leone sizzling in the trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada