For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿಗೆ ಬಂದು ಮಂಡ್ಯ ಹುಡುಗರ ಬಗ್ಗೆ ಮಾತಾಡಿದ ಸನ್ನಿ ಲಿಯೋನಿ

  |

  ನಟಿ ಸನ್ನಿ ಲಿಯೋನಿ ಬೆಂಗಳೂರಿಗೆ ಬಂದಿದ್ದಾಳೆ. ಕನ್ನಡದ 'ಚಾಂಪಿಯನ್' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿರುವ ಸನ್ನಿ ಲಿಯೋನಿ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

  ಕೆಲವು ದಿನಗಳ ಹಿಂದಷ್ಟೆ ಸನ್ನಿ ಲಿಯೋನಿ ಹುಟ್ಟುಹಬ್ಬ ನಡೆದಿದ್ದು, ಸನ್ನಿಯ ಹುಟ್ಟುಹಬ್ಬವನ್ನು ಮಂಡ್ಯದ ಹುಡುಗರು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಮಂಡ್ಯ ಜಿಲ್ಲೆಯ ಮಂಡ್ಯ ಜಿಲ್ಲೆ ಕಸಬಾ ತಾಲ್ಲೂಕಿನ ಕೊಮ್ಮೇರಹಳ್ಳಿಯಲ್ಲಿ ಸನ್ನಿ ಲಿಯೋನಿ ಅಭಿಮಾನಿ ಬಳಗದ ಸದಸ್ಯರು ಸನ್ನಿಯ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ಕಟೌಟ್ ಹಾಕಿ, ರಕ್ತದಾನ, ಅನ್ನದಾನ ಏರ್ಪಾಡು ಮಾಡಿದ್ದರು. ಮಂಡ್ಯ ಹುಡುಗರ ಈ ಅದ್ಧೂರಿ ಆಚರಣೆ ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

  ಮಂಡ್ಯ ಹುಡುಗರ ಪ್ರೀತಿಗೆ ಮರುಳಾಗಿದ್ದ ಸನ್ನಿ ಲಿಯೋನ್, ಮಂಡ್ಯ ಹುಡುಗರ ಬಗ್ಗೆ, ಅವರ ಪ್ರೀತಿಯ ಬಗ್ಗೆ ಟ್ವೀಟ್‌ ಮಾಡಿ ಧನ್ಯವಾದ ಅರ್ಪಿಸಿದ್ದರು. ಇದೀಗ ಬೆಂಗಳೂರಿಗೆ ಬಂದಿದ್ದ ಸನ್ನಿ ಲಿಯೋನ್, ಮಂಡ್ಯ ಹುಡುಗರ ಬಗ್ಗೆ ಮಾತನಾಡಿದರು.

  ''ನಿಮಗೆ ಗೌರವ ಸಲ್ಲಿಸಲು ನಾನೂ ಸಹ ರಕ್ತದಾನ ಮಾಡುತ್ತೇನೆ. ಈ ಹಿಂದೆಯೇ ನಾನು ಈ ಬಗ್ಗೆ ಹೇಳಿದ್ದೇನೆ. ನಾನು ರಕ್ತದಾನ ಮಾಡಿದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತೇನೆ. ನನ್ನ ಹುಟ್ಟುಹಬ್ಬ ಆಚರಣೆ ಮಾಡಿದ್ದು ನನಗೆ ಬಹಳ ಖುಷಿಯಾಯಿತು. ನಿಮ್ಮ ಪ್ರೀತಿ ಪಡೆದಿದ್ದು ನನಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ. ಐ ಲವ್ ಯೂ ಗಯ್ಸ್' ಎಂದಿದ್ದಾರೆ ಸನ್ನಿ ಲಿಯೋನಿ.

  ಕೊಮ್ಮೇರಹಳ್ಳಿಯ ಕೆಲವು ಯುವಕರು ಸನ್ನಿ ಲಿಯೋನಿ ಅಭಿಮಾನಿ ಸಂಘ ಕಟ್ಟಿಕೊಂಡಿದ್ದು, ಪ್ರತಿ ಬಾರಿ ಸನ್ನಿ ಲಿಯೋನಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಕಳೆದ ಬಾರಿ ದೊಡ್ಡ ಕಟೌಟ್ ಹಾಕಿಸಿದ್ದು ಈ ಯುವಕರು, ಕಟೌಟ್ ಮೇಲೆ 'ಅನಾಥ ಮಕ್ಕಳ ತಾಯಿ' ಎಂದು ಬರೆಸಿದ್ದರು. ಈ ಬಾರಿ 'ಬಡ ಮಕ್ಕಳ ತಾಯಿ' ಎಂದು ಬರೆಸಿದ್ದರು.

  ಕೊಮ್ಮೇರಹಳ್ಳಿಯಲ್ಲಿ ಮಾತ್ರವಲ್ಲ ಮಂಡ್ಯದಲ್ಲಿ ಹಲವು ಸನ್ನಿ ಲಿಯೋನಿ ಅಭಿಮಾನಿಗಳಿದ್ದಾರೆ. ಮಂಡ್ಯದ ಯುವಕನೊಬ್ಬ ತನ್ನ ಚಿಕನ್ ಸೆಂಟರ್‌ನಲ್ಲಿ ಸನ್ನಿ ಲಿಯೋನಿ ಅಭಿಮಾನಿಗಳಿಗೆ ರಿಯಾಯಿತಿ ದರದಲ್ಲಿ ಚಿಕನ್ ಮಾರಾಟ ಮಾಡುತ್ತಾ ಬಂದಿದ್ದಾರೆ. ಇದೇ ಯುವಕ ಸನ್ನಿ ಲಿಯೋನಿ ಹುಟ್ಟುಹಬ್ಬದಂದು ಉಚಿತವಾಗಿ ಚಿಕನ್ ಹಂಚಿದ್ದಾಗಿಯೂ ವರದಿಯಾಗಿತ್ತು.

  ಕನ್ನಡದ 'ಚಾಂಪಿಯನ್' ಹೆಸರಿನ ಹೊಸ ಸಿನಿಮಾದಲ್ಲಿ ಐಟಂ ಹಾಡೊಂದರಲ್ಲಿ ಸನ್ನಿ ಲಿಯೋನಿ ಹೆಜ್ಜೆ ಹಾಕಿದ್ದಾರೆ. 'ಡಿಂಗರ ಬಿಲ್ಲಿ' ಎಂದಿರುವ ಈ ಹಾಡು ಪಕ್ಕಾ ಹಿಟ್ ಆಗಲಿದೆ ಎನ್ನಲಾಗುತ್ತಿದೆ. 'ಚಾಂಪಿಯನ್' ಸಿನಿಮಾದಲ್ಲಿ ಸಚಿನ್ ಧನ್‌ಪಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಶಾಹುರಾಜ್ ಶಿಂಧೆ ನಿರ್ದೇಶನ ಮಾಡಿದ್ದಾರೆ.

  English summary
  Actress Sunny Leone visited Bengaluru today. She participated in Champion Kannada movie audio launch program and talks about her Mandya fans.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X