»   » ಕನ್ನಡ ಸಿನಿಮಾದಲ್ಲಿ ನಾಯಕಿ ಆಗಲಿದ್ದಾರೆ ಬಾಲಿವುಡ್ ನಟಿ ಸನ್ನಿ ಲಿಯೋನ್

ಕನ್ನಡ ಸಿನಿಮಾದಲ್ಲಿ ನಾಯಕಿ ಆಗಲಿದ್ದಾರೆ ಬಾಲಿವುಡ್ ನಟಿ ಸನ್ನಿ ಲಿಯೋನ್

Posted By:
Subscribe to Filmibeat Kannada

ಬಾಲಿವುಡ್ ನಟಿ ಸನ್ನಿ ಲಿಯೋನ್ ಅದೇನ್ ಮೋಡಿ ಮಾಡಿದ್ದಾರೋ ಏನೋ.. ಉತ್ತರದಿಂದ ಹಿಡಿದು ದಕ್ಷಿಣ ಭಾರತದವರೆಗೂ ಸಿನಿಮಾ ಮಂದಿ ಈಗಲೂ ಸನ್ನಿ ಹಿಂದೆ ಬಿದ್ದಿದ್ದಾರೆ. ಈ ಹಿಂದೆ 'ಡಿ.ಕೆ' ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ಈ ಚೆಲುವೆ ಈಗ ಮತ್ತೆ ಸ್ಯಾಂಡಲ್ ವುಡ್ ಅಂಗಳಕ್ಕೆ ಬಂದಿದ್ದಾರೆ.

ಕನ್ನಡದ ಹೊಸ ಸಿನಿಮಾ ತಂಡವೊಂದು ಸನ್ನಿ ಲಿಯೋನ್ ಅವರನ್ನು ಮತ್ತೆ ಕನ್ನಡಕ್ಕೆ ಕರೆತಂದಿದೆ. 'ನಿನ್ನದೇ ಹೆಜ್ಜೆ.ಕಾಂ' ಎನ್ನುವ ಚಿತ್ರದಲ್ಲಿ ಸನ್ನಿ ಈಗ ನಟಿಸಲಿದ್ದಾರಂತೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಸನ್ನಿ ಲಿಯೋನ್ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಬದಲಾಗಿ ಈ ಸಿನಿಮಾದಲ್ಲಿ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾರೆ.

Sunny Leone will Play a lead role in 'Ninnade hejje.com'

ಮೋಹನ್ ಹಾಸನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ನಟಿಸುವುದಕ್ಕೆ ಸನ್ನಿ ಈ ವರ್ಷದ ಕೊನೆಗೆ ಕಾಲ್ ಶೀಟ್ ನೀಡಿದ್ದಾರಂತೆ. ಕನ್ನಡದ ಜೊತೆಗೆ ಈ ಚಿತ್ರವನ್ನು ತಮಿಳು, ತೆಲುಗು ಭಾಷೆಗಳಲ್ಲಿಯೂ ನಿರ್ಮಾಣ ಮಾಡುವ ಯೋಚನೆ ನಡೆಯುತ್ತಿದೆಯಂತೆ.

English summary
Bollywood actress Sunny Leone will Play a lead role in Kannada Movie 'Ninnade hejje.com'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada