»   » ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ 'ಅಂತ' ರೀ ರಿಲೀಸ್

ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ 'ಅಂತ' ರೀ ರಿಲೀಸ್

Posted By:
Subscribe to Filmibeat Kannada

''ಕುತ್ತೇ...ಕನ್ವರ್ ನಹೀ...ಕನ್ವರ್ ಲಾಲ್ ಬೋಲೋ...'' ಈ ಡೈಲಾಗ್ ನ ರೆಬೆಲ್ ಅಭಿಮಾನಿಗಳು ಈಗಲೂ ಪದೇ ಪದೇ ರಿವೈನ್ಡ್ ಮಾಡಿಕೊಂಡು ನೋಡುತ್ತಾರೆ. 'ಅಂತ' ಚಿತ್ರದ ಈ ಡೈಲಾಗ್ ಅಷ್ಟು ಜನಪ್ರಿಯ. ಈಗ 'ಕನ್ವರ್ ಲಾಲ್' ಕಮಾಲ್ ಬಗ್ಗೆ ನಾವು ಮಾತನಾಡುತ್ತಿರುವುದಕ್ಕೆ ಕಾರಣ ಅಂಬಿ ಹುಟ್ಟುಹಬ್ಬ.

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬಕ್ಕೆ ಇನ್ನು ಒಂದು ತಿಂಗಳು ಬಾಕಿ ಇದೆ. ಅಷ್ಟರಲ್ಲಾಗಲೇ ಅಂಬಿ ಜನ್ಮದಿನವನ್ನ ಅದ್ದೂರಿಯಾಗಿ ಆಚರಿಸುವುದಕ್ಕೆ ಸಕಲ ತಯಾರಿ ಶುರುವಾಗುತ್ತಿದೆ. ಮೇ 29 ರಂದು 63 ನೇ ವಸಂತಕ್ಕೆ ಅಂಬಿ ಕಾಲಿಡುತ್ತಿದ್ದಾರೆ. ಇದರ ಪ್ರಯುಕ್ತ ಸೂಪರ್ ಡ್ಯೂಪರ್ ಹಿಟ್ 'ಅಂತ' ಸಿನಿಮಾ ರೀ ರಿಲೀಸ್ ಆಗುತ್ತಿದೆ. [ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬ ಸಂಭ್ರಮ]

Super Hit Movie Antha to re-release on Ambareesh Birthday

1981 ರಲ್ಲಿ ತೆರೆಕಂಡ ಸಿನಿಮಾ 'ಅಂತ'. ಸಮಾಜದಲ್ಲಿರುವ ಅವ್ಯವಸ್ಥೆ, ನಡೆಯುವ ಭ್ರಷ್ಟಾಚಾರ, ಮೋಸ ಕುರಿತು 'ಅಂತ' ಸಿನಿಮಾ ರೆಡಿಯಾಗಿತ್ತು. ಖಡಕ್ ಪೊಲೀಸ್ ಆಫೀಸರ್ ಆಗಿ ಮತ್ತು ಖತರ್ನಾಕ್ ಖೇಡಿಯಾಗಿ ದ್ವಿಪಾತ್ರದಲ್ಲಿ ಅಂಬರೀಶ್ ಅಮೋಘ ಅಭಿನಯ ನೀಡಿದ ಸಿನಿಮಾ 'ಅಂತ'.

ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಅಂತ' ಸಿನಿಮಾ ಜನ ಮೆಚ್ಚುಗೆ ಗಳಿಸಿ ಗಲ್ಲಪೆಟ್ಟಿಗೆಯಲ್ಲಿ ದಾಖಲೆ ಬರೆಯಿತು. ಅಂಬರೀಶ್ ವೃತ್ತಿಬದುಕಿಗೆ ಹೊಸ ತಿರುವು ಕೊಟ್ಟ 'ಅಂತ' ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಮೇ 29 ರಂದು ರಾಜ್ಯಾದ್ಯಂತ ಮರು ಬಿಡುಗಡೆ ಆಗುತ್ತಿದೆ. [ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು]

Super Hit Movie Antha to re-release on Ambareesh Birthday

'ಅಂತ' ಸಿನಿಮಾ ನಿರ್ಮಾಣದ ಮಾಡಿದ್ದ ಎಚ್.ಎನ್.ಮಾರುತಿ ಮತ್ತು ವೇಣುಗೋಪಾಲ್ ಇದೀಗ ಹಳೆ ಪ್ರತಿಗೆ ಡಿ.ಐ ಮಾಡಿಸಿ ಹೊಚ್ಚ ಹೊಸ ಕಾಪಿ ರೆಡಿಮಾಡಿಸುತ್ತಿದ್ದಾರೆ. ಹೀಗಾಗಿ ಅಂಬಿ ಅಭಿಮಾನಿಗಳು 'ಅಂತ' ಚಿತ್ರವನ್ನ ಹೊಸ ಹುರುಪಿನೊಂದಿಗೆ ವೀಕ್ಷಿಸಬಹುದು. ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಇದಕ್ಕಿಂತ ಮತ್ತೊಂದು ಉಡುಗೊರೆ ಬೇಕಾ? (ಫಿಲ್ಮಿಬೀಟ್ ಕನ್ನಡ)

English summary
Kannada Actor Ambareesh will be celebrating his 63rd birthday on May 29th. On this occasion, his Super-Hit movie 'Antha' is releasing all over Karnataka in a brand new copy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada