»   » 'ಲಿಂಗಾ' ಚಿತ್ರಕ್ಕೆ ರಜನಿಕಾಂತ್ ಸಂಭಾವನೆ ಅಷ್ಟೊಂದಾ!

'ಲಿಂಗಾ' ಚಿತ್ರಕ್ಕೆ ರಜನಿಕಾಂತ್ ಸಂಭಾವನೆ ಅಷ್ಟೊಂದಾ!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ ಭಾರಿ ಬಜೆಟ್ ಚಿತ್ರ 'ಲಿಂಗಾ' ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಮೂಲಕ ರಜನಿ ತಮ್ಮದೇ ಸ್ಟೈಲ್ ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವರ ಹುಟ್ಟಿದ ಹಬ್ಬದ ದಿನ ಅಂದರೆ ಡಿಸೆಂಬರ್ 12ರಂದು ಚಿತ್ರ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ.

ಈಗಾಗಲೆ ಚಿತ್ರದ ವಿತರಣಾ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿ ಇಡೀ ಭಾರತೀಯ ಚಿತ್ರರಂಗವೇ 'ಲಿಂಗಾ' ಚಿತ್ರದ ಕಡೆ ಎದುರು ನೋಡುವಂತಾಗಿದೆ. ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಿರ್ಮಾಪಕರು ಧೀರ ರಾಕ್ ಲೈನ್ ವೆಂಕಟೇಶ್. [ದಕ್ಷಿಣದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಜನಿ 'ಲಿಂಗಾ']

Rajinikanth Lingaa still

ಲಿಂಗಾ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ರು.120 ಕೋಟಿ ಮಾರಾಟವಾಗಿ ದಕ್ಷಿಣ ಚಿತ್ರರಂಗದಲ್ಲೇ ಹೊಸ ಅಧ್ಯಾಯ ಬರೆದಿದೆ. ಈ ಚಿತ್ರಕ್ಕಾಗಿ ರಜನಿಕಾಂತ್ ಅವರು ಎಷ್ಟು ಸಂಭಾವನೆ ಪಡೆದಿರಬಹುದು ಎಂಬುದೂ ಈಗ ಚರ್ಚಾಸ್ಪದ ವಿಷಯವಾಗಿದೆ.

ಮೂಲಗಳ ಪ್ರಕಾರ ರಜನಿಕಾಂತ್ ಅವರ ಸಂಭಾವನೆ ರು.60 ಕೋಟಿ ಎನ್ನಲಾಗಿದೆ. ಈ ಮಾತೇ ನಿಜವಾದರೆ ರಜನಿಕಾಂತ್ ಅವರ ರೇಂಜ್ ಏನು ಎಂಬುದನ್ನು ಊಹಿಸಬಹುದು. ರು.100 ಕೋಟಿ ಬಜೆಟ್ ಚಿತ್ರಕ್ಕೆ ರಜನಿಕಾಂತ್ ಅವರ ಸಂಭಾವನೆಯೇ ಜಾಸ್ತಿಯಾಯಿತು ಎಂದೂ ಕೆಲವರು ಕೊಸರಾಡಿದ್ದಾರೆ.

ಇನ್ನು ಚಿತ್ರದಲ್ಲಿ ರಜನಿಕಾಂತ್ ಅವರದು ದ್ವಿಪಾತ್ರಾಭಿನಯ. ಅನುಷ್ಕಾ, ಸೋನಾಕ್ಷಿ ಸಿನ್ಹಾ ನಾಯಕಿಯರು. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಎ.ಆರ್. ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣ ಇದ್ದು, ಭಾರತದಲ್ಲೇ ಅತ್ಯಂತ ತಾಂತ್ರಿಕ ನೈಪುಣ್ಯತೆಯುಳ್ಳವರು ಕೆಲಸ ಮಾಡುತ್ತಿದ್ದು ಫಸ್ಟ್ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ. [ದಕ್ಷಿಣ ಭಾರತದ ಹೆಚ್ಚು ಸಂಭಾವನೆ ಗಳಿಸುವ ನಾಯಕರು]

ಇನ್ನೊಂದು ಮುಖ್ಯವಾದ ವಿಚಾರ ಎಂದರೆ ರಜನಿಕಾಂತ್ ಹಾಗೂ ರವಿಕುಮಾರ್ ಅವರ ಕಾಂಬಿನೇಷನ್ ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಇವರಿಬ್ಬರ ಜೋಡಿಯಲ್ಲಿ ಮೂಡಿಬಂದ ಮುತ್ತು, ಅರುಣಾಚಲಂ, ನರಸಿಂಹ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಲಿಂಗಾ ಚಿತ್ರದ ಬಗೆಗೂ ಅದೇ ನಿರೀಕ್ಷೆಗಳಿವೆ. (ಏಜೆನ್ಸೀಸ್)

English summary
The speculation is that, in 'Lingaa' movie Rajinikanth gets Rs 60 crore salary. He is in the first position in the India film actors top list salary, says the sources. Meanwhile the movie is all set to release on 12th December, 2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada