»   » ಶಿವಣ್ಣ 'ಶಿವಲಿಂಗ' ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣು!

ಶಿವಣ್ಣ 'ಶಿವಲಿಂಗ' ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣು!

Posted By:
Subscribe to Filmibeat Kannada

ಖ್ಯಾತ ನಿರ್ದೇಶಕ ಪಿ.ವಾಸು ಆಕ್ಷನ್ ಕಟ್ ಹೇಳಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಸಿನಿಮಾ ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

ಬಿಡುಗಡೆ ಆದ ಮೊದಲ ವಾರದಲ್ಲೇ ಕೋಟಿಗಟ್ಟಲೆ ದುಡ್ಡು ಲೂಟಿ ಮಾಡಿರುವ 'ಶಿವಲಿಂಗ' ಸಿನಿಮಾ ಬಗ್ಗೆ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಒಲವು ತೋರಿದ್ದಾರೆ. ['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']


Super Star Rajinikanth watches Shiva Rajkumar's 'Shivalinga'

ಕರ್ನಾಟಕದಲ್ಲಿ 'ಶಿವಲಿಂಗ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಬಂದಿರುವುದನ್ನ ನೋಡಿ ರಜನಿಕಾಂತ್ ಗೆ 'ಶಿವಲಿಂಗ' ಚಿತ್ರ ನೋಡುವ ಬಯಕೆ ಆಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ 'ಶಿವಲಿಂಗ' ಚಿತ್ರತಂಡ ರಜನಿಗಾಗಿ ಚೆನ್ನೈನಲ್ಲಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ಎನ್ನುವುದು ಮೂಲಗಳಿಂದ ಬಂದಿರುವ ಮಾಹಿತಿ. [ಅಂದು ಸೌಂದರ್ಯ; ಇಂದು ವೇದಿಕಾ.! 'ಶಿವಲಿಂಗ' ಅಚ್ಚರಿ.!]


'ಶಿವಲಿಂಗ' ಸಿನಿಮಾ ನೋಡಿ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಣ್ಣಾವ್ರ ಮಗ ಶಿವರಾಜ್ ಕುಮಾರ್ ಮತ್ತು ನಾಯಕಿ ವೇದಿಕಾ ನಟನೆ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. [ಶಿವಣ್ಣನ 'ಶಿವತಾಂಡವ'ಕ್ಕೆ ಬೆಚ್ಚಿ ಬಿದ್ದ ಬಾಕ್ಸಾಫೀಸ್]


ಗಾಂಧಿನಗರದ ಗಲ್ಲಿಗಳಲ್ಲಿ ಹಬ್ಬಿರುವ ಗಾಸಿಪ್ ಪ್ರಕಾರ, 'ಶಿವಲಿಂಗ' ಚಿತ್ರವನ್ನ ರಜನಿಕಾಂತ್ ರೀಮೇಕ್ ಮಾಡಲಿದ್ದಾರಂತೆ. ಹೇಗಿದ್ದರೂ, ರಜನಿ ಸಾರ್ 'ಶಿವಲಿಂಗ' ಸಿನಿಮಾ ನೋಡಿ ಇಷ್ಟಪಟ್ಟಿದ್ದಾಗಿದೆ. ಅವರು ಮನಸ್ಸು ಮಾಡಿದರೆ, 'ಲಿಂಗ' ರಜನಿ, 'ಶಿವಲಿಂಗ' ಆಗುವುದಕ್ಕೆ ಹೆಚ್ಚು ಟೈಮ್ ಬೇಕಾಗಿಲ್ಲ.!

English summary
Super Star Rajinikanth watched Kannada Actor Shiva Rajkumar starrer 'Shivalinga' movie yesterday (February 18th) and appreciated.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada