»   » ಹೈಕೋರ್ಟ್ ನಲ್ಲಿ ಸೂಪರ್ ಸ್ಟಾರ್ ರಜನಿಗೆ ಗೆಲುವು

ಹೈಕೋರ್ಟ್ ನಲ್ಲಿ ಸೂಪರ್ ಸ್ಟಾರ್ ರಜನಿಗೆ ಗೆಲುವು

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಚಿತ್ರ ನಿರ್ಮಾಪಕರ ನಡುವಿನ ಹಗ್ಗಜಗ್ಗಾಟಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳಹಾಡಿದೆ. ಮುಂಬೈ ಮೂಲದ ವರ್ಷಾ ನಿರ್ಮಾಣ ಸಂಸ್ಥೆ ರಜನಿಕಾಂತ್ ಹೆಸರಲ್ಲಿ ಸಿನಿಮಾ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಈ ವಿವಾದ ತಲೆದೋರಿತ್ತು.

ಫೈಸಲ್ ಸೈಫ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ 'ಮೈ ಹೂ ರಜನಿಕಾಂತ್' ಎಂದು ಹೆಸರಿಡಲಾಗಿತ್ತು. ತಮ್ಮ ಅನುಮತಿ ಇಲ್ಲದೆ ತನ್ನ ಹೆಸರಿನಲ್ಲಿ ಚಿತ್ರ ನಿರ್ಮಿಸುತ್ತಿರುವ ಬಗ್ಗೆ ಸ್ವತಃ ರಜನಿಕಾಂತ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. [ಮುಳುಗಿದ ವಿತರಕರಿಗೆ ರಜನಿಕಾಂತ್ ಪುನರ್ಜನ್ಮ ಪ್ರಾಪ್ತಿ]

Rajinikanth

ಇದೀಗ 'ಮೈ ಹೂ ರಜನಿಕಾಂತ್' ಶೀರ್ಷಿಕೆ ಕೈಬಿಡುವಂತೆ ಶಾಶ್ವತ ತಡೆಯಾಜ್ಞೆ ನೀಡಿದೆ. ರಜನಿಕಾಂತ್ ಅವರ ಹೆಸರು, ಭಾವಚಿತ್ರ, ವ್ಯಂಗ್ಯ ಚಿತ್ರ ಹಾಗೂ ಅವರ ಶೈಲಿಯನ್ನು ಅನುಕರಣೆ ಮಾಡದಂತೆ ವರ್ಷಾ ನಿರ್ಮಾಣ ಸಂಸ್ಥೆಗೆ ಸೂಚಿಸಿದೆ.

ವ್ಯಕ್ತಿಯೊಬ್ಬರು ತಾರಾ ಮಟ್ಟಕ್ಕೆ ಏರಿದ ಮೇಲೆ ಅವರ ವೈಯಕ್ತಿಕ ಬದುಕನ್ನು ಚಿತ್ರೀಕರಿಸುವಾಗ ಅವರ ಅನುಮತಿ ಪಡೆಯುವ ಅಗತ್ಯವಿದೆ ಎಂದು ನ್ಯಾಯಾಧೀಶ ಆರ್ ಸುಬ್ಬಯ್ಯ ಹೇಳಿದ್ದಾರೆ. ಈ ಮೂಲಕ ರಜನಿಕಾಂತ್ ಅವರು ಹೈಕೋರ್ಟ್ ಕಟಕಟೆಯಲ್ಲಿ ಗೆದ್ದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಫೈಸಲ್ ಸೈಫ್ ಅವರು, "ಚಿತ್ರದ ಪಾತ್ರದ ಹೆಸರಿಗೆ ತಕ್ಕಂತೆ ತಾವು ಶೀರ್ಷಿಕೆಯನ್ನು ನೀಡಿದ್ದೆವು. ಕಥೆ ಆ ಪಾತ್ರದ ಸುತ್ತ ಸುತ್ತುತ್ತದೆ. ಒಬ್ಬ ನಿರ್ದೇಶಕ, ಬರಹಗಾರನಾಗಿ ರಜನಿ ಅವರ ಮನಸ್ಸನ್ನು ನೋಯಿಸಲು ತಮಗೂ ಇಷ್ಟವಿಲ್ಲ..."

"ಖಂಡಿತವಾಗಿಯೂ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುತ್ತೇನೆ. ಆದರೆ ಚಿತ್ರದ ನಿರ್ಮಾಪಕರು ಮಾತ್ರ ಸುಪ್ರೀಂಕೋರ್ಟ್ ಹೋಗಲು ನಿರ್ಧರಿಸಿದ್ದಾರೆ. ಪರ್ಸನಲ್ ಆಗಿ ಈ ವ್ಯಾಜ್ಯವನ್ನು ಮುಂದುವರಿಸಲು ನನಗೂ ಇಷ್ಟವಿಲ್ಲ. ಆದರೆ ನಿರ್ಮಾಪಕರನ್ನು ತಡೆಯುವ ಶಕ್ತಿ ತಮಗಿಲ್ಲ" ಎಂದಿದ್ದಾರೆ. (ಏಜೆನ್ಸೀಸ್)

English summary
The battle between Rajinikanth and the makers of the Bollywood film Main Hoon Rajinikanth has come to an end. The makers have lost the case and the court has asked them to change the title. While the director Faisal Saif is keen to go for a change, the producers are willing to take the case to the Supreme Court.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada