TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಉಪೇಂದ್ರ ಸೂಪರೋ ರಂಗ; ಮಂಜು ಬಂಡವಾಳ
ಈ ಸಂಗತಿ ಮೇಲ್ನೋಟಕ್ಕೆ ಅಚ್ಚರಿ ಎನಿಸಿದರೂ ಇದರಲ್ಲಿ ಅಂತಹ ವಿಶೇಷವೇನಿಲ್ಲ. ಕಾರಣ, ಉಪೇಂದ್ರ ನಟನೆಯ 'ಗಾಡ್ ಫಾದರ್' ಚಿತ್ರಕ್ಕೆ ಕೆ ಮಂಜು ನಿರ್ಮಾಪಕರಾದರೂ ಅವರು ಚಿತ್ರವನ್ನು ರು. 7 ಕೋಟಿಗೆ ನಿರ್ಮಿಸಿ ರು. 10 ಕೋಟಿಗೆ ಮಾರಿಬಿಟ್ಟಿದ್ದಾರೆ. ಆ ಚಿತ್ರವನ್ನು ಖರೀದಿಸಿದ್ದು ಇತ್ತೀಚಿಗೆ ಹೆಚ್ಚು ಕನ್ನಡ ಚಿತ್ರಗಳನ್ನು ವಿತರಣೆ ಮಾಡುತ್ತಿರುವ ವಿತರಕ 'ಪ್ರಸಾದ್ ವೆಂಚರ್ಸ್' ನ ಪ್ರಸಾದ್.
ಹೀಗಾಗಿ 'ಗಾಡ್ ಫಾದರ್' ಚಿತ್ರ ಸೋತರೂ ನಿರ್ಮಾಪಕ ಕೆ ಮಂಜುಗೆ ಆ ಸೋಲಿನ ಬಿಸಿ ತಟ್ಟಿಲ್ಲ. ಹೀಗೇ ಇನ್ನೊಂದು ಚಿತ್ರ ಮಾಡಿ ಅದನ್ನು ಅವರು ಮಾರಿಬಿಡುವ ಸಾಧ್ಯತೆ ಅಲ್ಲಗಳಿಯುವಂತಿಲ್ಲ. ಈ ಚಿತ್ರವನ್ನು ಪಕ್ಕಾ ಸೋತಿಗೆ ಎಂದು ನಾವು ಹಣೆಪಟ್ಟೆ ಹಚ್ಚವಂತೆಯೂ ಇಲ್ಲ. ಕಾರಣ, ಚಿತ್ರವನ್ನು ಖರೀದಿಸಿರುವ ಪ್ರಸಾದ್, ಈ ಬಗ್ಗೆ ನಿಖರವಾದ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ. ಹೀಗಿರುವಾಗ ಗಳಿಕೆ ದೃಷ್ಟಿಯಿಂದ ಚಿತ್ರ ಸೋತಿದೆ ಅನ್ನಲಾಗದು.
ಆದರೆ, ವಿಮರ್ಶಕರು ಹಾಗೂ ಪ್ರೇಕ್ಷಕರ ದೃಷ್ಟಿಯಿಂದ, ಈ ಚಿತ್ರ ಅಷ್ಟೇನೂ ಕ್ಲಿಕ್ ಆಗಿಲ್ಲ ಎನ್ನಲೇಬೇಕು. ಆದರೂ ಮತ್ತೆ ಆಪ್ತಮಿತ್ರರಾದ ಉಪೇಂದ್ರ ಹಾಗೂ ಕೆ ಮಂಜು ಒಂದಾಗಿ ಚಿತ್ರ ಮಾಡಲಿದ್ದಾರೆ. ಚಿತ್ರದ ಶೀರ್ಷಿಕೆಯೂ ನಿರ್ಧಾರವಾಗಿದೆ. ಅಂದಹಾಗೆ, ಈ 'ಸೂಪರೋ ರಂಗ' ಟೈಟಲ್ ಉಪೇಂದ್ರರ ಈ ಮೊದಲಿನ ಸೂಪರ್ ಚಿತ್ರದ 'ಸಿಕ್ಕಾಪಟ್ಟೆ ಇಷ್ಟಪಟ್ಟೆ...' ಹಾಡಿನಲ್ಲಿರುವ ಸಾಹಿತ್ಯ ಒಂದು ತುಂಡು! (ಒನ್ ಇಂಡಿಯಾ ಕನ್ನಡ)