ಬರ್ತ್ ಡೇ ಆಚರಿಸಿಕೊಳ್ಳುವ ಮೂಡ್ ನಲ್ಲಿಲ್ಲ ರಜನಿಕಾಂತ್!
ಡಿಸೆಂಬರ್ 12 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ 66ನೇ ಹುಟ್ಟುಹಬ್ಬ. ರಜನಿ ಬರ್ತ್ ಡೇ ಅಂದ್ರೆ, ದೇಶಾದ್ಯಂತ ಅವರ ಅಭಿಮಾನಿಗಳು ಕಟೌಟ್, ಪೋಸ್ಟರ್ ಗಳು ಹಾಕಿ ಸೆಲೆಬ್ರೇಟ್ ಮಾಡಲಾಗುತ್ತೆ. ಆದ್ರೆ, ಈ ಬಾರಿ ರಜನಿಕಾಂತ್ ಹುಟ್ಟುಹಬ್ಬದ ಆಚರಣೆ ಇಲ್ಲ.
ಹೌದು, ಈ ಬಾರಿ ಜನುಮಾದಿನವನ್ನ ಸಂಭ್ರಮಿಸದಂತೆ ತಲೈವಾ ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಅಭಿಮಾನಿಗಳಿಗೂ ''ಈ ಬಾರಿ ನನ್ನ ಹುಟ್ಟುಹಬ್ಬವನ್ನ ಆಚರಣೆ ಮಾಡಬೇಡಿ'' ಎಂದು ಸೂಚನೆ ಕೊಟ್ಟಿದ್ದಾರೆ.[ರಜನಿಕಾಂತ್ ಗೆ '2.0' ಚಿತ್ರೀಕರಣದ ವೇಳೆ ಗಾಯ ! ]

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದಿಂದ ಇಡೀ ತಮಿಳುನಾಡು ಶೋಕಾಚರಣೆಯಲ್ಲಿ ಮುಳುಗಿದೆ. ಇಂತಹ ಸಂಧರ್ಭದಲ್ಲಿ ಬರ್ತ್ ಡೇ ಸೆಲೆಬ್ರೇಷನ್ ಮಾಡುವುದು ಸರಿಯಲ್ಲ. ಹೀಗಾಗಿ ಈ ಬಾರಿ ಹುಟ್ಟುಹಬ್ಬ ಬೇಡವೇಂದು ರಜನಿಕಾಂತ್ ತಿಳಿಸಿದ್ದಾರೆ.[ಜಯಲಲಿತಾ ವಿಧಿವಶ: ರಜನಿಕಾಂತ್, ಅಮಿತಾಬ್ ಬಚ್ಚನ್ ಸಂತಾಪ ]

ಕಳೆದ ವರ್ಷವೂ ರಜನಿಕಾಂತ್ ಅವರು ತಮ್ಮ ಬರ್ತ್ ಡೇ ಆಚರಣೆ ಮಾಡಿಕೊಂಡಿರಲಿಲ್ಲ. ಯಾಕಂದ್ರೆ, ಕಳೆದ ವರ್ಷ ಚೆನ್ನೈ ಮಹಾನಗರಿ ಮಹಾಮಳೆಗೆ ಆಹುತಿಯಾಗಿ, ಜನಜೀವನ ತತ್ತರಿಸಿತ್ತು. ಹೀಗಾಗಿ, ತಲೈವಾ ಕಳೆದ ಬಾರಿಯೂ ಹುಟ್ಟುಹಬ್ಬವನ್ನ ಆಚರಿಸಲಿಲ್ಲ. ಆದ್ರೆ, ಕೆಲವೊಂದು ಅಭಿಮಾನಿಗಳು ಸೂಪರ್ ಸ್ಟಾರ್ ಜನುಮಾದಿನವನ್ನ ಕೊಂಡಾಡಿದ್ದರು.


Click it and Unblock the Notifications











