For Quick Alerts
  ALLOW NOTIFICATIONS  
  For Daily Alerts

  ಗೋಲಿಸೋಡಾ ಖ್ಯಾತಿಯ ವಿಜಯ್ ನಿರ್ದೇಶನದಲ್ಲಿ ಶಿವಣ್ಣ!

  |

  ಎ.ಎಂ. ಆರ್ ರಮೇಶ್ ನಿರ್ದೇಶನದ ವೀರಪ್ಪನ್ ಕುರಿತ ಬಹುಭಾಷಾ ಚಿತ್ರ ''ಅಟ್ಟಹಾಸ'' ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕನ್ನಡಿಗರಿಗೆ ಪರಿಚಯವಾಗಿದ್ದ ವಿಜಯ್ ಮಿಲ್ಟನ್, ಈಗ ಶಿವಣ್ಣನ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧರಾಗುತ್ತಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸುತ್ತಿರುವ ವಿಜಯ್ ಮಿಲ್ಟನ್ ಅವರು ಸೆಂಚುರಿ ಸ್ಟಾರ್ ಶಿವಣ್ಣನ ಜೊತೆ ಕೆಲ್ಸ ಮಾಡಲು ಥ್ರಿಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.

  ರಾಜ್ ಕುಮಾರ್ ಅಪಹರಣ ಆದಾಗ ವಿಷ್ಣುದಾದಾ ಆಡಿದ್ದ ಮಾತುಗಳು ಇಂದಿಗೂ ಜೀವಂತ | Rajkumar | Filmibeat Kannada

  ಡಾ. ಶಿವರಾಜ್ ಕುಮಾರ್ ಅವರ 58ನೇ ಹುಟ್ಟುಹಬ್ಬದ ಅಂಗವಾಗಿ ಹೊಸ ಚಿತ್ರಗಳು ಸೆಟ್ಟೇರಿದ ಸುದ್ದಿಗಳು ಬರುತ್ತಿವೆ. ತಮಿಳಿನ ಸೂಪರ್ ಸ್ಟಾರ್ ಸೂರ್ಯ ಅವರು ಕೂಡಾ ಶಿವಣ್ಣನಿಗೆ ವಿಶ್ ಮಾಡಿ ಹೊಸ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಧನಂಜಯ್ ಅಭಿನಯದ ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶಕರಾಗಿದ್ದಾರೆ ಎಲ್ಲರಿಗೂ ಶುಭವಾಗಲಿ ಎಂದು ಸೂರ್ಯ ಶುಭಹಾರೈಸಿದ್ದಾರೆ.

  ಅಸುರರ ಲೋಕಕ್ಕೆ ಭಜರಂಗಿಯ ಭರ್ಜರಿ ಎಂಟ್ರಿಅಸುರರ ಲೋಕಕ್ಕೆ ಭಜರಂಗಿಯ ಭರ್ಜರಿ ಎಂಟ್ರಿ

  ವಿಜಯ್ ಮಿಲ್ಟನ್ ಪ್ರೊಡೆಕ್ಷನ್ ರಫ್ ನೋಟ್ ಹಾಗೂ ಕೃಷ್ಣ ಸಾರ್ಥಕ್ ನಿರ್ಮಾಣದ ಈ ಚಿತ್ರಕ್ಕೆ ಜೆ ಅನೂಪ್ ಸೀಳನ್ ಸಂಗೀತ ನೀಡುತ್ತಿದ್ದಾರೆ.

  ಜನಪ್ರಿಯ ಚಿತ್ರಕರ್ಮಿ ವಿಜಯ್ ಮಿಲ್ಟನ್:
  ನೆಂಜಿನಿಲೆ, ಹೆಲೋ, ಕಾದಲ್, ಕಾದಲಿಲ್ ವಿಳುಥೇನ್, ಉಧಯನ್, ಗೋಲಿ ಸೋಡಾ, ಆನ್ ದೇವತೈ ಮುಂತಾದ ಚಿತ್ರಗಳಲ್ಲಿ ಸಿನಿಮಾಟೋಗ್ರಾಫರ್ ಆಗಿ ಮಿಂಚಿದವರು. ವಿಜಯ್ ನಿರ್ದೇಶನದ ಗೋಲಿಸೋಡಾ ತಮಿಳುನಾಡು ರಾಜ್ಯ ಪ್ರಶಸ್ತಿಯಲ್ಲಿ ಎರಡನೆ ಸ್ಥಾನ ಪಡೆದುಕೊಂಡಿತ್ತು. ವಿಕ್ರಮ್ ಅಭಿನಯದ 10 ಎಂಡ್ರಥುಕುಲ್ಲಾ, ಕಡುಗು, ಗೋಲಿಸೋಡಾ 1 ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪೂರ್ಣಪ್ರಮಾಣದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

  ಇನ್ನೊಂದೆಡೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಿವಣ್ಣ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಭಜರಂಗಿ 2, ಆರ್ ಡಿಎಕ್ಸ್, ಭೈರತಿ ರಣಗಲ್ ಪ್ರಮುಖ ಚಿತ್ರಗಳಾಗಿವೆ. ಈ ಪೈಕಿ ಭಜರಂಗಿ 2 2020ರಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದ್ದರೆ, ಮಿಕ್ಕೆರಡು ಚಿತ್ರ ಹಾಗೂ ವಿಜಯ್ ಮಿಲ್ಟನ್ ನಿರ್ದೇಶನದ ಹೆಸರಿಡದ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ.

  English summary
  Cinematographer Vijay Milton is all set to make his debut as a director in Kannada film industry. For the first project, Vijay Milton will be working with Kannada superstar Shivarajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X