»   » 'ಪದ್ಮಾವತಿ' ವಿರುದ್ಧದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್.!

'ಪದ್ಮಾವತಿ' ವಿರುದ್ಧದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್.!

Posted By:
Subscribe to Filmibeat Kannada

ವಿವಾದಗಳಿಂದಲೇ ಸುದ್ದಿಯಾಗಿರುವ 'ಪದ್ಮಾವತಿ' ಸಿನಿಮಾದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನ ಕೈಬಿಡಬೇಕು ಹಾಗೂ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಹಿರಿಯ ವಕೀಲ ಮನೋಹರ್ ಲಾಲ್ ಶರ್ಮ ಸಲ್ಲಿಸಿದ ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಶರ್ಮಾ ಸಲ್ಲಿಸಿದ್ದ ಅರ್ಜಿಯಲ್ಲಿ 'ಪದ್ಮಾವತಿ' ಸಿನಿಮಾ ನಿರ್ದೇಶಕರ ವಿರುದ್ದ ಕೋರ್ಟ್ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿಯೂ ಮನವಿ ಮಾಡಲಾಗಿತ್ತು ಹಾಗೂ ಸಿನಿಮಾದಲ್ಲಿರೋ ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆದು ಹಾಕಬೇಕಾಗಿ ಮನವಿ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಈ ಮನವಿಯನ್ನ ನಿರಾಕರಿಸಿದೆ. ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಬರದೆ ಸಿನಿಮಾದಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ನಿರ್ಧರಿಸೋದು ಕಷ್ಟವಾಗುತ್ತೆ ಎಂದು ತಿಳಿಸಿದೆ.

 supreme court hear plea against padmavati

ಇದರ ಜೊತೆಯಲ್ಲಿ ರಾಜಕಾರಣಿಗಳು ಸಿನಿಮಾ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿ ಮಾತನಾಡುವುದನ್ನ ನಿಲ್ಲಿಸಬೇಕು. ಸೆನ್ಸಾರ್ ಪ್ರಮಾಣ ಪತ್ರ ಪಡೆಯದೆ ವಿದೇಶದಲ್ಲಿಯೂ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಸೆನ್ಸಾರ್ ಗಾಗಿ ಸಿನಿಮಾ ಸಲ್ಲಿಕೆಯಾಗಿದ್ದು ಪ್ರಮಾಣ ಪತ್ರಕ್ಕಾಗಿ ಸಿನಿಮಾತಂಡ ಕಾದಿದೆ.

English summary
The Supreme Court dismissed a petition filed by lawyer Manohar Lal Sharma, seeking a stay on the release of the Sanjay Leela Bhansali's 'Padmavati' film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada