twitter
    For Quick Alerts
    ALLOW NOTIFICATIONS  
    For Daily Alerts

    ಪ್ರಿಯಾ ಪ್ರಕಾಶ್ ವಾರಿಯರ್ ಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್

    By Bharath Kumar
    |

    ಕಣ್ಸನ್ನೆಯ ಮೂಲಕ ಇಡೀ ರಾಷ್ಟ್ರದಲ್ಲೇ ಸಂಚಲನ ಸೃಷ್ಠಿಸಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನ ಸುಪ್ರೀಂಕೋರ್ಟ್ ತಡೆ ಹಿಡಿದಿದೆ.

    'ಒರು ಅದಾರ್ ಲವ್' ಚಿತ್ರದ ಹಾಡೊಂದರಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಆರೋಪಿಸಿ ಕೆಲವು ಮುಸ್ಲಿಂ ಸಮುದಾಯಗಳು ಚಿತ್ರತಂಡ ಹಾಗೂ ನಟಿಯ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದರು.

    ಈ ಪ್ರಕರಣದ ತನಿಖೆಗೆ ತಡೆ ನೀಡಬೇಕೆ ಎಂದು ಕೋರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ನಿರ್ದೇಶಕ, ನಿರ್ಮಾಪಕ ಸುಪ್ರೀಂಕೋರ್ಟ್ ಮೊರೆಹೋಗಿದ್ದರು. ನಟಿಯ ಅರ್ಜಿಯನ್ನ ಸ್ವಾಗತಿಸಿದ ಕೋರ್ಟ್ ತನಿಖೆಗೆ ಮುಂದಾಗದಂತೆ ಪೊಲೀಸರಿಗೆ ಸೂಚಿಸಿದೆ.

    ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

    Supreme Court stays all criminal proceedings against Priya Prakash Varrier

    'ಒರು ಅದಾರ್ ಲವ್' ಚಿತ್ರದ 'ಮಾಣಿಕ್ಯ ಮಲರಾಯ ಪೂವಿ' ಹಾಡು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಆದ್ರೆ, ಈ ಹಾಡಿನಲ್ಲಿ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುತ್ತಿದೆ.

    ಈ ಹಿನ್ನೆಲೆಯಲ್ಲಿ ಹೈದರಾಬಾದ್‌ ನ ಫಲಕ್ನಾಮಾ ಠಾಣೆಯಲ್ಲಿ, ಮುಂಬೈನ ಔರಂಗಾಬಾದ್ ಹಾಗೂ ಇನ್ನೊಂದು ಕಡೆ ಸೇರಿ ಒಟ್ಟು ಮೂರು ನಗರಗಳಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.

    English summary
    The Supreme Court (SC) today stayed all criminal proceedings against teenage actress Priya Prakash Varrier for the 'wink song', against which some Muslim groups had lodged FIRs.
    Wednesday, February 21, 2018, 15:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X