»   » ಸೆಟ್ಟೇರುವ ಮುಂಚೆಯೇ ಕೋಟಿಗೊಬ್ಬನಿಗೆ ಅದ್ಧೂರಿ ಸ್ವಾಗತ

ಸೆಟ್ಟೇರುವ ಮುಂಚೆಯೇ ಕೋಟಿಗೊಬ್ಬನಿಗೆ ಅದ್ಧೂರಿ ಸ್ವಾಗತ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಸದ್ಯ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 22 ವರ್ಷ ಪೂರೈಸಿರುವುದೇ ಸುದ್ದಿ. ಸಾವಿರಾರು ಅಭಿಮಾನಿಗಳು ಈಗಾಗಲೇ ಕಿಚ್ಚನಿಗೆ ಶುಭಾಶಯ ತಿಳಿಸಿದ್ದು ಚಿತ್ರರಂಗದ ಹಲವಾರು ಜನರು ಕೂಡ ಸುದೀಪ್ ಅವರ ಸಾಧನೆಗೆ ಅಭಿನಂದಿಸಿದ್ದಾರೆ.

'ದಿ ವಿಲನ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಿಚ್ಚ ಸುದೀಪ್ ನಂತರ ಕೋಟಿಗೊಬ್ಬ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಇದರ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಟ್ವಿಟ್ ಮಾಡಿದ್ದರು. 'ಕೋಟಿಗೊಬ್ಬ ' ಸಿನಿಮಾ ಸೆಟ್ಟೇರುವ ಮುಂಚೆಯೇ ಕಿಚ್ಚನಿಗೆ ಚಿತ್ರತಂಡದಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.

'ಕೋಟಿಗೊಬ್ಬ 3' ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು 'ದಿ ವಿಲನ್' ಸಿನಿಮಾ ಸೆಟ್ ಗೆ ಭೇಟಿ ನೀಡಿ ಕಿಚ್ಚನಿಗೆ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ಹಾರ ಹಾಕಿ ಸನ್ಮಾನ ಮಾಡಿ ಎಲ್ಲರಿಗೂ ಸಿಹಿ ಹಂಚಿದ್ದಾರೆ.

Surappa Babu has honored to actor Kiccha Sudeep

22 ವರ್ಷದ ಸುದೀರ್ಘ ಸಿನಿಮಾ ಪ್ರಯಾಣದ ಬಗ್ಗೆ ಕಿಚ್ಚ ಬರೆದ

'ಕೋಟಿಗೊಬ್ಬ3' ಸಿನಿಮಾವನ್ನ ನವ ನಿರ್ದೇಶಕ ಕಾರ್ತಿಕ್ ಡೈರೆಕ್ಟ್ ಮಾಡುತ್ತಿದ್ದಾರೆ. ಇಡೀ ಸಿನಿಮಾತಂಡ ಕಿಚ್ಚನನ್ನ ಭೇಟಿ ಮಾಡಿ ಶುಭಾಶಯ ಕೋರಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಕಿಚ್ಚನ ಕೈನಲ್ಲಿ ಸಾಕಷ್ಟು ಸಿನಿಮಾಗಳಿದ್ದು 'ಕೋಟಿಗೊಬ್ಬ3' ಚಿತ್ರದಲ್ಲಿ ಮೊದಲು ಅಭಿನಯಿಸುತ್ತಾರಾ, ಅಥವಾ 'ಪೈಲ್ವಾನ್' ಚಿತ್ರದಲ್ಲಿ ಭಾಗಿ ಆಗುತ್ತಾರಾ ಅನ್ನುವುದನ್ನ ಸುದೀಪ್ ಅವರೇ ಖಚಿತ ಪಡಿಸಬೇಕಾಗಿದೆ.

English summary
Kannada movie Producer Surappa Babu has honored to actor Kiccha Sudeep, who has completed 22 years in the film industry.Surappa Babu is a producer of Kotigobba3 film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada