»   » ಕಿಚ್ಚ ಸುದೀಪ್ ರನ್ನ ಭೇಟಿ ಮಾಡಿದ ಡಿ ಕೆ ಸುರೇಶ್

ಕಿಚ್ಚ ಸುದೀಪ್ ರನ್ನ ಭೇಟಿ ಮಾಡಿದ ಡಿ ಕೆ ಸುರೇಶ್

Posted By:
Subscribe to Filmibeat Kannada

ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿನಿಮಾ ತಾರೆಯರು ರಾಜಕೀಯಕ್ಕೆ ಬರುತ್ತಾರೆ ಅನ್ನುವ ಸುದ್ದಿಗಳು ಹರಿದಾಡೋದಕ್ಕೆ ಶುರುವಾಗುತ್ತೆ. ಕಳೆದ ಒಂದು ತಿಂಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಂಗಾಯಣ ರಘು, ಅಮೂಲ್ಯ, ಕಿಚ್ಚ ಸುದೀಪ್ ಇವರೆಲ್ಲರೂ ರಾಜಕೀಯ ಅಖಾಡಕ್ಕೆ ಇಳಿಯುತ್ತಾರೆ ಅನ್ನುವ ಸುದ್ದಿಗಳು ಕೇಳಿ ಬರುತ್ತಿವೆ.

ಗಾಸಿಪ್ ಗಳಿಗೆ ಪುಷ್ಟಿ ನೀಡುವಂತೆ ಸ್ಟಾರ್ ಗಳನ್ನ ರಾಜಕೀಯ ಗಣ್ಯರು ಭೇಟಿ ಮಾಡಿ ಗಂಟೆಗಟ್ಟಲೆ ಮಾತನಾಡುತ್ತಿರುವುದು ಅಭಿಮಾನಿಗಳಿಗೆ ಗೊಂದಲವನ್ನ ಸೃಷ್ಟಿ ಮಾಡುತ್ತಿವೆ. 'ಜೆ ಡಿ ಎಸ್' ಪಕ್ಷದ ವತಿಯಿಂದ ಮಾಜಿ ಸಿ ಎಂ ಕುಮಾರಸ್ವಾಮಿ ಕಿಚ್ಚನ ಮನೆಗೆ ಭೇಟಿ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಚರ್ಚೆ ಕೂಡ ಮಾಡಿದ್ದರು.

Suresh meet Kannada Actor Kiccha Sudeep

ಕಿಚ್ಚ ಸುದೀಪ್ ರನ್ನು 'ಕೈ' ಹಿಡಿಯುವಂತೆ ಕೇಳಿಕೊಂಡ್ರಾ ರಮ್ಯಾ?

ಇತ್ತೀಚಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ಸೇರುವಂತೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸುದೀಪ್ ಅವರಿಗೆ ಆಹ್ವಾನ ನೀಡಿದ್ದಾರೆ ಅನ್ನುವ ಸುದ್ದಿಗಳು ಕೇಳಿ ಬಂದಿತ್ತು. ಈ ಸುದ್ದಿ ಜನರ ಮಧ್ಯೆ ಚರ್ಚೆಯಲ್ಲಿರುವಾಗಲೇ ಡಿ ಕೆ ಸುರೇಶ್ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದಾರೆ.

ಡಿ ಕೆ ಸುರೆಶ್ ಹಾಗೂ ಸುದೀಪ್ ಜೊತೆಯಲ್ಲಿರುವ ಪೊಟೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ಪೋಟೋ ನೋಡಿದವರು ಕಿಚ್ಚ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ.

Suresh meet Kannada Actor Kiccha Sudeep

ಆದರೆ ಕೃಷಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಕಿಚ್ಚ ನಾನು ರಾಜಕರಣಿ ಅಲ್ಲ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

English summary
DK Suresh meets Kannada Actor Kiccha Sudeep his residency.There was a gossip that Sudeep would join politics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X