»   » ಪ್ರತಿಮೆ ರೂಪ ಪಡೆದ 'ಸೂರ್ಯವಂಶ'ದ ಸತ್ಯಮೂರ್ತಿ ವಿಷ್ಣು

ಪ್ರತಿಮೆ ರೂಪ ಪಡೆದ 'ಸೂರ್ಯವಂಶ'ದ ಸತ್ಯಮೂರ್ತಿ ವಿಷ್ಣು

Posted By:
Subscribe to Filmibeat Kannada

ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನೂರಾರು ಪ್ರತಿಮೆಗಳು ಕರ್ನಾಟಕದ ತುಂಬ ಇದೆ. ಆ ಸಾಲಿಗೆ ಈಗ ಮತ್ತೊಂದು ಹೊಸ ಪ್ರತಿಮೆ ಸೇರಿಕೊಳ್ಳುತ್ತಿದೆ. ಇದು 'ಸೂರ್ಯವಂಶ' ಸಿನಿಮಾದ ವಿಷ್ಣುವರ್ಧನ್ ಅವರ ಪಾತ್ರದ ಶೈಲಿಯಲ್ಲಿರುವುದು ವಿಶೇಷ.

ವಿಷ್ಣುವರ್ಧನ್ ಅವರ ಸಿನಿಮಾಗಳ ಪೈಕಿ 'ಸೂರ್ಯವಂಶ' ಎಂದಿಗೂ ಮರೆಯಲಾಗದ ಸಿನಿಮಾ. ಈ ಸಿನಿಮಾದ ಸತ್ಯಮೂರ್ತಿ ಪಾತ್ರ ಎಷ್ಟೋ ಜನರ ಮನಸ್ಸಿನಲ್ಲಿ ಇಂದಿಗೂ ಶಾಶ್ವತವಾಗಿ ನೆಲೆಸಿದೆ. ಅಂತಹ ಅದ್ಭುತ ಪಾತ್ರದ ವಿಷ್ಣು ಪ್ರತಿಮೆ ಈಗ ಸಿದ್ಧವಾಗಿದೆ. ಮುಂದೆ ಓದಿ....[ವಿಷ್ಣು ದಾದನ ಈ ಪುತ್ಥಳಿ ಮಾಡಿದ 'ಶಿಲ್ಪಿ'ಗೆ ಸುದೀಪ್ ಸಲ್ಯೂಟ್]

ಇದೇ ಮೊದಲು

ಇದೇ ಮೊದಲ ಬಾರಿಗೆ 'ಸೂರ್ಯವಂಶ'ದ ಸತ್ಯಮೂರ್ತಿ ಪ್ರತಿಮೆ ತಲೆ ಎತ್ತಿ ನಿಲ್ಲುವುದಕ್ಕೆ ಸಜ್ಜಾಗಿದೆ.

'ವೀರಕಪುತ್ರ ಶ್ರೀನಿವಾಸ್' ಸ್ಥಾಪನೆ

'ವಿಷ್ಣು ಸೇನಾ ಸಮಿತಿ'ಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಈ ಹೊಸ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.[ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್]

ಪ್ರತಿಮೆಯ ಬಗ್ಗೆ

'ಸೂರ್ಯವಂಶ'ದ ಸತ್ಯಮೂರ್ತಿ ಪ್ರತಿಮೆ 3 ಅಡಿ ಎತ್ತರ, 2 ಅಡಿ ಅಗಲವಿದೆ. ಪುತ್ಥಳಿ ತಯಾರಿಕೆಗೆ ಫೈಬರ್ ಮೆಟೀರಿಯಲ್ ಬಳಸಲಾಗಿದೆ.

ಶಿಲ್ಪಿ ಶಿವಕುಮಾರ್ ಕೆತ್ತನೆ

ಶಿಲ್ಪಿ ಶಿವಕುಮಾರ್ ಈ ಪ್ರತಿಮೆಯ ಹಿಂದಿನ ಶಿಲ್ಪಿ. ಈಗಾಗಲೇ ಶಿವಕುಮಾರ್ ಡಾ.ರಾಜ್ ಕುಮಾರ್ ಅವರ ಅನೇಕ ಪ್ರತಿಮೆಗಳ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ.

ಜೂನ್ 18ಕ್ಕೆ ಅನಾವರಣ

ಈ ಅಪರೂಪದ ಪ್ರತಿಮೆ ಬೆಂಗಳೂರಿನ ಉಲ್ಲಾಳದಲ್ಲಿ ಜೂನ್ 18ರಂದು ಅನಾವರಣ ಆಗಲಿದೆ.

ಪುತ್ಥಳಿಯ ವೆಚ್ಚ

ಈ ಪ್ರತಿಮೆ ನಿರ್ಮಾಣದ ವೆಚ್ಚವನ್ನು ಬಹಿರಂಗಪಡಿಸಲು ವೀರಕಪುತ್ರ ಶ್ರೀನಿವಾಸ ಅವರು ಇಚ್ಚಿಸಿಲ್ಲ. ಅಭಿಮಾನಕ್ಕಾಗಿ ಈ ಪ್ರತಿಮೆಯನ್ನು ಮಾಡಿದ್ದು, ಹಣ ಪ್ರಾಧಾನ್ಯತೆ ಪಡೆಯುವುದು ಬೇಡ ಎಂಬುದು ಅವರ ನಿಲುವು.

ಮರೆಯಲಾಗದ ಸಿನಿಮಾ

'ಸೂರ್ಯವಂಶ' ಸಿನಿಮಾ ವಿಷ್ಣುವರ್ಧನ್ ಸಿನಿ ಕೆರಿಯರ್ ನಲ್ಲಿಯೇ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ. ಎಸ್.ನಾರಾಯಣ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ವಿಷ್ಣು ದ್ವಿಪಾತ್ರದಲ್ಲಿ ನಟಿಸಿದ್ದರು.

ವಿಷ್ಣು ಪ್ರತಿಮೆಗಳ ಬಗ್ಗೆ

ವಿಷ್ಣು ಅವರ ಕೇವಲ ಮೂರು ಪಾತ್ರಗಳು ಮಾತ್ರ ಪುತ್ಥಳಿ ರೂಪವನ್ನು ಪಡೆದಿವೆ. 'ಹಾಲುಂಡ ತವರು' ಪಾತ್ರ, 'ಆಪ್ತರಕ್ಷಕ' ಪಾತ್ರ ಮತ್ತು 'ಕೃಷ್ಣ ದೇವರಾಯ' ಪಾತ್ರದ ಪುತ್ಥಳಿಗಳು ಹೆಚ್ಚು ಕಡೆ ಇವೆ.

English summary
'Surya Vamsha' Sathya Murthy Late Dr.Vishnuvardhan statue by vishnu sena samiti.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada