For Quick Alerts
  ALLOW NOTIFICATIONS  
  For Daily Alerts

  ವಿಷ್ಣು ದಾದನ ಈ ಪುತ್ಥಳಿ ಮಾಡಿದ 'ಶಿಲ್ಪಿ'ಗೆ ಸುದೀಪ್ ಸಲ್ಯೂಟ್

  By Bharath Kumar
  |

  ಅಭಿನಯ ಭಾರ್ಗವ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ 'ಮರೆಯಲಾಗದ ಮಾಣಿಕ್ಯ'. ಹೀಗಾಗಿ, ವಿಷ್ಣುದಾದನ ನೆನಪಿಗಾಗಿ ಪ್ರತಿಯೊಂದು ಊರಿನಲ್ಲೂ 'ಸಿರಿವಂತನ' ಪುತ್ಥಳಿ, ಪ್ರತಿಮೆಗಳನ್ನ ನೋಡಬಹುದು. ಅವುಗಳಲ್ಲಿ, ಬಳ್ಳಾರಿಯ ವಿಷ್ಣುವರ್ಧನ್ ಪಾರ್ಕ್ ನಲ್ಲಿರುವ ಪುತ್ಥಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ವಿಷ್ಣುವರ್ಧನ್ ಅವರ ಈ ಪುತ್ಥಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫಿದಾ ಆಗಿದ್ದು, ಈ ಪುತ್ಥಳಿಯನ್ನ ಮಾಡಿದ ಆ ಶಿಲ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು, ನಿಜ ಜೀವನದಲ್ಲಿ ವಿಷ್ಣುವರ್ಧನ್ ಹೇಗಿದ್ದರೋ ಅದೇ ರೀತಿ, ಅದೇ ಸ್ಟೈಲ್ ನಲ್ಲಿ ಈ ಪುತ್ಥಳಿಯನ್ನ ಸಿದ್ದಮಾಡಲಾಗಿದೆ. ಹೀಗಾಗಿ, ಇದನ್ನ ನಿರ್ಮಾಣ ಮಾಡಿದ ಆ ಶಿಲ್ಪಿಯ ಕಲೆಯನ್ನ ಸುದೀಪ್ ಕೊಂಡಾಡಿದ್ದಾರೆ.[ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್]

  ವಿಷ್ಣುವರ್ಧನ್ ಅವರ ಈ ಪುತ್ಥಳಿಯ ಫೋಟೋಗೆ ಪ್ರತಿಕ್ರಿಯಿಸಿರುವ ಸುದೀಪ್, ''ವಾಹ್ಹ್.......ಅದೇ ಸ್ಟೈಲ್, ಅದೇ ವರ್ತನೆ, ಈ ಪುತ್ಥಳಿಯನ್ನ ಮಾಡಿದ ಆ ಮಹಾನ್ ಶಿಲ್ಪಿಗೆ ಹ್ಯಾಟ್ಸಪ್'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.[ಕಿಡಿಗೇಡಿಗಳು ಕಡ್ಡಿಗೀರಿದ್ದಕ್ಕೆ, ಕಪಾಲಿ ಥಿಯೇಟರ್ ಮುಂದೆ ವಿಷ್ಣುಗೆ ಕಪಾಳಮೋಕ್ಷ.!]

  ಅಂದ್ಹಾಗೆ, ಬಳ್ಳಾರಿಯಲ್ಲಿರುವ ಡಾ.ವಿಷ್ಣುವರ್ಧನ್ ಪಾರ್ಕ್ ನ್ನ 2011 ರಲ್ಲಿ ಉದ್ಘಾಟಿಸಿಲಾಗಿದೆ. ಸುಮಾರು 3 ಎಕರೆ ವಿಸ್ತಾರವಾಗಿರುವ ಈ ಪಾರ್ಕ್ ಮಕ್ಕಳಿಗಾಗಿ ಉಪಯೋಗಿಸಲಾಗುತ್ತಿದೆ.

  English summary
  Kannada Actor Kiccha Sudeep Appreciate to sculptor, who has made it Dr VishnuVardhan statue perfect in Ballary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X