»   » 'ರಾಜ್ ಉತ್ಸವ': ಸ್ವಚ್ಛತಾ ಆಂದೋಲನ ಮಾಡಿದ 'ದೊಡ್ಮನೆ ಹುಡುಗರು'

'ರಾಜ್ ಉತ್ಸವ': ಸ್ವಚ್ಛತಾ ಆಂದೋಲನ ಮಾಡಿದ 'ದೊಡ್ಮನೆ ಹುಡುಗರು'

Posted By:
Subscribe to Filmibeat Kannada

ದೊಡ್ಮನೆಗೂ ಏಪ್ರಿಲ್ ತಿಂಗಳಿಗೂ ಒಂಥರಾ ನಂಟಿದೆ. ಯಾಕೆಂದರೆ ಈ ತಿಂಗಳಿನಲ್ಲಿ ಪೂರ್ತಿ ಎಲ್ಲರ ಮೆಚ್ಚಿನ, ಪ್ರೀತಿಯ ಅಣ್ಣಾವ್ರ 'ರಾಜ್ ಉತ್ಸವ' ನೆರವೇರುತ್ತದೆ.

ಹೌದು ಏಪ್ರಿಲ್ 12, ಕನ್ನಡ ಕಲಾರತ್ನ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನವಾದರೆ, ಏಪ್ರಿಲ್ 24 ರಂದು ಅವರ ಹುಟ್ಟುಹಬ್ಬದ ಸಂಭ್ರಮ. ಆ ದಿನವನ್ನು ದೊಡ್ಮನೆಯವರು ಬಹಳ ಸಂಭ್ರಮದಿಂದ ಹಬ್ಬದಂತೆ ಆಚರಿಸುತ್ತಾರೆ.[ಮಂಗಳವಾರ ನಟ ಸಾರ್ವಭೌಮ ಡಾ.ರಾಜ್ ಅವರ 10ನೇ ಪುಣ್ಯತಿಥಿ]

ಆದರೆ ಈ ಬಾರಿ ಸ್ವಲ್ಪ ಬದಲಾವಣೆ ಮಾಡಿಕೊಂಡ ದೊಡ್ಮನೆ ಕುಟುಂಬದವರು ಅಪ್ಪಾಜಿಯವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಯೋಜನೆ ಹಾಕಿಕೊಂಡಿದ್ದಾರೆ.

ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಮಕ್ಕಳಾದ ವಿನಯ್ ರಾಜ್ ಕುಮಾರ್ ಮತ್ತು ಗುರುರಾಜ್ ಅವರು ತಮ್ಮ ಗುಂಪನ್ನು ಕಟ್ಟಿಕೊಂಡು ತಾತನ ನೆನಪಿನಲ್ಲಿ ಏಪ್ರಿಲ್ 10 ರಂದು ಮುಂಜಾನೆ ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಿದ್ದಾರೆ. ಈ ಮೂಲಕ 'ರಾಜ್ ಉತ್ಸವ'ವನ್ನು ಮಾಡಿದ್ದಾರೆ.[ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ 'ರನ್ ಆಂಟನಿ' ತಂಡ]

ನಸುಕಿನಲ್ಲಿ ಸುಮಾರು 5 ಘಂಟೆಗೆ ಎದ್ದು ಯಶವಂತಪುರಕ್ಕೆ ಹೋಗಿದ್ದ ದೊಡ್ಮನೆ ಹುಡುಗರು ಅಂಡ್ 'ರನ್ ಆಂಟನಿ' ಟೀಮ್ ಮಧ್ಯಾಹ್ನದವರೆಗೆ ಅಲ್ಲಿನ 60 ಫೀಟ್ ರಸ್ತೆಯ ಕಸವನ್ನೆಲ್ಲಾ ಎತ್ತಿ ಕ್ಲೀನ್ ಮಾಡಿ ಕಾಂಪೌಂಡ್ ಗಳಿಗೆ ಪೈಂಟ್ ಮಾಡಿ ಸ್ಥಳವನ್ನು ಲಕಲಕ ಹೊಳೆಯುವಂತೆ ಮಾಡಿದ್ದಾರೆ.[ಕಲಾರತ್ನ ಡಾ.ರಾಜ್ ಅಭಿನಯದ ಅತ್ಯುತ್ತಮ 10 ಚಿತ್ರಗಳು]

'ಸ್ವಚ್ಛ ಕರ್ನಾಟಕ ಸ್ವಚ್ಛ ಭಾರತ' ಅಭಿಯಾನ ಮಾಡಿದ ದೊಡ್ಮನೆ ಹುಡುಗರ ಸ್ಪಿರಿಟ್ ನೀವೂ ನೋಡಬೇಕೇ? ಹಾಗಿದ್ದರೆ ಈ ವಿಡಿಯೋ ನೋಡಿ..

ಇನ್ನು ಈ ಕ್ಲೀನಿಂಗ್ ಕೆಲಸ ಇಲ್ಲಿಗೆ ನಿಲ್ಲೋದಿಲ್ಲ ಬದ್ಲಾಗಿ ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದಾಗಿ ದೊಡ್ಮನೆ ಹುಡುಗರು ಹೇಳಿದ್ದಾರೆ. ಫೋಟೋ ಗ್ಯಾಲರಿ ನೋಡಿ ಸ್ಲೈಡುಗಳಲ್ಲಿ..

'ರಾಜ್ ಉತ್ಸವ': ಸ್ವಚ್ಛತಾ ಆಂದೋಲನ ಮಾಡಿದ 'ದೊಡ್ಮನೆ ಹುಡುಗರು'

'ರಾಜ್ ಉತ್ಸವ': ಸ್ವಚ್ಛತಾ ಆಂದೋಲನ ಮಾಡಿದ 'ದೊಡ್ಮನೆ ಹುಡುಗರು'

-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
On the Occasion of Dr Rajkumar's 87th Birthday Sri Vajreshwari Family has come up with an Initiative "Swachha Karnataka Swachha Bharatha". An attempt Will be made to clean the lanes in a few locations in and around Bangalore to start with. This Cause has been flagged off by Movie Team 'Run Antony' on 10th April at 60 ft Road Yeshwanthpura Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada