For Quick Alerts
  ALLOW NOTIFICATIONS  
  For Daily Alerts

  ಕಮರ್ಷಿಯಲ್ ಸಿನೆಮಾ ಕುರಿತ ಪುಸ್ತಕ ಸ್ವಪ್ನ ಸಾದೃಶ್ಯ

  By Rajendra
  |

  ಕನ್ನಡದಲ್ಲಿ ಸಿನಿಮಾಗಳ ಕುರಿತ ಬರಹ, ಪುಸ್ತಕಗಳು ಅತ್ಯಂತ ಕಡಿಮೆ ಇರುವ ಈ ಸಮಯದಲ್ಲಿ ಇಂಥದ್ದೊಂದು ಪುಸ್ತಕದ ಅನಿವಾರ್ಯತೆ ಇತ್ತು, ಅದೂ ಕಮರ್ಷಿಯಲ್ ಸಿನಿಮಾಗಳ ಬಗೆಗೆ. 'ಸ್ವಪ್ನ ಸಾದೃಶ್ಯ' ಕನ್ನಡದ ಕಮರ್ಷಿಯಲ್ ಸಿನಿಮಾಗಳ ಕುರಿತಂತೆ ಹೊರಬರುತ್ತಿರುವ ಮೊದಲ ವಿಮರ್ಶಾ ಲೇಖನಗಳ ಸಂಕಲನ.

  ಒಂದಿಡೀ ದಶಕದ ಮುಖ್ಯವೆನಿಸುವ ಹದಿಮೂರು ಸಿನಿಮಾಗಳನ್ನು ಆಯ್ದುಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಪ್ರತಿ ಸಿನಿಮಾದ ಕುರಿತೂ ಅಗತ್ಯ ವಿವರಗಳಿವೆ. ಇತ್ತೀಚೆಗೆ ಬಹಳ ಸುದ್ದಿಯಲ್ಲಿರುವ ದಯಾನಂದ ಟಿ ಕೆ ಒಳಗೊಂಡು ಯುವಕಲಾವಿದ ಮಂಸೋರೆ ತನಕ ಹಲವು ಭರವಸೆಯ ಬರಹಗಾರರು ಬರೆದ ಲೇಖನಗಳಿವೆ.

  ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೇ ಶನಿವಾರ (ಡಿಸೆಂಬರ್ 1) ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನಲ್ಲಿ ನಡೆಯಲಿದೆ. ಸಮಯ ಸಂಜೆ 6.30ಕ್ಕೆ. ಈ ಕಾರ್ಯಕ್ರಮವನ್ನು ದೃಶ್ಯ ಮಾಧ್ಯಮಕ್ಕೆಂದೇ ಮೀಸಲಾದ ತಾಣ ಸಂವಾದ ಡಾಟ್ ಕಾಂ ಆಯೋಜಿಸಿದೆ.

  ಕಾರ್ಯಕ್ರಮದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ಮತ್ತು ವಿಧಾನ ಪರಿಷತ್ ಸದಸ್ಯರು ತಾರಾ ಅನುರಾಧ, ಚಲನಚಿತ್ರ ನಿರ್ದೇಶಕ ಪವನ್ ಕುಮಾರ್, ಸಾಹಿತಿ ಹಾಗೂ ಪತ್ರಕರ್ತ ರಘುನಾಥ ಚ.ಹ, 'ಕಬ್ಬಡ್ಡಿ' ಚಿತ್ರದ ನಿರ್ದೇಶಕ ನರೇಂದ್ರ ಬಾಬು, ಚಿತ್ರ ನಿರ್ದೇಶಕ ಬಿ ಸುರೇಶ್ ಉಪಸ್ಥಿತರಿರುತ್ತಾರೆ. (ಒನ್ಇಂಡಿಯಾ ಕನ್ನಡ)

  English summary
  'Swapna Sadrushya' - A collection of Kannada Film Reviews book release function organised by Samvaada.com will be held in Bangalore on 1st December at Sri Krishnaraja Parishanmandira, Kannada Saahithya Parishath, Bangalore at 6 pm. All are welcome. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X