»   » ನಟಿ ಶ್ವೇತಾ ಬಸು ಇನ್ನೂ ಆರು ತಿಂಗಳು ಅಂದರ್

ನಟಿ ಶ್ವೇತಾ ಬಸು ಇನ್ನೂ ಆರು ತಿಂಗಳು ಅಂದರ್

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ವೇಶ್ಯಾವಾಟಿಕೆ ದಂಧೆಯಲ್ಲಿ ಬಂಧಿತರಾದಿದ್ದ ನಟಿ ಶ್ವೇತಾ ಬಸು ಪ್ರಸಾದ್ ಅವರನ್ನು ರಕ್ಷಣಾ ಗೃಹದಲ್ಲಿ ಬಂಧಿಸಿ ಇಡಲಾಗಿದೆ. ಅಲ್ಲಿಂದ ಬಿಡುಗಡೆ ಮಾಡುವಂತೆ ಅವರ ತಾಯಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ಎರ್ರಮಂಜಿಲ್ ನ್ಯಾಯಾಲಯ ತಳ್ಳಿಹಾಕಿದೆ.

ಆರು ತಿಂಗಳ ಕಾಲ ಶ್ವೇತಾ ಬಸು ರೆಸ್ಕ್ಯೂ ಹೋಂನಲ್ಲೇ ಇರಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಆರು ತಿಂಗಳ ಕಾಲ ಶ್ವೇತಾ ಬಸು ರೆಸ್ಕ್ಯೂ ಹೋಂನಲ್ಲೇ ಇದ್ದರೆ ಅವರ ಸಿನಿಮಾ ವೃತ್ತಿ ಬದುಕು ಸಂಪೂರ್ಣ ತಳಕಚ್ಚುತ್ತದೆ ಎಂದು ಅವರ ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ. [ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ]


ಹೈದರಾಬಾದ್ ಬಂಜಾರ ಹಿಲ್ಸ್ ಸ್ಟಾರ್ ಹೋಟೆಲ್ ವೊಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಶ್ವೇತಾ ಅವರನ್ನು ಬಂಧಿಸಲಾಗಿತ್ತು. ಏತನ್ಮಧ್ಯೆ ಶ್ವೇತಾ ಬಸು ಅವರ ಬೆಂಬಲಕ್ಕೆ ಟಾಲಿವುಡ್ ಚಿತ್ರರಂಗವೂ ನಿಂತಿದೆ. ಅವಕಾಶಗಳಿಲ್ಲದೆ ಆರ್ಥಿಕ ಮುಗ್ಗಟ್ಟಿನ ಕಾರಣ ಅವರು ಈ ಕತ್ತಲ ಕೂಪಕ್ಕೆ ಇಳಿದಿದ್ದರು ಎಂದು ಚಿತ್ರರಂಗದ ಕಡೆಯಿಂದ ಸಹಾನುಭೂತಿ ವ್ಯಕ್ತವಾಗುತ್ತಿದೆ. ತೆಲುಗು ನಟ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮಿ ಸೇರಿದಂತೆ ಹಲವು ಬಾಲಿವುಡ್ ನಿರ್ದೇಶಕರು ಶ್ವೇತಾ ಅವರಿಗೆ ಅವಕಾಶ ಕೊಡಲು ಮುಂದೆ ಬಂದಿದ್ದಾರೆ.

ಶ್ವೇತಾ ಬಸು ಅವರ ಪ್ರಕರಣದ ಬಗ್ಗೆ ಮಾಧ್ಯಮಗಳು ಅತಿಯಾಗಿ ಸ್ಪಂದಿಸಿದ್ದನ್ನೂ ಎಸ್ಎಸ್ ರಾಜಮೌಳಿ ಖಂಡಿಸಿದ್ದರು. ಈ ರೀತಿಯ ಪ್ರಕರಣಗಳಲ್ಲಿ ಗೋಪ್ಯತೆಯನ್ನು ಪಾಲಿಸಬೇಕಾಗಿದ್ದ ಪೋಲೀಸರು ನಿಯಮಗಳನ್ನು ಉಲ್ಲಂಘಸಿದರು. ಮಾಧ್ಯಮಗಳ ಜೊತೆಗೆ ಎಲ್ಲರೂ ಶ್ವೇತಾ ಮೇಲೆ ಒಮ್ಮೆಲೆ ದಾಳಿ ಮಾಡಿದರು.

ಆದರೆ ಶ್ವೇತಾ ಬಸು ಅವರ ಜೊತೆ ಸಿಕ್ಕಿಬಿದ್ದ ಬಿಜಿನೆಸ್ ಮ್ಯಾನ್ ಬಗ್ಗೆ ಮಾತ್ರ ಯಾರೂ ಚಕಾರ ಎತ್ತಲಿಲ್ಲ. ನಾಳೆ ಆಕೆ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಯಾರು ಜವಾಬ್ದಾರಿ ವಹಿಸುತ್ತಾರೆ ಎಂದು ಹಿಂದಿ ಟಿವಿ ನಟಿ ಸಾಕ್ಷಿ ತನ್ವರ್ ಹೇಳಿದ್ದಕ್ಕೆ ರಾಜಮೌಳಿ ಸಹ ಎಸ್ ಎಸ್ ಎಂದಿದ್ದಾರೆ.

English summary
Kichcha Sudeep's new movie will be directed by Milana Prakash. Producer Raghunath launched this movie under his new venture SRV Productions. The movie logo was launched but the title is not disclosed yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada