For Quick Alerts
  ALLOW NOTIFICATIONS  
  For Daily Alerts

  ಸೈರಾ ನರಸಿಂಹ ರೆಡ್ಡಿ ಚಿತ್ರವನ್ನ ಬಿಡಲಿಲ್ಲ ಪೈರಸಿ ಭೂತ

  |

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಪೈರಸಿ ವಿವಾದ ಇನ್ನು ತಣ್ಣಗಾಗಿಲ್ಲ. ಅಷ್ಟರಲ್ಲೇ ಇನ್ನೊಂದು ಮೆಗಾ ಬಜೆಟ್ ಚಿತ್ರ ಪೈರಸಿಯಾಗಿ ಸದ್ದು ಮಾಡ್ತಿದೆ.

  ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಅಮಿತಾಭ್ ಬಚ್ಚನ್ ಅಂತಹ ದೊಡ್ಡ ನಟರು ನಟಿಸಿರುವ ಬಹುಕೋಟಿ ವೆಚ್ಚದ ಸೈರಾ ಚಿತ್ರದ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪೈರಸಿಗೆ ಒಳಗಾಗಿದೆ.

  ಕಳೆದು ಎರಡು ವರ್ಷದಿಂದ ಚಿತ್ರೀಕರಣವಾಗಿದ್ದ ಈ ಸಿನಿಮಾ ಬಹಳ ದುಬಾರಿಗೆ ತಯಾರಾಗಿದೆ. ಈ ಚಿತ್ರವನ್ನ ಪೈರಸಿ ಮಾಡಿದ ಖ್ಯಾತಿಯೂ ಅದೇ ವೆಬ್ ಸೈಟ್ ಗೆ ಸೇರಿದೆ. ಈ ಹಿಂದೆ ಪೈಲ್ವಾನ್, ಕುರುಕ್ಷೇತ್ರ, ಸಾಹೋ, ಕಬೀರ್ ಸಿಂಗ್, ಭಾರತ್ ಸೇರಿ ಬಹುತೇಕ ಹೊಸ ಚಿತ್ರಗಳು ರಿಲೀಸ್ ದಿನವೇ ಪೈರಸಿಗೆ ಒಳಲಾಗಿತ್ತು.

  'ಸೈರಾ' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದನು?'ಸೈರಾ' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದನು?

  ಈ ಪೈರಸಿಯಿಂದ ಸಹಜವಾಗಿ ಚಿತ್ರದ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ. ಸೈರಾ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಚಿರಂಜೀವಿ ಜೀವನದಲ್ಲಿ ಅತ್ಯಂತ ವಿಶೇಷವಾದ ಸಿನಿಮಾ ಇದು ಎಂದು ಹೇಳಲಾಗುತ್ತಿದೆ. ಇಂತಹ ಚಿತ್ರ ರಿಲೀಸ್ ದಿನವೇ ಪೈರಸಿಗೆ ಒಳಲಾಗಿರುವುದು ನಿಜಕ್ಕೂ ಚಿತ್ರತಂಡಕ್ಕೆ ಹಿನ್ನಡೆಯಾಗಿದೆ.

  ಪ್ರತಿಯೊಂದು ಚಿತ್ರವೂ ಮೊದಲ ದಿನವೇ ಲೀಕ್ ಆಗುತ್ತಿದ್ದರೂ, ಯಾವ ಇಂಡಸ್ಟ್ರಿ ಕೂಡ ಈ ಪೈರಸಿ ವಿರುದ್ಧ ಕ್ರಮ ದೊಡ್ಡ ಧ್ವನಿ ಎತ್ತುತ್ತಿಲ್ಲ. ಚಿತ್ರತಂಡವಷ್ಟೇ ಆ ಸಮಯಕ್ಕೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಪ್ರತಿಭಟಿಸುತ್ತಾರೆ. ನಂತರ ಮತ್ತೆ ಅದೇ ಕಥೆ.

  ಅಂದ್ಹಾಗೆ, ಸೈರಾ ಸಿನಿಮಾ ಐದು ಭಾಷೆಯಲ್ಲಿ ಜಗತ್ತಿನಾದ್ಯಂತ ತೆರೆಕಂಡಿದೆ. ಚಿರಂಜೀವಿ, ಸುದೀಪ್, ವಿಜಯ್ ಸೇತುಪತಿ, ಅಮಿತಾಭ್ ಬಚ್ಚನ್, ನಯನತಾರ, ತಮನ್ನಾ, ಜಗಪತಿಬಾಬು ಸೇರಿದಂತೆ ಹಲವು ನಟಿಸಿದ್ದಾರೆ. ರಾಮ್ ಚರಣ್ ಈ ಚಿತ್ರವನ್ನ ನಿರ್ಮಿಸಿದ್ದು, ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ.

  English summary
  Megastar chiranjeevi, sudeep, vijay sethupathi, amitabh bachchan starrer sye raa narasimha reddy movie leaked in online.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X