ಮತ್ತೆ ಒಂದಾದ ಶಿವಣ್ಣ - ಟಿ.ಎಸ್.ನಾಗಾಭರಣ ಜೋಡಿ

By Naveen

ನಟ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ಸಹ ಸಾಲು ಸಾಲು ಸಿನಿಮಾಗಳು ಅನೌನ್ಸ್ ಆಗುತ್ತದೆ. ಈ ವರ್ಷ ಕೂಡ ಅನೇಕ ಸಿನಿಮಾಗಳ ಸುದ್ದಿ ಹೊರಬಂದಿದೆ. ಅದರಲ್ಲಿ ವಿಶೇಷವಾಗಿ ಮತ್ತೆ ಈ ವರ್ಷ ನಿರ್ದೇಶಕ ಟಿ.ಎಸ್.ನಾಗಾಭರಣ ಹಾಗೂ ಶಿವರಾಜ್ ಕುಮಾರ್ ಸಿನಿಮಾ ಮಾಡುತ್ತಿದ್ದಾರೆ.

ನಿರ್ದೇಶಕ ಟಿ.ಎಸ್.ನಾಗಾಭರಣ ಈ ಹಿಂದೆ 'ಜನುಮದ ಜೋಡಿ' ಹಾಗೂ 'ಚಿಗುರಿದ ಕನಸು' ಸಿನಿಮಾವನ್ನು ಶಿವಣ್ಣನಿಗಾಗಿ ಮಾಡಿದ್ದರು. ಈ ಎರಡು ಸಿನಿಮಾಗಳು ಶಿವರಾಜ್ ಕುಮಾರ್ ಚಿತ್ರ ಬದುಕಿನಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಆದರೆ, ಈ ಚಿತ್ರಗಳ ಬಳಿಕ ಈಗ ಮತ್ತೆ ಶಿವಣ್ಣ ಹಾಗೂ ಟಿ.ಎಸ್.ನಾಗಾಭರಣ ಇಬ್ಬರು ಒಂದಾಗುವ ಕಾಲ ಬಂದಿದೆ.

t s nagabharana will be directing a new movie to shivaraj kumar

ವಿಶೇಷ ಅಂದರೆ, ಖ್ಯಾತ ಲೇಖಕರಾದ ಪೂರ್ಣಚಂದ್ರ ತೇಜಸ್ವಿ ಅವರ 'ಜುಗಾರಿ ಗ್ರಾಸ್' ಕಾದಂಬರಿಯನ್ನು ಈ ಬಾರಿ ನಿರ್ದೇಶಕ ಟಿ.ಎಸ್.ನಾಗಭರಣ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಮಾತಿದೆ. ಆದರೆ ಈ ವಿಷಯವನ್ನು ಅವರು ಇನ್ನು ಅಧಿಕೃತ ಪಡಿಸಿಲ್ಲ.

ಈ ಮೂಲಕ ಮತ್ತೆ ಶಿವರಾಜ್ ಕುಮಾರ್ ಕಾದಂಬರಿ ಆಧಾರಿತ ಸಿನಿಮಾ ಮಾಡುತ್ತಿದ್ದಾರೆ. 'ಕಡ್ಡಿಪುಡಿ' ಸಿನಿಮಾಗೆ ಬಂಡವಾಳ ಹಾಕಿದ್ದ ಚಂದ್ರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೆಚ್.ಸಿ.ವೇಣು ಕ್ಯಾಮರಾ ನಿರ್ವಹಣೆ ಮಾಡಲಿದ್ದಾರೆ.

More from Filmibeat

English summary
After 'Chigurida Kanasu' kannada director T.S.Nagabharana will be directing a new movie to actor Shivaraj Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X