»   » ಕರುನಾಡಿನಲ್ಲಿ ಮಾತ್ರವಲ್ಲ ವಿದೇಶದಲ್ಲಿ ಅಬ್ಬರಿಸಿದೆ ಶಿವಣ್ಣನ ಸಿನಿಮಾಗಳು

ಕರುನಾಡಿನಲ್ಲಿ ಮಾತ್ರವಲ್ಲ ವಿದೇಶದಲ್ಲಿ ಅಬ್ಬರಿಸಿದೆ ಶಿವಣ್ಣನ ಸಿನಿಮಾಗಳು

Posted By:
Subscribe to Filmibeat Kannada
ಶಿವಣ್ಣನ ಸಿನಿಮಾಗಳಿಗೆ ಈಗ ವಿದೇಶದಲ್ಲೂ ಡಿಮ್ಯಾಂಡ್ | Filmibeat Kannada

ಶಿವರಾಜ್ ಕುಮಾರ್ ಯಾವಗಲೂ ಸಿನಿಮಾ ಮಾಡುತ್ತಾನೆ ಇರುತ್ತಾರೆ. ಬೇರೆ ಬೇರೆ ಪಾತ್ರಗಳ ಜೊತೆಗೆ ಪ್ರೇಕ್ಷಕರ ಮುಂದೆ ಬಂದು ನಿಲ್ಲುತ್ತಾರೆ. ಇತ್ತೀಚಿಗೆ ಶಿವರಾಜ್ ಕುಮಾರ್ ಎರಡು ವಿಶೇಷ ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲಿ ಒಂದು 'ಟಗರು' ಇನ್ನೊಂದು 'ಮಫ್ತಿ'. ಇತ್ತ ಕಡೆ 'ಟಗರು' ಸಿನಿಮಾ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದೆ. ಅತ್ತು 'ಮಫ್ತಿ' ಸಿನಿಮಾ ನೂರು ದಿನದ ಸಂಭ್ರಮದಲ್ಲಿ ಇದೆ.

ಸಂತೋಷದ ವಿಷಯ ಎಂದರೆ 'ಟಗರು' ಮತ್ತು 'ಮಫ್ತಿ' ಎರಡು ಸಿನಿಮಾಗಳು ಕೂಡ ಈಗ ವಿದೇಶದಲ್ಲಿ ಕಮಾಲ್ ಮಾಡುತ್ತಿದೆ. ವಿದೇಶದಲ್ಲಿ ಶಿವಣ್ಣನ ಸಿನಿಮಾವನ್ನು ನೋಡಿ ಜನ ಇಷ್ಟ ಪಡುತ್ತಿದ್ದಾರೆ. 'ಮಫ್ತಿ' ಸಿನಿಮಾ ಈ ಹಿಂದೆಯೇ ಸಿಡ್ನಿ, ಮೆಲ್ಬೋರ್ನ್ ನಲ್ಲಿ ರಿಲೀಸ್ ಆಗಿತ್ತು. ಅದರ ಜೊತೆಗೆ ಈಗ ಮಾರ್ಚ್ 15 ರಂದು ಸಿನಿಮಾ ಅಮೇರಿಕಾದಲ್ಲಿ ಬಿಡುಗಡೆಯಾಗಲಿದೆ.

ಅಮೇರಿಕಾದಲ್ಲಿ ಗುಟುರು ಹಾಕಲಿರುವ ಶಿವಣ್ಣನ 'ಟಗರು


Tagaru and mufti kannada movie will be releasing in foreign countries

ಇನ್ನು 'ಟಗರು' ಸಿನಿಮಾ ಕೂಡ ವಿದೇಶಕ್ಕೆ ಹಾರಿದೆ. ಮಾರ್ಚ್ 8 ರಂದು 'ಯು.ಎಸ್.ಎ'ನಲ್ಲಿ 'ಟಗರು' ತೆರೆಗೆ ಅಪ್ಪಳಿಸಿದೆ. ಶಿಕಾಗೋ, ಫಿಲಡೆಲ್ಫಿಯ, ಅಟ್ಲಾಂಟ ಸೇರಿದಂತೆ 25ಕ್ಕೂ ಹೆಚ್ಚು ಕಡೆ 'ಟಗರು' ಬಿಡುಗಡೆ ಆಗಿದೆ. ಟಗರು' ಸಿನಿಮಾ ಈಗಾಗಲೇ ಹಿಟ್ ಆಗಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಇತ್ತೀಚಿಗೆ ಯಶಸ್ವಿ ಕಾರ್ಯಕ್ರಮವನ್ನು ಸಹ ಮಾಡಿತ್ತು.


Tagaru and mufti kannada movie will be releasing in foreign countries

ರೌಡಿಸಂ ಸುತ್ತ ಹೆಣೆದಿರುವ 'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ರೌಡಿ 'ಡಾಲಿ' ಆಗಿ ಧನಂಜಯ್ ಶಿವಣ್ಣನ ಎದುರು ತೊಡೆ ತಟ್ಟಿ ನಿಲ್ಲುತ್ತಾರೆ. ಇವರಿಬ್ಬರ ಜುಗಲ್ಬಂದಿಯೇ 'ಟಗರು' ಸಿನಿಮಾ. ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಟಗರು' ವಿದೇಶಗಳಲ್ಲಿ ಹೇಗೆ ಅಬ್ಬರಿಸುತ್ತೋ, ನೋಡ್ಬೇಕು


'ಮಫ್ತಿ' 100 ಡೇಸ್ : ಸೆಂಚುರಿ ಬಾರಿಸಿದ ಸೆಂಚುರಿ ಸ್ಟಾರ್ ಶಿವಣ್ಣ

English summary
Actor Shiva Rajkumar's Tagaru and mufti kannada movie will be releasing in foreign countries.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada