ಶಿವಣ್ಣನ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ ಸಿಕ್ಕಾಪಟ್ಟೆ ಕ್ರೇಜ್ ಇದ್ದೇ ಇರುತ್ತದೆ. ಇನ್ನು 'ಟಗರು' ಸಿನಿಮಾದ ಕ್ರೇಜ್ ಬಗ್ಗೆ ಜಾಸ್ತಿ ಹೇಳುವುದೇ ಬೇಡ. ಈ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ತಿಂಗಳು ಬಾಕಿ ಇದೇ. ಆದರೆ 'ಟಗರು' ಹಬ್ಬವನ್ನು ಅಭಿಮಾನಿಗಳು ಈಗಲೇ ಶುರು ಮಾಡಿದ್ದಾರೆ.
ಶಿವರಾಜ್ ಕುಮಾರ್ ಅಭಿಮಾನಿ ಸಂಘಗಳಾದ 'ರಾಜ್ ಡೈನಸ್ಟಿ' ಮತ್ತು 'ಶಿವು ಅಡ್ಡ' ಕಡೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಬೆಂಗಳೂರಿನಿಂದ ಮಂಡ್ಯವರೆಗೆ ಬೈಕ್ ರೈಡ್ ನಡೆಸಲಾಗುತ್ತಿದೆ. ಸುಮಾರು 200 ಅಭಿಮಾನಿಗಳು ಇದರಲ್ಲಿ ಭಾಗಿಯಾಗಲಿದ್ದು, ಇದೇ ತಿಂಗಳು 14ಕ್ಕೆ ಬೆಂಗಳೂರಿನಿಂದ ರೈಡಿಂಗ್ ಶುರು ಆಗಲಿದೆ.
ಜಯಂತ್ ಕಾಯ್ಕಿಣಿ ಬರೆದ 'ಟಗರು' ಚಿತ್ರದ ಗೀತೆ ಬಿಡುಗಡೆ
ಅದರ ಜೊತೆಗೆ ಅಭಿಮಾನಿಗಳಿಗಾಗಿ 'ಟಗರು' ಟೀ ಶರ್ಟ್ ಗಳನ್ನು ಕೂಡ ರೆಡಿ ಮಾಡಿಸಲಾಗಿದೆ. ಬೆಂಗಳೂರಿನಿಂದ ಮಂಡ್ಯದ ವರೆಗೆ ಸಿಗುವ ಚಿತ್ರಮಂದಿರಗಳಿಗೆ ಅಭಿಮಾನಿಗಳು ಭೇಟಿ ನೀಡಲಿದ್ದಾರೆ. ಈಗಾಗಲೇ 'ಟಗರು' ಹವಾ ಜೋರಾಗಿದ್ದು, ಅನೇಕ ಚಿತ್ರಮಂದಿರಗಳ ಮುಂದಿನ ತ್ರೀಡಿ ಕಟ್ ಔಟ್ ಗಳಿಗೆ ನೋಟಿನ ಹಾರ ಹಾಕಲಾಗಿದೆ.
ಅಂದಹಾಗೆ, 'ಟಗರು' ಚಿತ್ರವನ್ನು ಸೂರಿ ನಿರ್ದೇಶನ ಮಾಡಿದ್ದಾರೆ. ಭಾವನ ಮತ್ತು ಮಾನ್ವಿತಾ ಸಿನಿಮಾದ ನಾಯಕಿಯರಾಗಿದ್ದಾರೆ. ಧನಂಜಯ್, ವಸಿಷ್ಟ 'ಟಗರು' ಜೊತೆ ಖದರ್ ತೊರಿಸಿದ್ದಾರೆ. ಇನ್ನು 'ಟಗರು' ಸಿನಿಮಾ ಫೆಬ್ರವರಿ 9ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.