»   » 'ಟಗರು' ಚಿತ್ರದ ವಿಶಿಷ್ಟ ಪಾತ್ರಗಳು ಈಗ ಸಿನಿಮಾ ಟೈಟಲ್ ಆಯ್ತು

'ಟಗರು' ಚಿತ್ರದ ವಿಶಿಷ್ಟ ಪಾತ್ರಗಳು ಈಗ ಸಿನಿಮಾ ಟೈಟಲ್ ಆಯ್ತು

Posted By:
Subscribe to Filmibeat Kannada
'ಟಗರು' ಚಿತ್ರದ ವಿಶಿಷ್ಟ ಪಾತ್ರಗಳು ಈಗ ಸಿನಿಮಾ ಟೈಟಲ್ ಆಯ್ತು | Filmibeat Kannada

ಟಗರು ಸಿನಿಮಾ ಬಿಡುಗಡೆ ಆಗಿ ವಾರ ಕಳೆದರೂ ಪ್ರೇಕ್ಷಕರು ಮಾತ್ರ ಚಿತ್ರದ ಹ್ಯಾಂಗ್ ಓವರ್ ನಿಂದ ಹೊರಗೆ ಬಂದಿಲ್ಲ. ಅಷ್ಟರ ಮಟ್ಟಿಗೆ ಸಿನಿಮಾ ಹಾಗೂ ಅದರಲ್ಲಿನ ಪಾತ್ರಗಳು ಕಾಡುವುದಕ್ಕೆ ಶುರು ಮಾಡಿವೆ.

ಪ್ರೇಕ್ಷಕರಿಗೆ ಯಾವುದು ಇಷ್ಟವಾಗುತ್ತದೆಯೋ ಅದನ್ನೇ ನೀಡಬೇಕಿರುವುದು ಸಿನಿಮಾತಂಡ ಹಾಗೂ ನಿರ್ದೇಶಕರ ಕೆಲಸ. ಅದನ್ನ ತಿಳಿದುಕೊಂಡಿರುವ ಟಗರು ಟೀಂ ಒಂದು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಟಗರು ಚಿತ್ರದಲ್ಲಿ ತುಂಬಾ ಕಾಡುತ್ತಿರುವ ಪಾತ್ರಗಳ ಲೀಸ್ಟ್ ಮಾಡಿಕೊಂಡು ಮುಂದಿನ ದಿನಗಳಲ್ಲಿ ಮತ್ತೆ ಅದೇ ಪಾತ್ರಗಳನ್ನ ತೆರೆ ಮೇಲೆ ತರಲಿದ್ದಾರೆ.

ಚಂದನವನದಲ್ಲಿ ಮಿನುಗುತ್ತಿದೆ ಪುನರ್ವಸು

ಈಗಾಗಲೇ ಟಗರು2 ಸಿನಿಮಾ ಅನೌನ್ಸ್ ಆಗಿದೆ. ಮಹೂರ್ತವನ್ನು ಮಾಡಿ ಕೆಲ ಸೀನ್ ಗಳನ್ನ ಚಿತ್ರೀಕರಿಸಲಾಗಿದೆ. ಆದರೆ ಚಿತ್ರ ಬಿಡುಗಡೆ ನಂತರ ಅದರ ಬಗ್ಗೆ ಯಾವುದೇ ರೀತಿಯ ಟಾಕ್ ಇಲ್ಲ. ಸದ್ಯ ಚಿತ್ರತಂಡ ಟಗರು ಚಿತ್ರದಲ್ಲಿದ್ದ ವಿಶಿಷ್ಟ ಪಾತ್ರಗಳ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದೆ. ಹಾಗಾದರೆ ಯಾವೆಲ್ಲಾ ಹೆಸರಿನಲ್ಲಿ ಟೈಟಲ್ ಫಿಕ್ಸ್ ಆಗಿದೆ? ಯಾರು ಯಾವ ಚಿತ್ರವನ್ನ ನಿರ್ದೇಶನ ಮಾಡುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಟಗರು ಖಳನಾಯಕರ ಹೆಸರಲ್ಲಿ ಸಿನಿಮಾ

ಟಗರು ಸಿನಿಮಾ ಬಿಡುಗಡೆ ಆದ ನಂತ್ರ ಪ್ರೇಕ್ಷಕರು ಚಿತ್ರದಲ್ಲಿದ್ದ ಎಲ್ಲಾ ಪಾತ್ರಗಳನ್ನು ಮೆಚ್ಚಿಕೊಂಡಿದ್ದರು. ಸಿನಿಮಾ ಅಭಿಮಾನಿಗಳ ಅಭಿರುಚಿ ತಿಳಿದ ಟಗರು ತಂಡ ಅವರ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದೆ.

ಡಾಲಿ ಹೆಸರು ರಿಜಿಸ್ಟರ್

ಧನಂಜಯ ನಿರ್ವಹಿಸಿದ ಡಾಲಿ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಅದರಂತೆ ಸಿನಿಮಾ ಟೈಟಲ್ ಕೂಡ ಈ ಹಿಂದೆಯೇ ನೊಂದಣಿ ಆಗಿದ್ದು 'ದೊಡ್ಮನೆ ಹುಡ್ಗ' ಸಿನಿಮಾ ನಿರ್ಮಾಪಕ ಗೋವಿಂದು ಅವರ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುವ ಸಾಧ್ಯತೆಗಳಿವೆ.

ಚಿಟ್ಟೆ, ಕಾಕ್ರೋಚ್ ಶೀರ್ಷಿಕೆ ನೊಂದಣೆ

ಡಾಲಿ ಜೊತೆಯಲ್ಲಿ ವಶಿಷ್ಠ ನಿರ್ವಹಿಸಿದ 'ಚಿಟ್ಟೆ' ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿದ್ದು ಪಾತ್ರವನ್ನ ಸೃಷ್ಟಿ ಮಾಡಿರುವ ರೀತಿ ಅನೇಕರಿಗೆ ಇಷ್ಟವಾಗಿದೆ. ಆದ್ದರಿಂದ ಚಿಟ್ಟೆ ಹೆಸರಿನ ಟೈಟಲ್ ಹಾಗೂ 'ಕಾಕ್ರೋಚ್' ಕೂಡ ರಿಜಿಸ್ಟರ್ ಆಗಿದೆ.

'ಕಾನ್ಸ್ ಟೇಬಲ್' ಸರೋಜ

ಟಗರು ಚಿತ್ರದಲ್ಲಿ ಡಾಲಿಯ ಜೊತೆಯಲ್ಲಿ ಡಾಲಿಯ ಡಾರ್ಲಿಂಗ್ ಸರೋಜ ಪಾತ್ರಕ್ಕೂ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಸರೋಜ ಪಾತ್ರಧಾರಿಯ ಫೋಟೊಗಳು ಸಖತ್ ವೈರಲ್ ಆಗಿತ್ತು. ಈಗ 'ಕಾನ್ಸ್ ಟೇಬಲ್ ಸರೋಜ' ಎನ್ನುವ ಶೀರ್ಷಿಕೆ ಕೂಡ ನೊಂದಣಿ ಮಾಡಲಾಗಿದೆ.

ಸೂರಿ ಸಿನಿಮಾ ಜಾದು

ದುನಿಯಾ ಸೂರಿ ನಿರ್ದೇಶನದ ಸಿನಿಮಾಗಳೇ ಹಾಗೆ. ಚಿತ್ರದ ಜೊತೆಯಲ್ಲಿ ಅವರು ಸೃಷ್ಟಿ ಮಾಡಿದ ಪಾತ್ರಗಳು ಹಾಗೆ ಉಳಿದುಕೊಂಡು ಬಿಡುತ್ತವೆ. ಈ ಹಿಂದಿನ ಸಿನಿಮಾಗಳನ್ನ ತೆಗೆದುಕೊಂಡರೆ ಲೂಸ್ ಮಾದ, ದೋಪು, ಸಪ್ಪೆ, ಪೆಟ್ರೋಲ್, ಜಂಗ್ಲಿ, ಗಿಣಿ, ವಾಸ್ನೇ ಬಾಬು, ಮಿಠಾಯಿ ರಾಮ, ಚಪಾತಿ, ಬಾಂಡ್ ರವಿ, ಜಾಕಿ, ಕೆಮ್ಮರಾಜ, ರೆಕ್ಕೆ, ಕಡ್ಡಿಪುಡಿ, ಚಿಟ್ಟೆ, ಡಾಲಿ, ಕಾಕ್ರೋಚ್, ಬೇಬಿ ಕೃಷ್ಣ, ಡಿಚ್ಚಿ ಅಶ್ವಥ ಹೀಗೆ ಇವೆಲ್ಲವೂ ಪ್ರೇಕ್ಷಕರ ಮನಸ್ಸಿನಲ್ಲಿ ಇನ್ನೂ ಹಾಗೇ ಇವೆ.

ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಕಾಡುತ್ತಿರುವ 'ಟಗರು' ಪಾತ್ರಗಳು

English summary
Shivaraj kumar starerr tagaru movie Craze is high, Tagaru movie characters converted has a movie titles, Tagaru movie team members register titals name of Dolly, Chitte, cockroch and Constable Saroja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada