»   » 'ಟಗರು' ಹುಟ್ಟುಹಾಕಿದ ವಿವಾದ: ಸೂರಿ ವಿರುದ್ಧ ರೊಚ್ಚಿಗೆದ್ದ ಶಿವಣ್ಣ ಫ್ಯಾನ್ಸ್.!

'ಟಗರು' ಹುಟ್ಟುಹಾಕಿದ ವಿವಾದ: ಸೂರಿ ವಿರುದ್ಧ ರೊಚ್ಚಿಗೆದ್ದ ಶಿವಣ್ಣ ಫ್ಯಾನ್ಸ್.!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರಕ್ಕೆ ರಾಜ್ಯಾದ್ಯಂತ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಶಿವಣ್ಣ ಫ್ಯಾನ್ಸ್ ಎಂಜಾಯ್ ಮಾಡ್ತಿದ್ದಾರೆ. ಶಿವಣ್ಣ ಖದರ್, ವಿಲನ್ ಗಳ ಪೊಗರು ಹಾಗೂ ದುನಿಯಾ ಸೂರಿಯ ಡೈರೆಕ್ಷನ್ ಗೆ ಫಿದಾ ಆಗಿದ್ದಾರೆ.

ಈ ಮಧ್ಯೆ ನಿರ್ದೇಶಕ ಸೂರಿ ವಿರುದ್ಧ ಅಖಿಲ ಕರ್ನಾಟಕ ಡಾ ರಾಜ್ ಕುಮಾರ್ ಸೇನಾ ಸಮಿತಿ ಸೇರಿದಂತೆ ಶಿವರಾಜ್ ಕುಮಾರ್ ಅಭಿಮಾನಿಗಳು ಗರಂ ಆಗಿದ್ದಾರೆ. 'ಟಗರು' ಚಿತ್ರದಲ್ಲಿ ಖಳನಾಯಕರು ಶಿವಣ್ಣ ಅವರನ್ನ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ. ಇದು ಅಭಿಮಾನಿಗಳನ್ನ ಕೆರಳಿಸಿದೆ.

'ಟಗರು' ಚಿತ್ರದ ಪ್ರದರ್ಶನ ವೇಳೆ 'ಡಮ್ಮಿ ಲಾಂಗ್' ಪ್ರದರ್ಶಿಸಿದ ಅಭಿಮಾನಿ.!

ಇದರ ಪರಿಣಾಮ ನಿರ್ದೇಶಕ ಸೂರಿ ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಆದ್ರೆ, ಸ್ವತಃ ಶಿವರಾಜ್ ಕುಮಾರ್ ಅವರೇ ಈ ಡೈಲಾಗ್ ಗೆ ಕತ್ತರಿ ಹಾಕದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈ ವಿವಾದ ಎಲ್ಲಿಂದ ಶುರುವಾಯಿತು.? ಮುಂದೆ ಓದಿ....

ಕೆಟ್ಟ ಪದದಿಂದ ನಿಂದಿಸುವ ಖಳನಾಯಕರು

'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಪೊಲೀಸ್. ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರು. ಎರಡ್ಮೂರು ದೃಶ್ಯದಲ್ಲಿ ಶಿವಣ್ಣಗೆ ಇಬ್ಬರು ಕೆಟ್ಟ ಪದ ಬಳಸಿ ಬೈಯುತ್ತಾರೆ. ಈ ಮಾತುಗಳು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಈ 5 ಡೈಲಾಗ್ ಕೇಳಿದ್ರೆ ಸಾಕು, 'ಟಗರು' ಏನೂ ಅಂತ ಗೊತ್ತಾಗುತ್ತೆ.!

ಶಿವಣ್ಣ ಪ್ರತಿಕ್ರಿಯೆ

''ಸಹಜವಾಗಿ ಹೀರೋಗಳು ವಿಲನ್ ಬೈಯ್ದಾಗ ಚಪ್ಪಾಳೆ ಹೊಡಿತೀರಾ. ಶಿಳ್ಳೆ ಹೊಡಿತೀರಾ....ಹೀರೋಗೆ ವಿಲನ್ ಬೈದ್ರೆ ತಪ್ಪಾಗುತ್ತಾ.? ಇದನ್ನ ಯಾಕೆ ಸಹಿಸಲ್ಲ'' ಎಂದು ಅಭಿಮಾನಿಗಳನ್ನ ನಟ ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ.

ಸಾರ್ವಜನಿಕವಾಗಿ ಕ್ಷಮೆ ಕೇಳ್ಬೇಕು

ದುನಿಯಾ ಸೂರಿ ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ ಸೂರಿ ಮುಖಕ್ಕೆ ಮಸಿ ಬಳಿಯುತ್ತೇವೆ. ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಎಂದು ಒತ್ತಾಯಿಸಿ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ವಿಟ್ಟರ್ ವಿಮರ್ಶೆ: 'ಟಗರು' ಮಾರ್ನಿಂಗ್ ಶೋ ನೋಡಿದ ಪ್ರೇಕ್ಷಕರು ಖುಷಿಯೋ ಖುಷಿ

'ಕಡ್ಡಿಪುಡಿ' ವೇಳೆಯೂ ಪ್ರತಿಭಟನೆ

'ಟಗರು' ಚಿತ್ರಕ್ಕೂ ಮುಂಚೆ ದುನಿಯಾ ಸೂರಿ ಮತ್ತು ಶಿವರಾಜ್ ಕುಮಾರ್ ಜೋಡಿಯಲ್ಲಿ ಮೂಡಿ ಬಂದಿದ್ದ 'ಕಡ್ಡಿಪುಡಿ' ಚಿತ್ರದ ವೇಳೆಯೂ ಸೂರಿ ವಿರುದ್ಧ ಪ್ರತಿಭಟನೆ ನಡೆದಿತ್ತು. ಚಿತ್ರದಲ್ಲಿ ಶಿವಣ್ಣ ಅವರನ್ನ ಅವಹೇಳನಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಖಂಡಿಸಿದ್ದರು.

ಸಮರವೋ ಸಂಧಾನವೋ

ಒಂದ್ಕಡೆ ಶಿವಣ್ಣ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ. ಮತ್ತೊಂದೆಡೆ ಶಿವಣ್ಣ ಅಭಿಮಾನಿಗಳನ್ನ ಪ್ರಶ್ನಿಸಿದ್ದಾರೆ. ಹೀಗಾಗಿ, ಈ ಪ್ರತಿಭಟನೆ ಹೀಗೆ ಮುಂದುವರೆಯುತ್ತಾ ಅಥವಾ ಶಿವರಾಜ್ ಕುಮಾರ್ ಪ್ರತಿಕ್ರಿಯೆ ಕೇಳಿ ಫ್ಯಾನ್ಸ್ ಸುಮ್ಮನಾಗ್ತಾರ ಕುತೂಹಲ ಮೂಡಿಸಿದೆ.

ಟಗರು ವಿಮರ್ಶೆ : ಸೂರಿಯ 'ಸುಕ್ಕ' ಕುಡಿದ ಟಗರು ತುಂಬಾ ಪೊಗರು!

English summary
Kannada actor Shivarajkumar fans are angry with director Suri. Because of the allegations that Shiva Rajkumar has been abused in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada