»   » ಅರಬ್ ದೇಶದಲ್ಲಿ ಪೋಗರು ಪ್ರದರ್ಶಿಸಿದ ಶಿವಣ್ಣನ 'ಟಗರು'

ಅರಬ್ ದೇಶದಲ್ಲಿ ಪೋಗರು ಪ್ರದರ್ಶಿಸಿದ ಶಿವಣ್ಣನ 'ಟಗರು'

Posted By:
Subscribe to Filmibeat Kannada

ಈಗಾಗಲೇ 'ಟಗರು' ಸಿನಿಮಾದ ಟೀಸರ್.. ಅದರಲ್ಲಿಯೂ ಟೀಸರ್ ನಲ್ಲಿ ಬರುವ ಮ್ಯೂಸಿಕ್ ಎಲ್ಲರನ್ನು ಹುಚ್ಚೆಬ್ಬಿಸಿದೆ. ಆದರೆ ಇದೀಗ ಅರಬ್ ದೇಶದಲ್ಲಿಯೂ ಈ 'ಟಗರು' ಸದ್ದು ಮಾಡಿದೆ.

ಹುಷಾರು... ಈ 'ಟಗರು'ಗೆ ಮೈ ತುಂಬ ಸಿಕ್ಕಾಪಟ್ಟೆ ಪೋಗರು

'ಟಗರು' ಸಿನಿಮಾದ ಟೀಸರ್ ಈಗ ಮಸ್ಕತ್ ನಲ್ಲಿ ರಿಲೀಸ್ ಆಗಿದೆ. ಕನ್ನಡ ರಾಜ್ಯೋತ್ಸವ ವಿಶೇಷವಾಗಿ ಮತ್ತು ಡಾ.ರಾಜ್ ಸ್ಮರಣಾರ್ಥ ನವೆಂಬರ್ 11ರಂದು ಅಲ್ಲಿ 'ನಿನ್ನ ಮರೆಯಲಾರೆ' ಎಂಬ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದಾರೆ. ಜೊತೆಗೆ ಗಾಯಕ ವಿಜಯ ಪ್ರಕಾಶ್ ಅಣ್ಣವ್ರ ಹಾಡನ್ನು ಹಾಡಿದ್ದಾರೆ.

'Tagaru' movie teaser released in muscat.

ಇನ್ನು ಕಾರ್ಯಕ್ರಮದಲ್ಲಿ 'ಟಗರು' ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಅಲ್ಲಿನ ಕನ್ನಡಿಗರು ಕೂಡ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಮೂಲಕ ಅರಬ್ ದೇಶದಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಟೀಸರ್ ಎಂಬ ಹೆಗ್ಗಳಿಕೆಯನ್ನು 'ಟಗರು' ಪಡೆದಿದೆ. ಅಂದಹಾಗೆ, ಸೂರಿ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲಿದೆ.

English summary
watch video: Shiva Rajkumar's 'Tagaru' movie teaser released in muscat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada