»   » 'ಟಗರು' ಟೀಸರ್ ರಿಲೀಸ್ ಮಾಡಲಿದ್ದಾರೆ ಶಿವಣ್ಣನ ಅಭಿಮಾನಿಗಳು!

'ಟಗರು' ಟೀಸರ್ ರಿಲೀಸ್ ಮಾಡಲಿದ್ದಾರೆ ಶಿವಣ್ಣನ ಅಭಿಮಾನಿಗಳು!

Posted By:
Subscribe to Filmibeat Kannada
'ಟಗರು' ಟೀಸರ್ ರಿಲೀಸ್ ಮಾಡಲಿದ್ದಾರೆ ಶಿವಣ್ಣನ ಅಭಿಮಾನಿಗಳು! | Filmibeat Kannada

ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನಿಮಾದ ಟೀಸರ್ ಬಿಡುಗಡೆಯ ಕಾರ್ಯಕ್ರಮಕ್ಕೆ ಸಖತ್ ಪ್ಲಾನ್ ಮಾಡಲಾಗಿದೆ. ವಿಶೇಷ ಅಂದರೆ ಈ ಪ್ಲಾನ್ ಮಾಡಿರುವುದು 'ಟಗರು' ಟೀಂ ಅಲ್ಲ.. ಶಿವಣ್ಣನ ಅಭಿಮಾನಿಗಳು.

ಶಿವಣ್ಣನ ಹೊಸ ಚಿತ್ರದ ಮುಹೂರ್ತಕ್ಕೆ 'ದೊಡ್ಮನೆ' ಅತಿಥಿಗಳು.! ಯಾರದು?

ಸಾಮಾನ್ಯವಾಗಿ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮಗಳನ್ನು ಚಿತ್ರತಂಡವೇ ಮಾಡುತ್ತದೆ. ಆದರೆ 'ಟಗರು' ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮದ ಆಯೋಜನೆಯನ್ನು ಶಿವಣ್ಣನ ಅಭಿಮಾನಿಗಳು ಮಾಡಿದ್ದಾರೆ. 'ರಾಜ್ ಡೈನಾಸ್ಟಿ' ಮತ್ತು 'ಶಿವು ಅಡ್ಡ' ತಂಡಗಳು 'ಟಗರು' ಟೀಸರ್ ಬಿಡುಗಡೆ ಕಾರ್ಯಕ್ರವನ್ನು ನಡೆಸಲಿದೆ.


'Tagaru' movie teaser will be releaseing on November 7.

ಅಂದಹಾಗೆ, ಈ ಕಾರ್ಯಕ್ರಮದಲ್ಲಿ ಅಣ್ಣಾವ್ರ ಮೂರು ಮಕ್ಕಳು ಹಾಜರಾಗುತ್ತಾರೆ. ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಬಂದು ಶಿವಣ್ಣನಿಗೆ ಶುಭ ಹಾರೈಸಲಿದ್ದಾರೆ. 'ಟಗರು' ಟೀಸರ್ ರಿಲೀಸ್ ಕಾರ್ಯಕ್ರಮ ನವೆಂಬರ್ 7ಕ್ಕೆ ಟೌನ್ ಹಾಲ್ ನಲ್ಲಿ ಸಂಜೆ 6 ಗಂಟೆಗೆ ನೆರವೇರಲಿದೆ.


'ಟಗರು' ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. 'ಕಡ್ಡಿಪುಡಿ' ಬಳಿಕ ಮತ್ತೆ ಇಲ್ಲಿ ಶಿವಣ್ಣ ಮತ್ತು ಸೂರಿ ಒಂದಾಗಿದ್ದಾರೆ. ಕೆ.ಪಿ.ಶ್ರೀಕಾಂತ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

English summary
Shiva Rajkumar's 'Tagaru' movie teaser will be out on November 7. ಟಗರು ಸಿನಿಮಾದ ಟೀಸರ್ ನವೆಂಬರ್ 7 ಕ್ಕೆ ಬಿಡುಗಡೆಯಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X