»   » ಮಸ್ಕತ್, ದುಬೈನಲ್ಲಿ ಶಿವಣ್ಣನ 'ಟಗರು' ಅಬ್ಬರ

ಮಸ್ಕತ್, ದುಬೈನಲ್ಲಿ ಶಿವಣ್ಣನ 'ಟಗರು' ಅಬ್ಬರ

Posted By:
Subscribe to Filmibeat Kannada
ದುಬೈ ಗೆ ಹಾರಲಿದೆ ಟಗರು ತಂಡ | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಧನಂಜಯ್ ಅಭಿನಯದ 'ಟಗರು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇತ್ತೀಚಿಗಷ್ಟೆ ಐವತ್ತು ದಿನ ಪೂರೈಸಿದೆ. ಈಗಾಗಲೇ ಅಮೇರಿಕಾ ಅಂತಹ ದೇಶದಲ್ಲಿ ಸೂಪರ್ ಹಿಟ್ ಆಗಿರುವ 'ಟಗರು 'ಈಗ ಮತ್ತಷ್ಟು ರಾಷ್ಟ್ರಗಳಲ್ಲಿ ಸ್ಕ್ರೀನಿಂಗ್ ಆಗಲಿದೆ.

ಹೌದು, ದುಬೈ, ಮಸ್ಕತ್ ಹಾಗೂ ಶಾರ್ಜಾ ನಾಡಲ್ಲಿ ಕನ್ನಡದ ಸಿನಿಮಾ ಬಿಡುಗಡೆಯಾಗುತ್ತಿದೆ. ಏಪ್ರಿಲ್ 26 ರಂದು ಮಸ್ಕತ್ ನಲ್ಲಿ 'ಟಗರು' ಪ್ರದರ್ಶನವಾದ್ರೆ, ಏಪ್ರಿಲ್ 27 ರಂದು ಶಾರ್ಜಾ ಮತ್ತು ದುಬೈನಲ್ಲಿ ಸ್ಕ್ರೀನಿಂಗ್ ಆಗಲಿದೆ.

ಈ ಮೂಲಕ ಕರ್ನಾಟಕದ ಕನ್ನಡಿಗರು ನೋಡಿ ಖುಷಿ ಪಟ್ಟಿದ್ದ 'ಟಗರು' ಸಿನಿಮಾವನ್ನ ಜಗತ್ತಿನಾದ್ಯಂತ ಇರುವ ಕನ್ನಡಿಗರು ನೋಡುವಂತಹ ಅವಕಾಶ ಸಿಕ್ಕಿದೆ.

50 ದಿನ ಪೂರೈಸಿದ 'ಟಗರು' : ಅಭಿಮಾನಿಗಳ ಜೊತೆಗೆ ಯಶಸ್ವಿ ಕಾರ್ಯಕ್ರಮ

Tagaru movie will releasing in Muscat, Dubai and Sharjah

ಫೆಬ್ರವರಿ 23 ರಂದು ತೆರೆಕಂಡಿದ್ದ 'ಟಗರು' 50 ದಿನ ಪೂರೈಸಿ ಶತದಿನದತ್ತ ಮುನ್ನುಗ್ಗುತ್ತಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲೂ ಸಖತ್ ಸದ್ದು ಮಾಡಿತ್ತು. ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ರೆ, ಧನಂಜಯ್ ಮತ್ತು ವಸಿಷ್ಠ ಸಿಂಹ ಗ್ಯಾಂಗಸ್ಟರ್ ಪಾತ್ರಗಳಲ್ಲಿ ಅಬ್ಬರಿಸಿದ್ದರು.

ಇವರ ಜೊತೆಯಲ್ಲಿ ಮಾನ್ವಿತಾ ಹರೀಶ್, ಭಾವನಾ, ಡಾನ್ ಅಂಕಲ್, ಕಾನ್ಸ್ ಟೇಬಲ್ ಸರೋಜಾ, ಕಾಕ್ರೋಚ್ ಅಂತಹ ಪಾತ್ರಗಳು ನೋಡುಗರಿಗೆ ಕಿಕ್ ನೀಡಿದ್ದವು.

in pics: ಟಗರು ಚಿತ್ರದ ಯಶಸ್ಸಿನ ಸಂಭ್ರಮ

ಇನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾ ನೋಡಿ ಫುಲ್ ಥ್ರಿಲ್ ಆಗಿದ್ದರು. ಟಗರು ಸಿನಿಮಾ ನೋಡಿ ದುನಿಯಾ ಸೂರಿಗೆ ತೆಲುಗಿನಲ್ಲಿ ಸಿನಿಮಾ ಮಾಡಲು ಆಫರ್ ನೀಡಿದ್ರು. ಮಾನ್ವಿತಾ ಹರೀಶ್ ಗೆ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಅಡ್ವಾನ್ಸ್ ಕೂಡ ನೀಡಿದ್ದರು.

English summary
Kannada actor Shiva rajakumar starrer 'Tagaru' which was released on the 23rd of February, has completed 50 day run. Meanwhile, the film is all set to release in Muscat, Dubai and Sharjah. While, the film is releasing in Muscat on the 26th of April, the film will be simultaneously released in Dubai and Sharjah on the 27th of April.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X