For Quick Alerts
  ALLOW NOTIFICATIONS  
  For Daily Alerts

  ಚಿತ್ರ ಪ್ರದರ್ಶನದ ವೇಳೆ ಎರಡು ಮಧ್ಯಂತರ ಬೇಕೇ? ಸ್ಯಾಂಡಲ್‌ವುಡ್ ನಿಲುವೇನು?

  |

  ಚಿತ್ರಮಂದಿರಗಳಲ್ಲಿ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರತಿಷ್ಠೆಗೆ ಬಿದ್ದಂತೆ ಕಾಣುತ್ತಿದೆ. ಆರಂಭದಲ್ಲಿ ಶೇಕಡಾ 100ರಷ್ಟು ಆಸನ ಭರ್ತಿಯೊಂದಿಗೆ ಪ್ರದರ್ಶನ ಮಾಡಲು ಕೇಂದ್ರ ಒಪ್ಪಿದರೂ ಕರ್ನಾಟಕ ಸರ್ಕಾರ ತಡೆ ನೀಡಿತು. ಎಲ್ಲ ವಲಯಗಳಿಗೂ 100 ಪರ್ಸೆಂಟ್ ಅವಕಾಶ ಕೊಟ್ಟರೂ ಚಿತ್ರಮಂದಿರಕ್ಕೆ ಮಾತ್ರ ಏಕಿಲ್ಲ ಎಂದು ಸ್ಯಾಂಡಲ್‌ವುಡ್ ಸ್ಟಾರ್ಸ್ ಪ್ರತಿಭಟಿಸಿದರು.

  ಚಿತ್ರರಂಗದ ಒತ್ತಡ ಹಾಕಿದ ಸರ್ಕಾರ ಸಂಜೆ ವೇಳೆಗೆ ಆರೋಗ್ಯ ಸಚಿವ ಡಾ ಸುಧಾಕರ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ತಮ್ಮ ತೀರ್ಮಾನ ಬದಲಿಸಿದರು. ಒತ್ತಡಕ್ಕೆ ಮಣಿದರೂ ಮಾರ್ಗಸೂಚಿಯಲ್ಲಿ ತನ್ನ ಪ್ರತಿಷ್ಠೆಯನ್ನು ಪ್ರದರ್ಶಿಸುವ ಕೆಲಸ ಮಾಡಿದೆ. ಸಿನಿಮಾ ಪ್ರದರ್ಶನದ ವೇಳೆ ಎರಡು ಮಧ್ಯಂತರ ಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ.

  ಚಿತ್ರಮಂದಿರಗಳಿಗೆ ಹೊಸ ಮಾರ್ಗಸೂಚಿ: 2 ಬಾರಿ ಮಧ್ಯಂತರಕ್ಕೆ ಸೂಚನೆ

  ಸರ್ಕಾರದ ಈ ನಿರ್ಧಾರ ಅವೈಜ್ಞಾನಿಕವಾಗಿದೆ ಎಂಬ ಅಭಿಪ್ರಾಯ ಮೂಡಿದೆ. ಎರಡೂವರೆ ಗಂಟೆ ಪ್ರೇಕ್ಷಕರನ್ನು ಹಿಡಿದಿಡುವುದೇ ದೊಡ್ಡ ಸವಾಲಿನ ಕೆಲಸ. ಎರಡು ಮಧ್ಯಂತರ ಕೊಟ್ಟರೆ ಸಿನಿಮಾದ ರೋಚಕತೆ ಕಾಪಾಡಿಕೊಳ್ಳುವುದು ಕಷ್ಟ. ಒಂದೇ ಬ್ರೇಕ್ ಎಂದು ಅದಕ್ಕೆ ತಕ್ಕಂತೆ ನಿರೂಪಣೆ ಮಾಡಲಾಗಿರುತ್ತದೆ. ದಿಢೀರ್ ಅಂತ ಎರಡು ಬ್ರೇಕ್ ಅಂದ್ರೆ ಸಾಧ್ಯವಿಲ್ಲ, ಜೊತೆಗೆ ತಾಂತ್ರಿಕವಾಗಿ ಅದಕ್ಕೆ ಸಮಯ ಬೇಕಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಸಿನಿಮಾ ಪ್ರದರ್ಶನದ ವೇಳೆ ನಿಜಕ್ಕೂ ಎರಡು ಮಧ್ಯಂತರ ಸಾಧ್ಯನಾ? ಈ ಬಗ್ಗೆ ಸ್ಯಾಂಡಲ್‌ವುಡ್ ಏನು ಹೇಳುತ್ತಿದೆ? ಮುಂದೆ ಓದಿ....

  ಫೆಬ್ರವರಿ 1 ರಿಂದ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಅವಕಾಶ: ನೂತನ ಮಾರ್ಗಸೂಚಿಯಲ್ಲಿ ಏನಿದೆ?

  ಸಿದ್ಧವಾಗಿರುವ ಚಿತ್ರಗಳಿಗೆ ಕಷ್ಟ

  ಸಿದ್ಧವಾಗಿರುವ ಚಿತ್ರಗಳಿಗೆ ಕಷ್ಟ

  ''ಎರಡು ಮಧ್ಯಂತರ ನೀಡುವುದು ಕಷ್ಟ. ಒಂದು ಗಂಟೆ ಅಥವಾ ಒಂದು ಕಾಲು ಗಂಟೆಗೆ ಇಂಟರ್‌ವಲ್ ಅಂತ ಇರುತ್ತೆ. ಎರಡು ಬ್ರೇಕ್ ಬೇಕು ಅಂದ್ರೆ ಮುಕ್ಕಾಲು ಗಂಟೆಗೆ ಒಂದು ಸಲ ಮತ್ತೆ ಮುಕ್ಕಾಲು ಗಂಟೆಗೆ ಕೊಡೋಕೆ ಆಗುತ್ತಾ? ಅಥವಾ ಒಂದು ಗಂಟೆಗೆ ಕೊಟ್ಟು ಕ್ಲೈಮ್ಯಾಕ್ಸ್‌ಗೆ ಮುಂಚೆ ಇನ್ನೊಂದು ಬ್ರೇಕ್ ಸಾಧ್ಯವಿಲ್ಲ. ಬಹುಶಃ ಇದನ್ನು ಪುನರ್‌ ಪರಿಶೀಲಿಸಬಹುದು. ನಮ್ಮ ಚಿತ್ರಕ್ಕೂ ಇದು ಸಾಧ್ಯವಿಲ್ಲ'' ಎಂದು ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

  2 ಗಂಟೆಗೆ ಚಿತ್ರಕ್ಕೆ ಒಂದೇ ಇಂಟರ್‌ವಲ್ ಸಾಕು

  2 ಗಂಟೆಗೆ ಚಿತ್ರಕ್ಕೆ ಒಂದೇ ಇಂಟರ್‌ವಲ್ ಸಾಕು

  ಈ ಕುರಿತು ಮಾತನಾಡಿದ ಪ್ರದರ್ಶಕ ವಲಯದ ಅಧ್ಯಕ್ಷ ಕೆವಿ ಚಂದ್ರಶೇಖರ್ ''ಸಭೆಯಲ್ಲಿ ನಾವು ಚರ್ಚಿಸಿದಂತೆ ಒಂದು ಗಂಟೆಗೊಮ್ಮೆ ಬ್ರೇಕ್ ಕೊಡಬೇಕು. ಆದರೆ, ನಮ್ಮ ಬಳಿಯಿರುವ ಚಿತ್ರಗಳು ಎರಡು ಗಂಟೆ ಹತ್ತು ನಿಮಿಷ ಇರುತ್ತೆ. ಹಾಗಾಗಿ, ಒಂದೇ ಬ್ರೇಕ್ ಸಾಕು. ಮೂರು ಗಂಟೆ ಸಿನಿಮಾ ಬಂದ್ರೆ ಎರಡು ಬ್ರೇಕ್ ಕೊಡ್ತೀವಿ, ಈಗ ಅದರ ಅವಶ್ಯಕತೆ ಇಲ್ಲವಲ್ಲ'' ಎಂದಿದ್ದಾರೆ.

  ತಾಂತ್ರಿಕವಾಗಿ ಎರಡು ಬ್ರೇಕ್ ಹೇಗೆ ಮಾಡಬಹುದು?

  ತಾಂತ್ರಿಕವಾಗಿ ಎರಡು ಬ್ರೇಕ್ ಹೇಗೆ ಮಾಡಬಹುದು?

  ಎರಡು ಮಧ್ಯಂತರ ಕೊಡಬೇಕು ಎನ್ನುವುದಾರೇ ಅದನ್ನು ಪ್ರೊಜೆಕ್ಟರ್ ಆಪರೇಟರ್ (service provider) ನಿಯಂತ್ರಿಸಬೇಕಾಗುತ್ತದೆ. ಈ ಸಮಯಕ್ಕೆ ಶೋ ಆರಂಭ, ಮಧ್ಯಂತರ, ಜಾಹೀರಾತು, ಸೆನ್ಸಾರ್ ಮಂಡಳಿಯ ಜಾಹೀರಾತು ಎಲ್ಲವೂ ಮೊದಲೇ ನಿಗದಿಯಾಗಿರುತ್ತದೆ, ಅದಕ್ಕೆ ತಕ್ಕಂತೆ ಆಪರೇಟ್ ಮಾಡ್ತಾರೆ. ನಮ್ಮಲ್ಲಿ ಒಂದು ಸಲ ಪ್ರೊಜೆಕ್ಟರ್ ನಿಲ್ಲಿಸಿದರೆ ಮತ್ತೆ ಶುರುವಾಗುವುದಕ್ಕೆ 15 ನಿಮಿಷಬೇಕು, ಒಮ್ಮೊಮ್ಮೆ ಮೊದಲಿನಿಂದ ಶುರುವಾಗುತ್ತದೆ. ಹಾಗಾಗಿ, ಇದನ್ನು ಚಿತ್ರಮಂದಿರ ಅಥವಾ ನಿರ್ಮಾಪಕರು ನಿಯಂತ್ರಿಸಲಾಗುವುದಿಲ್ಲ ಎಂದು ಕೆವಿ ಚಂದ್ರಶೇಖರ್ ತಿಳಿಸಿದ್ದಾರೆ.

  ಈ ಮಟ್ಟಕ್ಕೆ ನೀವೆಲ್ಲಾ ಸಪೋರ್ಟ್ ಮಾಡ್ತೀರ ಅಂತ ಅಂದುಕೊಂಡಿರಲಿಲ್ಲ | Filmibeat Kannada
  ಸರ್ಕಾರದ ಮಾರ್ಗಸೂಚಿ ಎಲ್ಲಿ ಪಾಲನೆ ಆಗುತ್ತದೆ?

  ಸರ್ಕಾರದ ಮಾರ್ಗಸೂಚಿ ಎಲ್ಲಿ ಪಾಲನೆ ಆಗುತ್ತದೆ?

  ಹಾಗಾದ್ರೆ, ಪ್ರತಿ ಸಿನಿಮಾಗೂ ಎರಡು ಬ್ರೇಕ್ ಕೊಡಲೇಬೇಕು ಎಂಬ ಕಡ್ಡಾಯ ಆದೇಶವಿಲ್ಲ. ಸಂದರ್ಭಕ್ಕೆ ಅನುಗುಣವಾಗಿ ಮಾರ್ಗಸೂಚಿಯನ್ನು ಸ್ವೀಕರಿಸಬಹುದು. ಪ್ರಸ್ತುತ ಯಾವುದೇ ಕನ್ನಡ ಸಿನಿಮಾ ಮೂರು ಗಂಟೆಗೆ ಇರಲ್ಲ. ಎರಡು ಗಂಟೆಗೆ ಮೇಲೆ ಹತ್ತು ಅಥವಾ ಇಪ್ಪತ್ತು ನಿಮಿಷ ಇರಬಹುದು. ಇನ್ನು ಶುಕ್ರವಾರ ರಿಲೀಸ್ ಚಿತ್ರಗಳ ಪ್ರದರ್ಶನದಲ್ಲಿ ಒಂದೇ ಬ್ರೇಕ್ ನೀಡಲಾಗಿತ್ತು. ಹಾಗಾದ್ರೆ, ಸರ್ಕಾರದ ಮಾರ್ಗಸೂಚಿ ಬರಿ ಕಾಗದ ಮೇಲಷ್ಟೇ ಇರಲಿದ್ಯಾ ಅಥವಾ ಮತ್ತೊಮ್ಮೆ ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾ?

  English summary
  Karnataka govt ask cinema halls, movie theatres to have two intervals per show as per new SOP, but practically is it possible know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X